Tuesday, May 21, 2024

ಪ್ರಾಯೋಗಿಕ ಆವೃತ್ತಿ

ಸಂಸತ್ ದಾಳಿ ವೇಳೆ ‘ಕಲರ್ ಸ್ಮೋಕ್‌ ಬಾಟಲಿ’ಗಾಗಿ ಕಿತ್ತಾಡಿಕೊಂಡ ಟಿವಿ ಪತ್ರಕರ್ತರು: ವಿಡಿಯೋ ವೈರಲ್ !

ನವದೆಹಲಿಯ ಸಂಸತ್‌ ಭವನದ ಒಳಗೆ ಮತ್ತು ಹೊರಗಡೆ ನಡೆದ ಕಲರ್ ಸ್ಮೋಕ್‌ ದಾಳಿಯ ಬಗ್ಗೆ ವರದಿ ಮಾಡುವಾಗ ಗ್ಯಾಸ್ ಕ್ಯಾನಿಸ್ಟರ್‌ (ಖಾಲಿ ಕಲರ್ ಸ್ಮೋಕ್‌ ಬಾಟಲಿ) ಗಾಗಿ ಟಿವಿ ಮಾಧ್ಯಮದ ವರದಿಗಾರರು ಪರಸ್ಪರ ಕಿತ್ತಾಡಿಕೊಂಡ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಂಸತ್ ಒಳಗೆ ಮತ್ತು ಹೊರಗೆ ಪ್ರತಿಭಟಿಸಿದವರು ಸಿಡಿಸಿದ್ದು ಎನ್ನಲಾದ ಕಲರ್ ಸ್ಮೋಕ್‌ನ ಖಾಲಿ ಬಾಟಲಿಯನ್ನು ಹಿಡಿದು ಟಿವಿ9 ಭಾರತ್ ವರ್ಷ್‌ ಸುದ್ದಿ ವಾಹಿನಿಯ ವರದಿಗಾರ ಮಾತನಾಡುತ್ತಿದ್ದರು. ಈ ವೇಳೆ ಆ ಬಾಟಲಿಗಾಗಿ ಉಳಿದವರು ಎಳೆದಾಡಿದ್ದಾರೆ. ಘಟನೆಯ ವಿಡಿಯೋ ಲೈವ್ ಕ್ಯಾಮಾರದಲ್ಲಿ ಸೆರೆಯಾಗಿದೆ.

“>

ಪತ್ರಕರ್ತ ಅನಿಲ್ ತಿವಾರಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಟಿವಿ9 ಭಾರತ್ ವರ್ಷ್‌ನ ವರದಿಗಾರ ಕಲರ್ ಸ್ಮೋಕ್‌ನ ಖಾಲಿ ಬಾಟಲಿ ಹಿಡಿದು ವರದಿ ಮಾಡುವಾಗ ಝೀ ನ್ಯೂಸ್ ಮತ್ತು ನ್ಯೂಸ್ 18 ವರದಿಗಾರರು ಬಾಟಲಿಗಾಗಿ ಎಳೆದಾಡಿದ್ದಾರೆ. ನ್ಯೂಸ್‌ 18 ವರದಿಗಾರ್ತಿ ಪಲ್ಲವಿ ಘೋಷ್ ಕೂಡ ಬಾಟಲಿಗಾಗಿ ಕಿತ್ತಾಡಿದ್ದು ವಿಡಿಯೋದಲ್ಲಿ ಕಾಣಬಹುದು.

“>

 

ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡು ವರದಿಗಾರರ ವರ್ತನೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಕ್ಸ್ ಬಳಕೆದಾರ ಪ್ರಯಾಗ್ ತಿವಾರಿ ಎಂಬವರು ವಿಡಿಯೋ ಪೋಸ್ಟ್ ಮಾಡಿ, “ದಿ ಗ್ರೇಟ್ ಇಂಡಿಯನ್ ಜರ್ನಲಿಸಂ” ಎಂದು ಕಾಳೆಲೆದಿದ್ದಾರೆ.

“>

ಕಾಂಗ್ರೆಸ್ ಮಾಧ್ಯಮ ಮತ್ತು ಸಂಪರ್ಕ ವಿಭಾಗದ ಕಾರ್ಯದರ್ಶಿ ಲಾವಣ್ಯ ಬಲ್ಲಾಳ್ ಅವರು ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, “ಪಲ್ಲವಿ ಕೂಡ ಕಲರ್ ಸ್ಮೋಕ್‌ ಬಾಟಲಿ ಕಿತ್ತುಕೊಳ್ಳುತ್ತಿದ್ದಾರಾ? ಈ ಮಾಧ್ಯಮದವರು ಮತ್ತು ಚಾನೆಲ್‌ಗಳಿಂದ ನಾವು ಇನ್ನೇನು ನಿರೀಕ್ಷಿಬಹುದು?” ಎಂದು ಪ್ರಶ್ನಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!