Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಹಿಳೆ ಮನೆ ಕೆಲಸಕ್ಕೆ ಮಾತ್ರ ಸೀಮಿತವಲ್ಲ: ಮಂಜುಳಾ

ಮಹಿಳೆ ಮಕ್ಕಳನ್ನು ಹೆರುವ ಯಂತ್ರವಲ್ಲ ಹಾಗೂ ಮನೆ ಕೆಲಸ ಅಡುಗೆ ಕೆಲಸಕ್ಕೆ ಸೀಮಿತವಾಗಿಲ್ಲ, ಈಗ ಕೃಷಿಯಿಂದ ಕಕ್ಷೆವರೆಗೆ ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಕಡಿಮೆ ಇಲ್ಲದ ಹಾಗೆ ದುಡಿಯುತ್ತಿದ್ದಾಳೆ ಎಂದು ಬಾಲಕಿಯ ಬಾಲ ಮಂದಿರದ ಅಧೀಕ್ಷಕರಾದ ಮಂಜುಳಾ ಜಿ. ತಿಳಿಸಿದರು.

ಮಂಡ್ಯನಗರದ ಕಲ್ಲಹಳ್ಳಿಯ ಬಾಲಕಿಯರ ಬಾಲ ಮಂದಿರದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1975ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ಮಾರ್ಚ್ 8ರಂದು ಅಧಿಕೃತವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆಗೆ ತಂದಿತು, ಇಂದಿನ ದಿನದಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ದುಡಿತಿದ್ದು ಪುರುಷರಿಗೆ ಸರಿಸಮಾನವಾಗಿ ದುಡಿತಿದ್ದಾಳೆ, ಅವಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ, ಅವಕಾಶಗಳನ್ನು ನೀಡಿದರೆ, ಸಮಾಜದಲ್ಲಿ ಮುಂದೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಗೃಹ ಪಾಲಕರಾದ ಪಾರ್ವತಮ್ಮ ಮಾತನಾಡಿ, ಸ್ವಾತಂತ್ರ ಬಂದು 75 ವರ್ಷಗಳು ಆಗಿದ್ದರೂ ಮಹಿಳೆಯರಿಗೆ ಲಿಂಗ ಸಮಾನತೆ ಬೇಕಾಗಿದೆ, ತಾಯಿಯಾಗಿ ಸಲಹುವಳು, ಅಕ್ಕನಾಗಿ ಸರಿ ತಪ್ಪು ತಿದ್ದುವಳು, ತಂಗಿಯಾಗಿ ಕರುಣೆ ತೋರುವಳು, ಹೆಂಡತಿಯಾಗಿ ಮನೆ ಬೆಳಗುವಳು, ಇಂತಹ ಸ್ತ್ರೀಯರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಯಲ್ಲಿ ಗೆದ್ದಂತಹ ಮಹಿಳಾ ಸಿಬ್ಬಂದಿ ವರ್ಗದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರು.

ವೇದಿಕೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಮಂಜುಳಾ ಪಿ, ಆಪ್ತ ಸಮಾಲೋಚಕರಾದ ಸುಷ್ಮಾ ಟಿ. ಎಸ್. ಡಾಟಾ ಎಂಟ್ರಿ ಸಿಬ್ಬಂದಿ ಅಶ್ವಿನಿರಾಮ್, ಶಿಕ್ಷಕಿರಾದ ಅರುಣ ಕುಮಾರಿ, ವೇದಾಂಭ, ರಕ್ಷಕರಾದ ದೀಪ, ನಾಗರತ್ನ, ಪುಟ್ಮಲ್ಲಮ್ಮ, ಲಕ್ಷ್ಮಿ, ಗೌರಮ್ಮ, ತ್ರಿವೇಣಿ ಸೇರಿದಂತೆ ಬಾಲಕಿಯರ ಬಾಲ ಮಂದಿರದ ಮಕ್ಕಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!