Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯಂತಹ ಭ್ರಷ್ಟ ಸರ್ಕಾರ ಇನ್ನೊಂದಿಲ್ಲ

ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಂದು ಇಲಾಖೆಯಲ್ಲೂ ಕಾಸು ಕಾಸು ಅಂತ ಪೀಡಿಸುತ್ತಿದ್ದಾರೆ. ಆಡಳಿತದಲ್ಲಿ ಇಂತಹ ಭ್ರಷ್ಟ ಸರ್ಕಾರ ಇನ್ನೊಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ನಗರದ ಚಂದ್ರದರ್ಶನ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮಧು ಜಿ. ಮಾದೇಗೌಡರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗುತ್ತಿಗೆಯಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಿಯವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಓಎಂಅರ್ ಶೀಟ್ ಬದಲಾವಣೆ ಮಾಡಿ ಒಬ್ಬೊಬ್ಬ ಅಭ್ಯರ್ಥಿಗಳಿಂದ 80 ಲಕ್ಷ, 90 ಲಕ್ಷ ಹಣವನ್ನು ಕಿತ್ತಿದ್ದಾರೆ.

ಇದರಲ್ಲಿ ಬಿಜೆಪಿ ಸರ್ಕಾರದ ಮಂತ್ರಿಗಳು,ಬಿಜೆಪಿ ನಾಯಕರು, ಪೊಲೀಸ್ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ. ಆದರೆ ಪೊಲೀಸರು ಕಿಂಗ್ ಪಿನ್ ಬಂಧಿಸದೆ ಸಣ್ಣ ಪುಟ್ಟ ಡೀಲರ್ ಗಳನ್ನು,ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ.

ಮೊದಲು ಕಿಂಗ್ ಪಿನ್ ಗಳನ್ನು, ಮಂತ್ರಿಗಳನ್ನು ಹಿಡಿದು ಶಿಕ್ಷೆ ಕೊಡಲಿ ಎಂದರು. ದಕ್ಷಿಣ ಪದವೀಧರ ಕ್ಷೇತ್ರದ ಕ್ಷೇತ್ರದಲ್ಲಿ 1,33,000 ಮತದಾರರು ನೋಂದಣಿ ಮಾಡಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ 44,000 ಪದವೀಧರ ಮತದಾರರು ನೋಂದಣಿ ಮಾಡಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು ಮಧು ಮಾದೇಗೌಡರು ಗೆಲುವಿಗೆ ಪ್ರತಿಯೊಬ್ಬ ಅಭ್ಯರ್ಥಿಯನ್ನು ಭೇಟಿ ಮಾಡಿ ಅವರಿಗೆ ಮತ ಹಾಕಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಮಧು ಮಾದೇಗೌಡರ ಮಗ ಎಂಬ ಕಾರಣದಿಂದ ಟಿಕೆಟ್ ನೀಡಿಲ್ಲ. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಆತ ಪದವೀಧರನಾಗಿದ್ದು, ಅವರಿಗೆ ಸಹಾಯ ಮಾಡಬೇಕು ಎಂದು ಬಂದಿದ್ದಾನೆ.ನಾವೆಲ್ಲರೂ ಸೇರಿ ಮನೆ ಮನೆಗೆ ಹೋಗಿ ಮಧು ಮಾದೇಗೌಡರ ಬಗ್ಗೆ ತಿಳಿಸಿ ಮತ ಹಾಕಿಸಬೇಕೆಂದು ತಿಳಿಸಿದರು‌

ಜೆಡಿಎಸ್ ಪಕ್ಷ ಕೆ‌.ಟಿ. ಶ್ರೀಕಂಠೇಗೌಡರಿಗೆ ಟಿಕೆಟ್ ನೀಡದೆ ಬೇರೆಯವರನ್ನು ಅಭ್ಯರ್ಥಿ ಮಾಡಿದೆ. ಚುನಾವಣೆಯಲ್ಲಿ ಗೆಲ್ತೀನಿ ಅಂದಿದ್ದರೆ ಅವರೇ ಟಿಕೆಟ್ ಪಡೀತಿದ್ದರು.ಅವರ ಪಕ್ಷಕ್ಕೆ ಗೆಲುವು ಕಷ್ಟ ಎಂಬ ಕಾರಣಕ್ಕೆ ಬೇರೆಯವರನ್ನು ಅಭ್ಯರ್ಥಿ ಮಾಡಲಾಗಿದೆ.

ಬಿಜೆಪಿ ಪಕ್ಷ ರವಿಶಂಕರ್ ಅವರನ್ನು ಅಭ್ಯರ್ಥಿ ಮಾಡಿದೆ. ಸಚಿವ ಸೋಮಶೇಖರ್ ಅವರ ಪರ ನಿಂತಿದ್ದಾರೆ. ಎರಡು ಪಕ್ಷಗಳಿಗಿಂತ ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ಆಶಾದಾಯಕ ವಾತಾವರಣ ಇದೆ‌. ಮಧು ಜಿ.ಮಾದೇಗೌಡರ ಗೆಲ್ಲಿಸುವ ಮೂಲಕ ಪದವೀಧರರ ಪರ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!