Friday, September 20, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರವೇ ಮದ್ದು : ದಿನೇಶ್‌ ಗೂಳಿಗೌಡ

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ, ಹತ್ತಾರು ಯೋಜನೆಗಳನ್ನು ಜಾರಿ ಮೂಡುವ ಉದ್ದೇಶ ನೀಡಲಾಗುತ್ತಿದೆ, ಜನರು ಸರ್ಕಾರ ರಚನೆಗೆ ಶಕ್ತಿ ತುಂಬಿ, ಜಿಲ್ಲೆಯ ಅಭಿವೃದ್ದಿ, ನಗರದ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರವೇ ಶಕ್ತಿ ತುಂಬಲಿದೆ ಎಂದು ಶಾಸಕ ದಿನೇಶ್‌ ಗೂಳಿಗೌಡ ಹೇಳಿದರು.

ಮಂಡ್ಯನಗರದ ಗಾಂಧಿಭವನದಲ್ಲಿ ಕೆಪಿಸಿಸಿಯ ಜಿಲ್ಲಾ ಮಜ್ದೂರು ಕಾಂಗ್ರೆಸ್ ಘಟಕ ಆಯೋಜಿಸಿದ್ದ ಜಿಲ್ಲಾ ಸಮಾವೇಶ -ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ.ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಎನ್ ಚಲುವರಾಜಸ್ವಾಮಿ, ನರೆಂದ್ರಸ್ವಾಮಿ ನೇತೃತ್ವದಲ್ಲಿ ಅಭಿವೃದ್ದಿ ಕಾರ್ಯಗಳು ಸಾಗಲಿವೆ ಎಂದರು.

ಹಾಲು ಉತ್ಪಾದನೆ ಕುಸಿತ
ಜಿಲ್ಲೆಯಲ್ಲಿ ರೈತರ ಆರ್ಥಿಕ ಜೀವನಾಡಿ ಹೈನುಗಾರಿಕೆ ಮತ್ತು ಹಾಲಿನ ಸರಬರಾಜು ಕುಸಿಯುತ್ತಿದೆ.ಜಿಲ್ಲೆಯು ಹತ್ತು ಹಲವು ಸಮಸ್ಯೆಗಳಲ್ಲಿ ಸಿಲುಕಿದೆ, ಕಬ್ಬು-ರೇಷ್ಮೆ ಬೆಳೆಗಾರರು, ಭತ್ತ-ರಾಗಿ ಬೆಳೆಗಾರರು, ಹಾಲು ಉತ್ಪಾದಕರುಗಳಿಗೆ ಒಂದಲ್ಲಾ ಒಂದು ಸಮಸ್ಯೆಗಳು ಇವೆ, 1.2 ಲಕ್ಷದ ಕುಟುಂಬಗಳು ಪ್ರತಿನಿತ್ಯ 8.5 ಲಕ್ಷ ಲೀಟರ್ ಹಾಲು ಸರಬರಾಜು ಮಾಡುತ್ತಿವೆ, ಕಳೆದ ವರ್ಷ 1 ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಯಿತು ಎಂದು ಹೇಳಿದರು.

ಜಿಲ್ಲೆಯಲ್ಲಿ 4.60 ಲಕ್ಷ ಜಾನುವಾರುಗಳಿವೆ, ಇತ್ತೀಚಿಗೆ ಗಂಟುರೋಗಕ್ಕೆ ಸೂಕ್ತ ಲಸಿಕೆ ಸಿಗದೆ 700 ರಾಸುಗಳು ಅಸುನೀಗಿದವು, ಪರಿಹಾರ ಸಿಗಲಿಲ್ಲ, ಪಶು ಆಹಾರ, ಬೂಸ, ಹಿಂಡಿ ದರವು ಮೂರಷ್ಟು ಬೆಲೆ ಹೆಚ್ಚಳವಾಗಿದೆ, ಮೇವಿನ ಕೊರತೆ ಇದೆ, ರೋಗಗಳ ನಿಯಂತ್ರಣ ಸಾಧ್ಯವಿದಲ್ಲದೆ ಹಾಲು ಉತ್ಪಾದನೆ ಕಡಿಮೆಯಾಗಿದೆ ಎಂದು ತಿಳಿಸಿದರು.

ಕೆಪಿಸಿಸಿಯ ರಾಜ್ಯ ಮಜ್ದೂರು ಸಮಿತಿ ಅಧ್ಯಕ್ಷ ಲಕ್ಷ್ಮಿ ವೆಂಕಟೇಶ್ ಮಾತನಾಡಿ, ರಾಜ್ಯ ರಾಜಕರಣವೇ ಬೇರೆ. ಮಂಡ್ಯ ಜಿಲ್ಲೆಯ ರಾಜಕರಣವೇ ಬೇರೆ ಇದೆ. ಜಿಲ್ಲೆಯ ರಾಜಕೀಯ ಚಿತ್ರಣವೇ ವಿಭಿನ್ನವಾಗಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಮಜ್ದೂರು ಸಮಿತಿ ಪದಾಧಿಕಾರಿಗಳು ಸೇವೆ ಸಲ್ಲಿಸಲಿದ್ದಾರೆ. ಕಾರ್ಮಿಕ ಇಲಾಖೆಯಲಿನ ಸೌಲಭ್ಯಗಳನ್ನು ಜನರಿಗೆ ತಲುಪಿಸಿ ಸಾಧ್ಯವಾದಷ್ಟು ಜನತೆಗೆ ಸಿಗವಂತೆ ಮಾಡಲು ಪ್ರಯತ್ನಿಸಿ, ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ ಅಧಿಕಾರ ಲಭಿಸುವಂತೆ ಮಾಡಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಜ್ದೂರು ಕಾಂಗ್ರೆಸ್ ಘಟಕದಿಂದ ತಾಲೂಕು ಪದಾಧಿಕಾರಿಗಳಿಗೆ ಪದಗ್ರಹಣದ ಮೂಲಕ ಆದೇಶಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷ ಸಿ.ಡಿ ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ, ಇಂಟೆಕ್ ಜಿಲ್ಲಾಧ್ಯಕ್ಷ ನಿಂಗೇಗೌಡ, ಮಹಿಳಾ ವಿಭಾಗದ ಅಧ್ಯಕ್ಷೆ ಯಶೋಧ ಗೌಡ ತಗ್ಗಹಳ್ಳಿ, ಹೀನಾ, ರಾಜ್ಯ ಪದಾಧಿಕಾರಿಗಳಾದ ಶ್ಯಾಮಣ್ಣ ರೆಡ್ಡಿ, ಎಲ್ಲಪ್ಪ, ಚಂದ್ರಶೇಖರ್, ಜಿಲ್ಲಾ, ತಾಲೂಕು, ಇಂಟೆಕ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!