Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಂಸತ್ ಮೇಲಿನ ದಾಳಿಯ ಆರೋಪಿಗಳ ಹಿಸ್ಟ್ರಿ ಹೇಗಿದೆ ಗೊತ್ತಾ…. ಮೈಸೂರಿನ ಮನೋರಂಜನ್ 10,000 ಪುಸ್ತಕಗಳ ಸಂಗ್ರಹ ಹೊಂದಿದ್ದ !

ಸಂಸತ್ ಮೇಲೆ ದಾಳಿ ನಡೆಸಿ ಸಿಕ್ಕಿ ಬಿದ್ದಿರುವ 6 ಆರೋಪಿಗಳಲ್ಲಿ ಬಹುತೇಕ ಎಲ್ಲರೂ ಉನ್ನತ ವ್ಯಾಸಂಗ ಮಾಡಿದವರೇ ಆಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಒಬ್ಬ ಆರೋಪಿ ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಅಭಿಮಾನಿ, ಒಬ್ಬಳು ಹಲವಾರು ಪದವಿಗಳನ್ನು ಪಡೆದರೂ ಈ ವ್ಯವಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲಾಗದ  ನಿರುದ್ಯೋಗಿ ಮಹಿಳೆ, ಮತ್ತೊಬ್ಬ ಇ-ರಿಕ್ಷಾ ಚಾಲಕ ಎಂಬುದು ತಿಳಿದು ಬಂದಿದೆ.

ಸಂಸತ್ತಿನ ದಾಳಿಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಇದುವರೆಗೆ ಗುರುತಿಸಲಾಗಿದೆ. ಈ ಪೈಕಿ 6 ಜನರನ್ನು ಬಂಧಿಸಲಾಗಿದೆ. ಒಬ್ಬ ತಲೆಮರೆಸಿಕೊಂಡಿದ್ದಾನೆ.

ಒಟ್ಟು 7 ಜನ ಆರೋಪಿಗಳಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಇವರಿಬ್ಬರು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯಲ್ಲಿ ಜಿಗಿದು ಸದನದೊಳಗೆ ಬಣ್ಣದ ಹೊಗೆಯ ಡಬ್ಬಿಗಳನ್ನು ಹಾಕಿದರು, ಇನ್ನಿಬ್ಬರಾದ ಅಮೋಲ್ ಶಿಂಧೆ ಮತ್ತು ನೀಲಂ ಸದನದ ಹೊರಗೆ ಘೋಷಣೆಗಳನ್ನು ಗೂಗಿ ಹೊಗೆ  ಡಬ್ಬಿಗಳನ್ನು ಹಾರಿಸಿದರು. ಇನ್ನೂ ಮೂವರು ಸಹಚರರನ್ನು ಬಿಹಾರ ಮೂಲದ ಲಲಿತ್ ಝಾ ಮತ್ತು ವಿಕ್ಕಿ ಶರ್ಮಾ ಮತ್ತು ಅವರ ಪತ್ನಿ ಎಂದು ಗುರುತಿಸಲಾಗಿದೆ. ಆರೋಪಿಗಳು ಗುರುಗ್ರಾಮದಲ್ಲಿ ತಂಗಿದ್ದು, ಬುಧವಾರ ಬೆಳಗ್ಗೆ ಸಂಸತ್ತಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಯುವತಿ ನೀಲಂ 

