Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಜನರನ್ನು ಧರ್ಮದ ವ್ಯಸನಿಗಳಾಗುವಂತೆ ಮಾಡಿದೆ

ಬಿಜೆಪಿಗೆ ಮಾನವಧರ್ಮ ಬೇಕಾಗಿಲ್ಲ. ಧರ್ಮದ ಹೆಸರಿನಲ್ಲಿ ಅಪಪ್ರಚಾರದಲ್ಲಿ ತೊಡಗಿ ಜನರನ್ನು ಧರ್ಮ ವ್ಯಸನಿಗಳಾಗುವಂತೆ ಮಾಡಿ ದೇಶವನ್ನ ಅವನತಿಯತ್ತ ಕೊಂಡೊಯ್ಯುತ್ತಿದೆ ಎಂದು ಎಂದು ಮೈಸೂರಿನ ಉರಿಲಿಂಗಪೆದ್ದಿಮಠದ ಪೀಠಾಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿ ಟೀಕಿಸಿದರು.

ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ದಿವಂಗತ ಡಾ.ಎಲ್‌.ಶಿವಲಿಂಗಯ್ಯ ಅವರ ಅಭಿಮಾನಿ ಬಳಗ ಆಯೋಜಿಸಿದ್ದ ಎಲ್‌.ಶಿವಲಿಂಗಯ್ಯ ಅವರ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಪಕ್ಷವು ಧರ್ಮದ ಹೆಸರಿನಲ್ಲಿ ಅಪಪ್ರಚಾರದಲ್ಲಿ ತೊಡಗಿ ಜನರನ್ನು ಧರ್ಮ ವ್ಯಸನಿಗಳಾಗುವಂತೆ ಮಾಡುತ್ತಿದೆ.ಸಮಾಜದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಧರ್ಮದ ಹೆಸರಿನಲ್ಲಿ ಜನರನ್ನು ದಾರಿತಪ್ಪಿಸುತ್ತಿದೆ ಎಂದರು.

ಅನುದಾನ ಕಡಿತ

ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ವೇತನವನ್ನು ಕಡಿತಗೊಳಿಸಿದೆ. 79 ಸಾವಿರ ಕೋಟಿ ರೂಪಾಯಿ ಇದ್ದಂತಹ ಎಸ್ಸಿ,ಎಸ್ಟಿ ಬಜೆಟ್‌ ಅನ್ನು ಕೇವಲ 29 ಸಾವಿರ ಕೋಟಿ ರೂಪಾಯಿಗೆ ಇಳಿಸಿದ್ದಾರೆ. ಈ ಮೂಲಕ ಹೊಸ ಶಿಕ್ಷಣ ನೀತಿ (ಎನ್‌ಇಪಿ) ತಂದು ಶಿಕ್ಷಣದ ಹೆಸರಿನಲ್ಲಿ ಅಲ್ಲೋಲ ಕಲ್ಲೋಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಉಳಿಸಬೇಕಿದೆ

ದೇಶದಲ್ಲಿ ಬಿಜೆಪಿ ಪಕ್ಷ ಧರ್ಮದ ಹೆಸರಿನಲ್ಲಿ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಸಂದರ್ಭದಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎಲ್ಲರ ಮೇಲಿದೆ. ನಮ್ಮ ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗಬೇಕು. ವಕೀಲರು, ಎಂಜಿನಿಯರ್ ಸೇರಿದಂತೆ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದವರೇ ನನ್ನ ಆಸ್ತಿ ಎಂದು ಅಂಬೇಡ್ಕರ್‌ ಹೇಳಿದ್ದರು ಎಂದರು.

ಅಂಬೇಡ್ಕರ್ ಅವರನ್ನು ಯಾರೂ ನೆನೆಯುತ್ತಿಲ್ಲ, ಅಧಿಕಾರಿಗಳು ಸಹ ಇದರಿಂದ ಹೊರತೇನಲ್ಲ. ಅಂಬೇಡ್ಕರ್ ಜಯಂತಿಯನ್ನು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಆಚರಿಸಿದ ಕೀರ್ತಿ ದಿವಂಗತ ಎಲ್‌.ಶಿವಲಿಂಗಯ್ಯ ಅವರಿಗೆ ಸಲ್ಲುತ್ತದೆ. ಅಂತಹ ವ್ಯಕ್ತಿಯ ಹೆಸರಿನಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮವಾದ ಕೆಲಸ, ಕೇವಲ ಭಾವನಾತ್ಮಕ ಸಂಬಂಧಕ್ಕೆ ಅಂಬೇಡ್ಕರ್‌ ಮೀಸಲಾಗಿಲ್ಲ. ನಮ್ಮ ಜೀವನ ಪರ್ಯಂತವೂ ಅವರು ಬದುಕಾಗಿ ಕಾಣಿಸುತ್ತಾರೆ ಎಂದು ಶ್ಲಾಘಿಸಿದರು.

