Friday, September 20, 2024

ಪ್ರಾಯೋಗಿಕ ಆವೃತ್ತಿ

ಶಾಲಾ ದಿನಗಳ ಮೆಲುಕು ಹಾಕುವಂತೆ ಮಾಡಿದ ಸ್ನೇಹ ಕೂಟ

ಮಳವಳ್ಳಿಯ ಪ್ರವಾಸಿ ಮಂದಿರದಲ್ಲಿ ಇಂದು ಸಂಭ್ರಮ ಮನೆ ಮಾಡಿತ್ತು.ಕಳೆದ ಇಪ್ಪತ್ತೆರಡು ವರ್ಷಗಳ ಹಿಂದೆ ಮಳವಳ್ಳಿ ತಾಲ್ಲೂಕಿನ ಶಿಂಷಾಪುರ ಪ್ರೌಢಶಾಲೆಯಲ್ಲಿ ಓದಿದ್ದವರೆಲ್ಲ ಸೇರಿ ಸ್ನೇಹ ಕೂಟ ಆಯೋಜಿಸಿದ್ದರು.

ಹಳೆಯ ವಿದ್ಯಾರ್ಥಿಗಳಿಗೆ ಪಾಠ ಕಲಿಸಿದ್ದ ಗುರುಗಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಾವು ಪಾಠ ಹೇಳಿ ಕೊಟ್ಟ ವಿದ್ಯಾರ್ಥಿಗಳು ತಮ್ಮನ್ನು ಆಧರಿಸಿ, ಗೌರವಿಸಿದ್ದನ್ನು ಕಂಡ ಗುರುಗಳ ಮೊಗದಲ್ಲಿ ಸಾರ್ಥಕತೆಯ ಭಾವ ಕಂಡು ಬಂದರೆ,ವಿದ್ಯಾರ್ಥಿಗಳ ಮೊಗದಲ್ಲಿ ಧನ್ಯತೆಯ ಭಾವ ಕಂಡಿತು.

ತಾಲ್ಲೂಕಿನ ಶಿಂಷಾಪುರ ಪ್ರೌಢಶಾಲೆಯಲ್ಲಿ 1999- 2000 ನೇ ಸಾಲಿನ ವಿದ್ಯಾರ್ಥಿಗಳೆಲ್ಲ ಸೇರಿ ಆಯೋಜಿಸಿದ್ದ ಸ್ನೇಹಕೂಟದಲ್ಲಿ ಗುರು-ಶಿಷ್ಯರ ಸಮಾಗಮ,ಸಂಭ್ರಮ-ಸಡಗರದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ವಿಶ್ರಾಂತ ಶಿಕ್ಷಕರಾದ ವೆಂಕಟರಮಣಶೆಟ್ಟಿ, ಚಿಕ್ಕಸ್ವಾಮಿ, ಫಕ್ರುದ್ದೀನ್ ಸಾಬ್, ವಿ.ಕೆ.ಗೋಪಾಲ್ ಅವರನ್ನು ವಿದ್ಯಾರ್ಥಿಗಳ ಪರವಾಗಿ ನಿವೃತ್ತ ಪ್ರಾಂಶುಪಾಲರಾದ ಎಂ.ವಿ. ಕೃಷ್ಣ ಅವರು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಎಂ.ವಿ.ಕೃಷ್ಣರವರು, ಶಿಂಷಾಪುರ ಶಾಲೆಯ 1999-2000 ಸಾಲಿನ ವಿದ್ಯಾರ್ಥಿಗಳು ತಮಗೆ ಪಾಠ ಕಲಿಸಿ ಉತ್ತಮ ಜೀವನ ಸಾಗಿಸಲು ಕಾರಣರಾದ ಗುರುಗಳನ್ನು ಗೌರವಿಸಿ ಸನ್ಮಾನಿಸುವ ಮೂಲಕ ಅವರ ಗುರುಭಕ್ತಿ ಸಾಬೀತು ಮಾಡಿದ್ದಾರೆ. ಉತ್ತಮ ಸಂಸ್ಕಾರ ಪಡೆದವರಿಂದ ಇಂತಹ ಸಮಾರಂಭ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು.

ಅಂದಿನ ಶಾಲಾ ಸಹಪಾಠಿಗಳೆಲ್ಲ ಒಂದೆಡೆ ಸೇರಿ ತಮ್ಮ ಶಾಲಾ ದಿನಗಳನ್ನು ಹಾಗೂ ಗುರುಗಳೊಂದಿಗಿನ ಕಲಿಕೆಯ ದಿನಗಳನ್ನು ಮೆಲುಕು ಹಾಕುವ ಮೂಲಕ ಸಾರ್ಥಕ ಪಡಿಸಿಕೊಂಡಿದ್ದೀರಿ. ನಿಮಗೆಲ್ಲ ಶುಭ ಹಾರೈಸುತ್ತೇನೆ ಎಂದರು.

ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಕಳೆದ ಶಾಲಾದಿನಗಳ ಒಡನಾಟ, ಶಿಕ್ಷಣದ ಅನುಭವಗಳನ್ನು ಕುರಿತು ಮೆಲಕು ಹಾಕಿದರು ಕಾರ್ಯಕ್ರಮದಲ್ಲಿ ದಬ್ಬಳ್ಳಿ ಶಿವಣ್ಣ, ಡಾ.ರಾಜಣ್ಣ ಡಿಎಸ್ಎಸ್ ನ ಯತೀಶ್ ದ್ಯಾವಪಟ್ಟಣ, ಪವನ್ ಮಲ್ಲಿನಾಥಪುರ,ಈಗಿನ ದಬ್ಬಹಳ್ಳಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!