Thursday, September 19, 2024

ಪ್ರಾಯೋಗಿಕ ಆವೃತ್ತಿ

ದಸರಾ| ಚಾಮುಂಡೇಶ್ವರಿ- ಮಹಿಷಾಸುರ ವಿವಾದ : ಐತಿಹಾಸಿಕ – ಪೌರಾಣಿಕ ಪಾತ್ರಗಳ ಘರ್ಷಣೆ…….

ವಿವೇಕಾನಂದ ಎಚ್. ಕೆ.

ಹೀಗೆ ಐತಿಹಾಸಿಕ ಮತ್ತು ಪೌರಾಣಿಕ ವಿಷಯಗಳ ಅನೇಕ ವಿವಾದಗಳು ಇನ್ನು ಮುಂದೆ ನಿರಂತರ…..

ಸತ್ಯಗಳು ಸಮಾಧಿಯಾಗುತ್ತಾ ಇತಿಹಾಸ ಧ್ವಂಸವಾಗುತ್ತಿರುವ ಕಾಲಘಟ್ಟದಲ್ಲಿ ನಾವುಗಳು……….

ಭಾರತ ಇತಿಹಾಸದ ಈ ಸಂಘರ್ಷಗಳಿಂದ ಭಾರತೀಯ ಸಂಸ್ಕೃತಿ ಪುನರ್ ರೂಪಿತವಾಗುತ್ತಿದೆಯೇ ?

ಇದು ಉತ್ತಮ ಬೆಳವಣಿಗೆಯೇ ?
ಅಥವಾ ವಿನಾಶಕಾರಿಯೇ ?
ಅಥವಾ ಪ್ರಗತಿಪರ ಚಿಂತನೆಯೇ ?

ಅಂಬೇಡ್ಕರ್ ವಾದ, ಮನುವಾದ, ಎಡಪಂಥೀಯ ವಾದ ಮತ್ತು ಬಲಪಂಥೀಯ ವಾದದ ದ್ವೇಷಮಯ ವಾತಾವರಣದಿಂದ ಮೂಡುತ್ತಿರುವ ಹೊಸ ಹೊಸ ಅರ್ಥಗಳು………

ರಾಮ – ರಾವಣರ ಮುಖಾಮುಖಿ,
ಬುದ್ದ – ಶಂಕರರ ಮುಖಾಮುಖಿ,
ಬಸವ – ರೇಣುಕಾಚಾರ್ಯ – ಬ್ರಾಹ್ಮಣ್ಯದ ಮುಖಾಮುಖಿ,
ಅಂಬೇಡ್ಕರ್ – ಗಾಂಧಿ ಮುಖಾಮುಖಿ,
ಗಾಂಧಿ – ಸಾವರ್ಕರ್ ಮುಖಾಮುಖಿ,
ಹಿಂದುತ್ವ – ರಾಷ್ಟೀಯತೆಯ ಮುಖಾಮುಖಿ,
ಸಂವಿಧಾನ – ಧರ್ಮದ ಮುಖಾಮುಖಿ,
ಆರ್ಯ – ದ್ರಾವಿಡ ಮುಖಾಮುಖಿ,
ಹಿಂದಿ – ಪ್ರಾದೇಶಿಕ ಭಾಷೆಗಳ ಮುಖಾಮುಖಿ,
ಭಾರತ – ಇಂಡಿಯಾ ಮುಖಾಮುಖಿ,
ಸಂಪ್ರದಾಯ – ವೈಜ್ಞಾನಿಕತೆಯ ಮುಖಾಮುಖಿ,
ಮೂಲನಿವಾಸಿ – ವಲಸಿಗರ ಮುಖಾಮುಖಿ,
ಜಾಗತೀಕರಣ – ಗ್ರಾಮ ಸ್ವರಾಜ್ಯದ ಮುಖಾಮುಖಿ………..

ಹೀಗೆ ಎಲ್ಲಾ ವಿಷಯಗಳ ಬಹುದೊಡ್ಡ ಸಂಘರ್ಷ ನಡೆಯುತ್ತಿದೆ.

ವಾದ ಪ್ರತಿವಾದಗಳಿಗೆ ಇದು ಕೇವಲ ಒಂದು ನೆಪವಷ್ಟೆ.