ಈಕೆಗೆ ವಯಸ್ಸು 42, ಈಕೆ ಸಂಸತ್ ಭವನದ ಮುಂದೆ ಹೇಳಿದ್ದೆನೆಂದರೆ, ಈ ಭಾರತ ಸರ್ಕಾರ ನಮ್ಮ ವಿರುದ್ಧ ದೌರ್ಜನ್ಯ ಎಸಗುತ್ತಿದೆ. ನಮ್ಮ ಹಕ್ಕುಗಳಿಗಾಗಿ ಮಾತನಾಡಲು ನಮಗೆ ಸಾಧ್ಯವಾಗುತ್ತಿಲ್ಲ, ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ ಮತ್ತು ನಮ್ಮನ್ನು ಕಂಬಿಗಳ ಹಿಂದೆ ಇರಿಸಿ ಚಿತ್ರಹಿಂಸೆ ನೀಡುತ್ತಾರೆ. ನಮ್ಮ ಹಕ್ಕುಗಳಿಗಾಗಿ ಮಾತನಾಡಲು ನಮಗೆ ಯಾವುದೇ ಮಾಧ್ಯಮ ಇರಲಿಲ್ಲ. ಅದಕ್ಕೆ ಈ ಕೃತ್ಯ ನಡೆಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ನಾವು ಯಾವುದೇ ಸಂಘ ಅಥವಾ ಗುಂಪುಗಳಿಗೆ ಸಂಬಂಧಿಸಿಲ್ಲ. ನಾವು ಸಾಮಾನ್ಯ ಜನ, ನಾವು ವಿದ್ಯಾರ್ಥಿಗಳು, ನಾವು ನಿರುದ್ಯೋಗಿಗಳು ಎಂದು ಹೇಳುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ನೀಲಂ, ನಿರುದ್ಯೋಗಿ ಮಹಿಳೆ, ಬಹು ಪದವಿಗಳನ್ನು ಪಡೆದಿದ್ದಾಳೆ.
ಸಂಸತ್ತಿನ ಹೊರಗಿನಿಂದ ಬಂಧಿಸಲಾದ ಇಬ್ಬರು ಶಂಕಿತರಲ್ಲಿ ಒಬ್ಬರಾದ ನೀಲಂ ಅವರು ಹರಿಯಾಣದ ಜಿಂದ್‌ನ ಘಾಸೊ ಖುರ್ದ್ ಗ್ರಾಮದವರು.

ಅವರು ಹಿಸಾರ್‌ನಲ್ಲಿ ನಾಗರಿಕ ಸೇವಾ ಪ್ರವೇಶ ಪರೀಕ್ಷೆಗೆ ಓದುತ್ತಿದ್ದರು ಮತ್ತು ಅಲ್ಲಿ ಬಾಲಕಿಯರ ಪಿಜಿಯಲ್ಲಿ ವಾಸಿಸುತ್ತಿದ್ದರು. ಆಕೆಯ ತಂದೆ ಸಿಹಿತಿಂಡಿ ಅಂಗಡಿ ಮಾಲೀಕರು.

“ನೀಲಂ ನನ್ನ ಸಹೋದರಿ. ಅವಳು ದೆಹಲಿಯಲ್ಲಿದ್ದಾಳೆಂದು ನಮಗೆ ತಿಳಿದಿರಲಿಲ್ಲ. ಅವಳು ತನ್ನ ಅಧ್ಯಯನಕ್ಕಾಗಿ ಹಿಸಾರ್‌ನಲ್ಲಿದ್ದಾಳೆ ಎಂದು ನಾವು ಭಾವಿಸಿದ್ದೇವೆ. ಅವಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದಳು” ಎಂದು ಆಕೆಯ ಕಿರಿಯ ಸಹೋದರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ, ನೀಲಂ ಕೇವಲ ಒಂದು ದಿನಕ್ಕೆ ಮೊದಲು. ಮನೆಗೆ ಭೇಟಿ ನೀಡಿ ಹೋಗಿದ್ದರು. 

ಆಕೆಯ ಸಹೋದರನ ಪ್ರಕಾರ ನೀಲಂ, BA, MA, B.Ed, M.Ed, CTET, M.Phil ಮತ್ತು NET-ಅರ್ಹತೆ ಹೊಂದಿದ್ದರೂ ನಿರುದ್ಯೋಗಿಯಾಗಿದ್ದರು. 

ನಿರುದ್ಯೋಗ ಸಮಸ್ಯೆ ಕುರಿತು ಹಲವು ಬಾರಿ ಪ್ರಸ್ತಾಪಿಸಿದ್ದರು. ರೈತರ ಪ್ರತಿಭಟನೆಗಳಲ್ಲೂ ಪಾಲ್ಗೊಂಡಿದ್ದರು. ನನ್ನ ಇನ್ನೊಬ್ಬ ಸಹೋದರ ಕರೆ ಮಾಡಿ, ಟಿವಿ ಆನ್ ಮಾಡಲು ಹೇಳಿದರು. ನೀಲಂ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು ಎಂದು ನೀಲಂ ಅವರ ತಾಯಿ ಸರಸ್ವತಿ ಹೇಳಿದರು.

