Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾವೇರಿ ಹೋರಾಟದ ಜಮಾ- ಖರ್ಚಿನ ವಿವರವನ್ನು ಜನರ ಮುಂದಿಟ್ಟ ರೈತ ಹಿತರಕ್ಷಣಾ ಸಮಿತಿ

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ನಿರಂತರ 151 ದಿನಗಳ ಕಾಲ ಮಂಡ್ಯದಲ್ಲಿ ಹೋರಾಟ ಮಾಡಿ ದ ಸಂದರ್ಭದಲ್ಲಿ ಆದ ಜಮಾ ಮತ್ತು ಖರ್ಚಿನ ವಿವರಗಳನ್ನು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯೂ ಜಿಲ್ಲೆಯ ಜನತೆಯ ಮುಂದೆ ಇಟ್ಟಿದೆ.

ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳು ಹಾಗೂ ಕೆಲವು ವೈಯಕ್ತಿಕವಾಗಿ ಹೋರಾಟಕ್ಕೆ ಧನ ಸಹಾಯ ಮಾಡಿದ್ದರಿಂದ 7,07,753 ರೂ ಸಂಗ್ರಹವಾಗಿತ್ತು,ಈ ಪೈಕಿ 6,94,461 ರೂ.ಗಳನ್ನು 151 ದಿನಗಳ ಕಾವೇರಿ ಹೋರಾಟಕ್ಕೆ ವೆಚ್ಚ ಮಾಡಲಿದ್ದು, ಉಳಿಕೆ ಹಣ 13,292 ರೂ.ಗಳನ್ನು ಪ್ರಸ್ತುತ ಪ್ರತಿವಾರ ನಡೆಸುತ್ತಿರುವ ಪ್ರತಿಭಟನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಮಿತಿ ಮುಖಂಡರಾದ ಸುನಂದ ಜಯರಾಂ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಹೋರಾಟದ ಜಮಾ-ಖರ್ಚಿ ವಿವರವನ್ನೊಳಗೊಂಡ 38 ಪುಟಗಳ ಕಿರುಹೊತ್ತಿಗೆಯನ್ನು ಸಮಿತಿಯು ಹೊರ ತಂದಿದ್ದು, ಅದರಲ್ಲಿ ಯಾವ ವ್ಯಕ್ತಿ, ಯಾವ ಸಂಘ ಸಂಸ್ಥೆಗಳು ಹೋರಾಟಕ್ಕೆ ಹಣವನ್ನು ದೇಣಿಗೆಯಾಗಿ ನೀಡಿದ್ಧಾರೆ ಹಾಗೂ ಆ ಹಣವನ್ನು ಬಳಕೆ ಮಾಡಲಾಗಿದೆ ಎಂಬ ದಿನನಿತ್ಯದ ಖರ್ಚಿನ ವಿವರಗಳನ್ನು ಮುದ್ರಿಸಲಾಗಿದೆ ಎಂದು ವಿವರಿಸಿದರು.

ಕಾವೇರಿ ನದಿ ನೀರಿನ ನಿಯಂತ್ರಣ ಮಂಡಳಿ ತೀರ್ಪನ್ನು ತಿರಸ್ಕರಿಸಿ

ಕಾವೇರಿ ನದಿ ನೀರಿನ ನಿಯಂತ್ರಣ ಮಂಡಳಿ, ನಿರ್ವಾಹಣಾ ಪ್ರಾಧಿಕಾರಗಳ ಆದೇಶಗಳನ್ನು ನಿರ್ಲಕ್ಷಿಸ ಮಾಡಬೇಕು. ಕರ್ನಾಟಕದ ಕಾವೇರಿ ಕೊಳ್ಳದ ನದಿ ನೀರನ್ನು ಉಪಯೋಗಿಸಿಕೊಳ್ಳದೆ ನಿರಂತರವಾಗಿ ಹೆಚ್ಚು ಹೆಚ್ಚು ನದಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದ್ದು, ಇದರಿಂದ ತಮಿಳು ನಾಡು ರಾಜ್ಯ ತನ್ನ ನೀರಾವರಿ ಪ್ರದೇಶವನ್ನು ವಿಸ್ತರಿಸಿಕೊಳ್ಳುತ್ತಿದ್ದು. ಈ ಸಂಬಂಧ ನೀರನ್ನು ತಡೆದಿಟ್ಟುಕೊಳ್ಳುವ ಕಾರ್ಯ ಮಾಡಬೇಕು. ಕಾವೇರಿ ಕೊಳ್ಳದ ನೀರಾವರಿ, ಅಂತರಜಲ, ವಿದ್ಯುತ್ ಅಭಿವೃದ್ಧಿಯನ್ನು ಕೈ ಎತ್ತಿಕೊಂಡು ಕಾರ್ಯಗತ ಮಾಡಬೇಕೆಂದು ಆಗ್ರಹಿಸಿದರು.