ಮಾಜಿ ಸಚಿವ ಮೋಟಮ್ಮ ಮಾತನಾಡಿ, ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಮಹನೀಯ ಶಿವಲಿಂಗಯ್ಯನವರು. ಶೋಷಿತರ ಪರವಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದ ಅಂದಿನ ಏಕೈಕ ನಾಯಕರಾಗಿದ್ದರು. ಇಂದು ಅಸ್ಪೃಶ್ಯತೆ ವಿರುದ್ಧ ಜನರೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕೇ ವಿನಃ, ಬಿಡಿಬಿಡಿಯಾಗಿ ಹೋರಾಟ ಮಾಡುವುದನ್ನು ಬಿಡಬೇಕು.

ಎಸ್ಸಿ,ಎಸ್ಟಿ ಮೀಸಲಾತಿ ರೀತಿ ನಮಗೂ ಮೀಸಲಾತಿ ಕೊಡಿ ಎಂದು ಮೇಲ್ವರ್ಗದವರು ಸಹ ಕೇಳುತ್ತಿರುವುದು ತರವಲ್ಲ ಎಂದರು.
ಶಿಕ್ಷಣ ಸಂಪತ್ತಲ್ಲಿ ಮೇಲ್ವರ್ಗದವನ್ನು ಹಿಂದಿಕ್ಕುವ ಎಲ್ಲ ಅರ್ಹತೆಗಳು ನಮ್ಮ ಮಕ್ಕಳಿಗಿದೆ. ಅವರನ್ನು ಗುರುತಿಸಿದರೆ ಮೇಲ್ವರ್ಗದವರಿಗೆ ಪೈಪೋಟಿ ನೀಡಿದಂತಾಗುತ್ತದೆ. ಆ ನಿಟ್ಟಿನಿಲ್ಲಿ ನಾವು ಸಾಗಬೇಕು.

ಮಕ್ಕಳನ್ನು ಶಿಕ್ಷಣದಲ್ಲಿ ಮುಂದೆ ತರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯು ಪೋಷಕರ ಮೇಲಿದೆ. ಹೀಗಾದಾಗ ಜಾತಿ ವ್ಯವಸ್ಥೆಯಿಂದ ಹೊರಬರಲು ಸಾಧ್ಯವೆನಿಸುತ್ತದೆ ಎಂದು ತಿಳಿಸಿದರು.

ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ,ಬೆಂಗಳೂರಿನ ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಭಂತೆ ಆನಂದ ಥೇರಾ, ನಳಂದ ವಿಶ್ವವಿದ್ಯಾನಿಲಯ ಪ್ರಧಾನ ಕಾರ್ಯದರ್ಶಿ ಭಂತೆ ಬೋಧಿದತ್ತ ಥೇರಾ, ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವೀರಭದ್ರಯ್ಯ, ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಸುರೇಶ್‌ಕುಮಾರ್‌, ಆದರ್ಶ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೂರ್ತಿ, ಡಾ.ರವಿಪ್ರಕಾಶ್‌,ಜಯಲಕ್ಷ್ಮಿ ಎಲ್.ಸಂಪತ್‌ಕುಮಾರ್, ಎಸ್‌.ಜೆ.ಚನ್ನಬಸಪ್ಪ, ಎಂಜಿನಿಯರ್‌ಗಳಾದ ಚೆನ್ನಯ್ಯ, ತಿಮ್ಮಯ್ಯ, ಆನಂದ್‌, ಕೆ.ಮಹದೇವಸ್ವಾಮಿ, ಚಂದ್ರಶೇಖರ್, ರುದ್ರಯ್ಯ, ಪರಶಿವಮೂರ್ತಿ, ಮಹೇಶ್‌, ಚಿಕ್ಕಅರಸಿನಕೆರೆ ಶಿವಲಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!