ಅವಳು ನಿರುದ್ಯೋಗದಿಂದ ಬೇಸತ್ತಿದ್ದಳು, ಅವಳು ಸಾಕಷ್ಟು ಓದಿದ್ದಳು, ಆದರೆ ನಾವು ಯಾವುದೇ ಪ್ರಭಾವಿ ಸಂಪರ್ಕಗಳನ್ನು ಹೊಂದಿರಲಿಲ್ಲ. ಆದರಿಂದ ಕೆಲಸ ದೊರಯಲಿಲ್ಲ, ಅವಳು ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದಳು. ತನಗೆ ಕೆಲಸ ಸಿಗದಿದ್ದರೆ ತನ್ನ ಪದವಿಗಳು ಯಾವುದಕ್ಕಾಗಿ ಎಂದು ಪ್ರಶ್ನಿಸಿದ್ದಳು ಎಂದಿರುವ ಅವರ ತಾಯಿ, ಅವಳು ಸತ್ತರೆ ಉತ್ತಮ, ”ಎಂದು ಕಿಡಿಕಾರಿದ್ದಾರೆ.

“ನಾವು ಕೊನೆಯ ಬಾರಿಗೆ ಮಾತನಾಡಿದಾಗ, ತಾನು ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವಳು ಹೇಳಿದ್ದಳು” ಎಂದು ತಿಳಿದು ಬಂದಿದೆ.

ಸಾಗರ್ ಶರ್ಮಾ, ಲಕ್ನೋದ ಇ-ರಿಕ್ಷಾ ಚಾಲಕ ( ಜನ್ಮದಿನಾಂಕ: 31-12-1996)

ಲೋಕಸಭೆಯ ಒಳಗಿದ್ದ ಆರೋಪಿಗಳಲ್ಲಿ ಸಾಗರ್ ಶರ್ಮಾ ಒಬ್ಬರು ಮತ್ತು ಅವರ ಸಂದರ್ಶಕರ ಪಾಸ್ ಮೈಸೂರಿನ ಭಾರತೀಯ ಜನತಾ ಪಕ್ಷದ (ಸಂಸದ) ಪ್ರತಾಪ್ ಸಿಂಹ ಸಹಿ ಇದೆ. ಶರ್ಮಾ ಅವರು ಲಕ್ನೋದ ಅಲಂಬಾಗ್‌ನವರು, ಅಲ್ಲಿಯೇ ಇ-ರಿಕ್ಷಾವನ್ನು ಓಡಿಸುತ್ತಿದ್ದರು.

“ಇದನ್ನೆಲ್ಲಾ ನೋಡಿ ನನಗೆ ಆಘಾತವಾಗಿದೆ. ನನ್ನ ಮಗ ಹೀಗಿಲ್ಲ. ಅವನು ಈ ರೀತಿ ಮಾಡುತ್ತಾನೆ ಎಂದು ನನಗೆ ನಂಬಲು ಸಾಧ್ಯವಿಲ್ಲ” ಎಂದು ಸಾಗರ್ ಅವರ ತಾಯಿ ರಾಣಿ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ, ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಅವರು ಎರಡು ದಿನಗಳ ಹಿಂದೆಯಷ್ಟೆ ಲಕ್ನೋದಿಂದ ತೆರಳಿದ್ದರು ಎಂದು ಅವರು ಹೇಳಿದ್ದಾರೆ.

“ತಾವು ಪ್ರತಿಭಟನೆಗಾಗಿ ದೆಹಲಿಗೆ ಹೋಗುವುದಾಗಿ ಹೇಳಿದ್ದರು. ನಾವು ಅವರನ್ನು ಹೆಚ್ಚು ಕೇಳಲಿಲ್ಲ” ಎಂದು ಅವರ ಸಹೋದರಿ ಮಹಿ ಶರ್ಮಾ ಹೇಳಿದ್ದಾರೆ. ಈತನ ತಂದೆ ಬಡಗಿಯಾಗಿದ್ದು, ಕುಟುಂಬವು ಲಕ್ನೋದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಲಕ್ನೋ ಪೊಲೀಸರು ಸಾಗರ್ ಅವರ ನಿವಾಸವನ್ನು ತಲುಪಿ ಅವರ ಕುಟುಂಬವನ್ನು ವಿಚಾರಣೆ ನಡೆಸಿದ್ದಾರೆ.

