Friday, May 17, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಕಿರುಗಾವಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಲಾಭ

ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆರಂಭಿಸಿರುವ ಜನತಾಬಜಾರ್‌ನಲ್ಲಿ ಕಳೆದ ವರ್ಷಗಳಲ್ಲಿ ಸುಮಾರು ₹ 7 ಲಕ್ಷ ಮಾತ್ರ ವ್ಯಾಪಾರದಲ್ಲಿ ಲಾಭ ಬರುತ್ತಿತ್ತು, ಬಹುಮಾನ ಘೋಷಣೆ ಮಾಡಿದ ನಂತರ ಸುಮಾರು ₹ 12 ಲಕ್ಷಕ್ಕೂ ಹೆಚ್ಚು ಲಾಭ ಬಂದಿದೆ, ಬಹುಮಾನವನ್ನು ನಿರಂತರವಾಗಿ ನೀಡಲಾಗುವುದು ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಎಂ ನರೇಂದ್ರ ತಿಳಿಸಿದರು.

ಕಿರುಗಾವಲು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಆವರಣದಲ್ಲಿ ಜನತಾ ಬಜಾರ್‌ನಲ್ಲಿ ಹತ್ತು ಸಾವಿರ ಮೇಲ್ಪಟ್ಟು ವ್ಯಾಪಾರ ಮಾಡಿರುವ ಗ್ರಾಹಕರಿಗೆ 15 ವಿಶೇಷ ಬಹುಮಾನವನ್ನು ಲಾಟರಿಯಲ್ಲಿ ಮೂಲಕ ಆಯ್ಕೆಯಾದವರಿಗೆ ವಿತರಿಸಿ ಮಾತನಾಡಿದ ಅವರು, ಜನತಾ ಬಜಾರ್‌ನಲ್ಲಿ ಒಂದು ವರ್ಷದ ಅವಧಿಯಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಲಾಭ ಬಂದಿದ್ದು, ಲಾಭದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಹಣದಲ್ಲಿ ಮೊದಲನೆ ಬಹುಮಾನ ಐದು ಗ್ರಾಂ ಚಿನ್ನ, ಎರಡನೇ ಬಹುಮಾನ ಟಿವಿ, ಮೂರನೇ ಬಹುಮಾನ ಪ್ರೀಜ್, ನಾಲ್ಕನೇ ಬಹುಮಾನ ಮೀಕ್ಸಿ, ಐದನೇ ಬಹುಮಾನ ಕುಕ್ಕರ್ ಹಾಗೂ 10 ಸಮಾಧಾನಕಾರ ಬಹುಮಾನವನ್ನು ನೀಡಲಾಗುತ್ತಿದೆ ಎಂದರು.

ಕಿರುಗಾವಲು ಗ್ರಾಮದ ಗೌರಮ್ಮ ಎಂಬುವವರಿಗೆ ಮೊದಲ ಬಹುಮಾನ ಐದು ಗ್ರಾಂ ಚಿನ್ನ, ಬುಲ್ಲಿಕೆಂಪನದೊಡ್ಡಿ ಗ್ರಾಮದ ರಾಜು ಎನ್ನುವವರಿಗೆ ಎರಡನೇ ಬಹುಮಾನ ಎಲ್‌ಇಡಿ ಟಿವಿ, ಕಿರುಗಾವಲು ಖುಷಿ ಎಂಬುವವರಿಗೆ ಮೂರನೇ ಬಹುಮಾನವಾಗಿ ಫ್ರೀಜ್, ಕೋದೇನಕೊಪ್ಪಲು ಗ್ರಾಮದ ನಾಗರಾಜು ಎಂಬುವವರಿಗೆ ನಾಲ್ಕನೇ ಬಹುಮಾನವಾಗಿ ಬೆಳ್ಳಿ ದೀಪ, ಐದನೇ ಬಹುಮಾನವಾಗಿ ಕಿರುಗಾವಲು ಗ್ರಾಮದ ಅಭಿಷೇಕ್ ಎಂಬುವವರಿಗೆ ಬಹುಮಾನ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಸೈಯದ್ ಸುಲ್ತಾನ್, ನಿರ್ದೇಶಕರಾದ ಕೆ.ಕುಮಾರ್, ಚಿಕ್ಕಯ್ಯ, ಯಶೋಧಮ್ಮ, ಭಾಗ್ಯಮ್ಮ,ರಾಜು, ನಿಂಗೇಗೌಡ, ಜಗದೀಶ್ ಮಾದಯ್ಯ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!