5. ಕಾವೇರಿ ಕೊಳ್ಳದಲ್ಲಿ ಪ್ರಸ್ತುತ ಇರುವ 11 ಲಕ್ಷ ನೀರಾವರಿ ಪ್ರದೇಶವನ್ನು 20 ಲಕ್ಷಕ್ಕೂ ಹೆಚ್ಚಾಗಿ ವಿಸ್ತರಿಸಿ ವರ್ಷಪೂರ್ತಿ ನೀರಾವರಿ ಕಲ್ಪಿಸಬೇಕು.

ಅತಿವೃಷ್ಟಿ ಸಮಯದಲ್ಲಿ ಮಳೆ ನೀರನ್ನು ಕಾವೇರಿ ಕೊಳ್ಳದಲ್ಲಿ ಸಂಗ್ರಹಿಸಿ ಹಿಡಿದಿಟ್ಟುಕೊಳ್ಳಬೇಕು ಇದರಿಂದ ಕಾವೇರಿಕೊಳ್ಳದ ಪ್ರದೇಶದ ಬರಗಾಲವನ್ನು ತಡೆಯಬೇಕು. ಕಾವೇರಿ ಕೊಳ್ಳದಲ್ಲಿ ಅನೇಕ ವಿಧದ ಸಣ್ಣ, ಮಾಧ್ಯಮ, ದೊಡ್ಡನೀರಾವರಿಯಂತ (ಮೇಕೆದಾಟು) ಯೋಜನೆಯನ್ನು ತುರ್ತಾಗಿ ಕಾರ್ಯಗತ ಮಾಡಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು. ನೀರಾವರಿ ಯೋಜನೆ, ಅಂತರ್ಜಲವೃದ್ಧಿ, ವಿದ್ಯುತ್ ಅಭಿವೃದ್ಧಿಗೆ ಪ್ರತಿವರ್ಷದ ಆಯ ವ್ಯಯದಲ್ಲಿ ಶೇಕಡ 30 ರಷ್ಟು ಅನುದಾನವನ್ನು ಕಾಯ್ದಿರಿಸಬೇಕೆಂದು ಒತ್ತಾಯಿಸಿದರು.

ಕೆ.ಆ‌ರ್.ಎಸ್‌. ಡ್ಯಾಂ ಭದ್ರತೆ, ರಕ್ಷಣೆ ಮುಖ್ಯವಾಗಿದ್ದು ಗಣಿಗಾರಿಕೆ, ಟ್ರಯಲ್ ಬ್ಲಾಸ್ಟ್, ಡಿಸ್ನಿಲ್ಯಾಂಡ್ ಕಾರ್ಯ ಚಟುವಟಿಕೆಗಳು ಡ್ಯಾಂ ದಿಕ್ಕಿನಲ್ಲಿ ಪೂರ್ಣ ನಿಷೇಧಿಸಬೇಕು.ತಮಿಳುನಾಡಿಗೆ ನಿರಂತರ ನೀರು ಬಿಟ್ಟ ಕಾರಣ ಕಾವೇರಿ ಕೊಳ್ಳದಲ್ಲಿ 2023- 24, 2024-25ರ ಸಾಲುಗಳಲ್ಲಿ ಅರ್ಧದಷ್ಟು ಲೆಕ್ಕದಲ್ಲಿ ಒಟ್ಟು 3600 ಕೋಟಿ ಬೆಳೆ ನಷ್ಟವಾಗಿದ್ದು, ಇದರಲ್ಲಿ ಕೆ.ಎಸ್.ಆರ್. ಅಚ್ಚುಕಟ್ಟು ಪ್ರದೇಶದಲ್ಲಿ 1200 ಕೋಟಿ ನಷ್ಟವಾಗಿದೆ. ಈ ನಷ್ಟವನ್ನು ರೈತರಿಗೆ ತುಂಬಿ ಕೊಡಬೇಕೆಂದು ಆಗ್ರಹಿಸಿದರು.

ಗೋಷ್ಟಿಯಲ್ಲಿ ಮುಖಂಡರಾದ ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಮಂಜುನಾಥ್, ಎಂ.ವಿ.ಕೃಷ್ಣ, ವೇಣು ಹಾಗೂ ಎಸ್.ನಾರಾಯಣ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!