ಮನೋರಂಜನ್ ಮೈಸೂರು, ಇಂಜಿನಿಯರ್, ಪ್ರಧಾನಿ ಮೋದಿ ಅವರ ಅಭಿಮಾನಿ ( ಜನ್ಮದಿನಾಂಕ 1989)

ಸಂಸತ್ತಿನ ಒಳಗೆ ಇದ್ದ ಎರಡನೇ ವ್ಯಕ್ತಿ ಮನೋರಂಜನ್ ಡಿ. ಈತ ಕರ್ನಾಟಕದ ಮೈಸೂರಿನವರು, 2014 ರಲ್ಲಿ ಪದವಿ ಪಡೆದ. ಕಠಿಣ ಪರಿಶ್ರಮದ ಎಂಜಿನಿಯರ್ ಮುಗಿಸಿದ್ದ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಅಭಿಮಾನಿಯಾಗಿದ್ದ ಎಂದು ಸ್ವತಃ ಅವರ ತಂದೆ ದೇವರಾಜೇಗೌಡ ಹೇಳಿಕೊಂಡಿದ್ದಾರೆ.

”ನನ್ನ ಮಗ ಏನಾದರೂ ಒಳ್ಳೆಯ ಕೆಲಸ ಮಾಡಿದ್ದರೆ ಖಂಡಿತ ಬೆಂಬಲಿಸುತ್ತೇನೆ, ಆದರೆ ತಪ್ಪು ಮಾಡಿದ್ದರೆ ಅದನ್ನು ತೀವ್ರವಾಗಿ ಖಂಡಿಸುತ್ತೇನೆ. ಅವನು ಮಾಡಿದ್ದು ಶಿಕ್ಷಾರ್ಹ. ಸಮಾಜಕ್ಕೆ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ,” ಎಂದು ಮೈಸೂರಿನ ವಿಜಯನಗರ ನಿವಾಸದ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದರು.”

ಅವರ ಇಡೀ ಕುಟುಂಬ ಬಿಜೆಪಿ ಪಕ್ಷದ ಬೆಂಬಲಿಗರಾಗಿದ್ದು, ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಹಾಸನ ಜಿಲ್ಲೆಯವರಾದ ಈ ಕುಟುಂಬವು 15 ವರ್ಷಗಳ ಹಿಂದೆ ಮೈಸೂರಿಗೆ ಬಂದು ನೆಲೆಸಿತ್ತು. ಮನೋರಂಜನ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದರು.

ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದುವುದರಲ್ಲಿ ಈತನಿಗೆ ತುಂಬ ಆಸಕ್ತಿ ಇತ್ತು. ಈತ ಸುಮಾರು 10,000 ಪುಸ್ತಕಗಳ ಸಂಗ್ರಹ ಹೊಂದಿದ್ದಾನೆಂದು ಅವರ ತಂದೆಯೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ನರೇಂದ್ರ ಮೋದಿಯಂತಹ ಪ್ರಧಾನಿಯನ್ನು ಹೊಂದಿರುವುದು ಒಂದು ಅದೃಷ್ಟ ಎಂದು ಅವರು ಹೇಳುತ್ತಿದ್ದ.

ಅಮೋಲ್ ಶಿಂಧೆ: ಡೈಲಿ ವೇಜರ್, ಆರ್ಮಿ ಉದ್ಯೋಗ ಆಕಾಂಕ್ಷಿ

ಅಮೋಲ್ ಶಿಂಧೆ ( ವಯಸ್ಸು 25) ಈತ ಸಂಸತ್ತಿನ ಹೊರಗೆ ನೀಲಂ ಜೊತೆಗೆ ಇದ್ದು, ಘೋಷಣೆಗಳನ್ನು ಕೂಗಿ,  ಹೊಗೆ ಡಬ್ಬಿಗಳನ್ನು ತೆರೆದಾಗ ಬಂಧಿಸಲಾಯಿತು.  ಶಿಂಧೆ ಮಹಾರಾಷ್ಟ್ರದ ಲಾತೂರ್‌ ಮೂಲದವನು.

