Saturday, July 13, 2024

ಪ್ರಾಯೋಗಿಕ ಆವೃತ್ತಿ

ರಕ್ತದಾನ ಮಾಡುವುದು ಉತ್ತಮ ಸಾಮಾಜಿಕ ಸೇವೆ : ಎ.ಎಂ ನಳಿನಿಕುಮಾರಿ

ಶ್ರೇಷ್ಠವಾದ ದಾನವೆಂದರೆ ಅದು ರಕ್ತದಾನ. ರಕ್ತದಾನ ಮಾಡುವುದರಿಂದ ಅದೆಷ್ಟೋ ಜನರ ಜೀವ ಜೀವವನ್ನು ಉಳಿಸಬಹುದು, ರಕ್ತದಾನ ಮಾಡುವುದು ಉತ್ತಮ ಸಾಮಾಜಿಕ ಸೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎ.ಎಂ ನಳಿನಿಕುಮಾರಿರವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಮತ್ತು ಕ್ಷಯ ನಿಯಂತ್ರಣ ಅಧಿಕಾರಿಗಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕ ಬಾರಿ ಮಾರಣಾಂತಿಕ ಪರಿಸ್ಥಿತಿಯಲ್ಲಿ ಬಳಲುತ್ತಿರುವ ರೋಗಿಗಳಿಗೆ ರಕ್ತದಾನ ಮಾಡುವುದರಿಂದ ಅವರ ಜೀವ ಉಳಿಸಿದ್ದಲ್ಲದೆ ದಾನಿಗಳಿಗೂ ಕೂಡಾ ಆರೋಗ್ಯಕರ ಪ್ರಯೋಜನಗಳು ಆಗುತ್ತದೆ ಎಂದರು.

ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ, ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ.ಸ್ವಯಂ ಪ್ರೇರಿತವಾಗಿ ರಕ್ತ ದಾನ ಮಾಡುವುದು ಅತ್ಯವಶ್ಯಕ ಎಂದರು.

ಇದೇ ಸಂದರ್ಭದಲ್ಲಿ 60 ಬಾರಿ ರಕ್ತದಾನ‌ ಮಾಡಿರುವ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ, ನೆಲದನಿ ಬಳಗದ ಅಧ್ಯಕ್ಷರಾದ ಎಂ. ಸಿ.ಲಂಕೇಶ್ ರವರಿಗೆ ಹಾಗೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ನೆಲದನಿ ಬಳಗಕ್ಕೂ ಹಾಗೂ ನೆಲದನಿ ಬಳಗದ ಮಹಿಳಾ ರಕ್ತದಾನಿ ಎಂ.ಎಸ್. ಚೈತ್ರ ಯೋಗೇಶ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಟಿ. ಎನ್ ಧನಂಜಯಯ್ , ಡಾ. ಕೆ.ಪಿ ಅಶ್ವಥ್, ಶ್ರೀಧರ್, ಶಿವಾನಂದ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!