ವಾಸ್ತವದಲ್ಲಿ,

ಸಮೂಹ ಸಂಪರ್ಕ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಪ್ರತಿ ವ್ಯಕ್ತಿಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ದೊರೆತ ಅವಕಾಶ ಮತ್ತು ಸ್ವಾತಂತ್ರ್ಯ ಹಾಗು ಸುಳ್ಳು, ಅರ್ಧ ಸುಳ್ಳು, ಬಾಲಿಶ, ಉಡಾಫೆ, ವಿಕೃತ ಸುದ್ದಿ ವಿಷಯಗಳನ್ನು ಕ್ಷಣಾರ್ಧದಲ್ಲಿ ಪ್ರಚಾರ ಮಾಡಬಹುದಾದ ಸಾಧ್ಯತೆ ಎಲ್ಲವೂ ಒಟ್ಟಾಗಿ ಸೇರಿ ಅಧೀಕೃತ ಇತಿಹಾಸಕಾರರ, ವಿಷಯ ತಜ್ಞರ, ವಿದ್ವಾಂಸರ ಅಭಿಪ್ರಾಯಗಳನ್ನು ಮೀರಿ ಈ ಬೆಳವಣಿಗೆ ನಡೆಯುತ್ತಿದೆ.

ಆಳವಾದ ಅಧ್ಯಯನ, ಚಿಂತನೆ, ಅನುಭವ, ವಾಸ್ತವ ಪ್ರಜ್ಞೆ ಇಲ್ಲದೆ ಎಲ್ಲವನ್ನೂ ಸಮರ್ಥಿಸುವ ಅಥವಾ ವಿರೋಧಿಸುವ ಟ್ರೆಂಡ್ ಪ್ರಾರಂಭವಾಗಿದೆ.

ದ್ವೇಷಮಯ ಮತ್ತು ಅಪನಂಬಿಕೆಯಿಂದ ಒಬ್ಬರ ಮೇಲೆ ಒಬ್ಬರ ಕೆಸರೆರೆಚಾಟ ನಡೆಯುತ್ತಿದೆ..

ಇದು ಸುಖಾಂತ್ಯ ಕಾಣುತ್ತದೆಯೋ ಅಥವಾ ವಿನಾಶಕಾರಿ ಬೆಳವಣಿಗೆಯೋ ಎಂಬುದು ಕಾಲದ ಗರ್ಭದಲ್ಲಿ ಅಡಗಿದೆ……

ತುಂಬಾ ಸ್ಪಷ್ಟವಾಗಿ ಯಾವುದನ್ನು ಹೇಳುವುದು ಕಷ್ಟವಾಗುತ್ತಿದೆ ಅಥವಾ ಹೇಳಿದರು ಅದಕ್ಕಾಗಿ ಪ್ರತಿಯಾಗಿ ಮತ್ತೊಂದು ವಾದ ಮಂಡನೆ ಮೂಡಿ ಬರುತ್ತದೆ. ಸಾಮಾಎಂದಜನ ಮತ್ತೆ ಗೊಂದಲಕ್ಕೆ ಒಳಗಾಗುತ್ತಾರೆ. ಆಗ ಸುಳ್ಳಿನ ಸರದಾರರ ಗುರಿ ಈಡೇರುತ್ತದೆ.

ಆದರೂ ನಾವುಗಳು ಒಂದಷ್ಟು ಸಂಯಮದಿಂದ ಸಭ್ಯತೆಯಿಂದ ವಿವೇಚನೆಯಿಂದ ಈ ಸಂದರ್ಭವನ್ನು ನಿಭಾಯಿಸಲು ಪ್ರಯತ್ನಿಸೋಣ.
ಸತ್ಯದ ಹುಡುಕಾಟವೇ ನಮ್ಮ ಗುರಿಯಾಗಿರಲಿ.

ಈ ರೀತಿಯ ಒಣ‌ ಸಿದ್ದಾಂತಗಳು, ಸುಳ್ಳಿನ ಪ್ರಚಾರಗಳು ನಿರಂತರವಾಗಿ ತನ್ನ ಪ್ರಾಮುಖ್ಯತೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಂತಿಮವಾಗಿ ಸತ್ಯ ಮೇವ ಜಯತೆ ಎಂಬ ಭರವಸೆಯೊಂದಿಗೆ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!