ಪಿಟಿಐ ಉಲ್ಲೇಖಿಸಿರುವಂತೆ ಲಾತೂರ್‌ನ ಸ್ಥಳೀಯ ಪೊಲೀಸ್ ಅಧಿಕಾರಿಯ ಪ್ರಕಾರ, ಚಕುರ್ ತೆಹಸಿಲ್‌ನ ಜರಿ ಗ್ರಾಮದಿಂದ ಬಂದ ಶಿಂಧೆ, ಸೇನಾ ನೇಮಕಾತಿ ಅಭಿಯಾನದಲ್ಲಿ ಭಾಗವಹಿಸಲು ದೆಹಲಿಗೆ ಹೋಗುವುದಾಗಿ ತನ್ನ ಪೋಷಕರಿಗೆ ತಿಳಿಸಿದ್ದ.  ಶಿಂಧೆ  ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದು, ಬಿಎ ಪದವೀಧರನಾಗಿದ್ದ. ಪೊಲೀಸ್ ಮತ್ತು ಸೇನಾ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಾಗ ದಿನಗೂಲಿಯಾಗಿ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿಕೊಂಡಿದ್ದ ಎಂದು ಪಿಟಿಐ ವರದಿ ಮಾಡಿದೆ.

ಘಟನೆಯ ನಂತರ ಅವರ ಕುಟುಂಬವನ್ನು ವಿಚಾರಣೆ ಮಾಡಲು ಲಾತೂರ್ ಪೊಲೀಸರ ತಂಡವು ಅವರ ಮನೆಗೆ ಭೇಟಿ ನೀಡಿತ್ತು.

ವಿಕ್ಕಿ ಶರ್ಮಾ ( ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ)

ಈತ ಹಾಗೂ ಈತನ ಪತ್ನಿ ಐದನೇ ಮತ್ತು ಆರನೇ ಆರೋಪಿಗಳು, ವಿಕ್ಕಿ ಶರ್ಮಾ ಮತ್ತು ಆತನ ಪತ್ನಿ ಗುರುಗ್ರಾಮ್ ಮೂಲದವರು.

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಆರ್‌ಡಬ್ಲ್ಯೂಎ ಅಧ್ಯಕ್ಷ ವಿಜಯ್ ಪರ್ಮಾರ್, ವಿಕ್ಕಿಗೆ ಸ್ಥಿರವಾದ ಕೆಲಸವಿರಲ್ಲ ಮತ್ತು ಆತ ಡ್ರೈವಿಂಗ್ ಅಥವಾ ಸೆಕ್ಯುರಿಟಿ ಗಾರ್ಡ್‌ನಂತಹ ಕೆಲಸಗಳನ್ನು ಮಾಡಿಕೊಂಡಿದ್ದ. ಆತ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಮತ್ತು ನೆರೆಹೊರೆಯವರನ್ನು ನಿಂದಿಸುತ್ತಿದ್ದ ಎಂದು ಹೇಳಿದ್ದಾರೆ.

ವಿಕ್ಕಿ ಮತ್ತು ಆತನ ಪತ್ನಿ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಗೆ 14 ವರ್ಷದ ಮಗಳಿದ್ದಾಳೆ. ಏಳನೇ ಆರೋಪಿ ಲಲಿತ್ ಝಾ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳ ಸಂಪರ್ಕ ಮತ್ತು ದಾಳಿಯ ಸಂಯೋಜನೆ

  • ಪೊಲೀಸ್ ಮೂಲಗಳ ಪ್ರಕಾರ ಆರೋಪಿಗಳು ಗುರುಗ್ರಾಮ್‌ನಲ್ಲಿ ಲಲಿತ್ ಅವರ ನಿವಾಸದಲ್ಲಿ ತಂಗಿದ್ದರು.
  • ಎಲ್ಲಾ ಆರು ಮಂದಿ ಲೋಕಸಭೆಯೊಳಗೆ ಹೋಗಲು ಬಯಸಿದ್ದರು, ಆದರೆ ಅವರಲ್ಲಿ ಇಬ್ಬರು ಮಾತ್ರ ಪಾಸ್‌ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
  • ಇದುವರೆಗೆ ಯಾವುದೇ ಆರೋಪಿಗಳ ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಮಾಡಿಲ್ಲ ಎಂದು ವರದಿಯಾಗಿದೆ.
  • ಆರೋಪಿಗಳಿಗೆ ಯಾರಾದರೂ ಅಥವಾ ಸಂಘಟನೆಯಿಂದ ಸೂಚನೆ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
  • ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರನೇ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ.

ಕೃಪೆ : ದಿ ಕ್ವಿಂಟ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!