Sunday, April 28, 2024

ಪ್ರಾಯೋಗಿಕ ಆವೃತ್ತಿ

ಜೈಲಿನಲ್ಲಿರುವ ಇರಾನಿನ ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ

ನಾರ್ವೆಯ ನೊಬೆಲ್ ಆಯ್ಕೆ ಸಮಿತಿಯು ಇರಾನಿನಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆಯ ವಿರುದ್ಧ ಮತ್ತು ಎಲ್ಲರಿಗೂ ಮಾನವ ಹಕ್ಕುಗಳು ಹಾಗೂ ಸ್ವಾತಂತ್ರ್ಯವನ್ನು ಉತ್ತೇಜಿಸಲು ಮಾಡಿದ ಹೋರಾಟಕ್ಕಾಗಿ ಮಾನವ ಹಕ್ಕುಗಳ ಕಾರ್ಯಕರ್ತೆ ನರ್ಗೆಸ್ ಮುಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಿದೆ.

“>

ಈ ವರ್ಷದ ಶಾಂತಿ ಪ್ರಶಸ್ತಿಯು ಮಹಿಳೆಯರ ವಿರುದ್ಧ ತಾರತಮ್ಯ ಮತ್ತು ದಬ್ಬಾಳಿಕೆಯ ದೇವಪ್ರಭುತ್ವ ಆಡಳಿತದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ನೂರಾರು ಸಾವಿರಾರು ಜನರನ್ನೂ ಗುರುತಿಸಿದೆ ಎಂದು ಸಮಿತಿಯು ಹೇಳಿದೆ.

ಇರಾನ್ ಸರಕಾರವು 51 ವರ್ಷ ವಯಸ್ಸಿನ ಮುಹಮ್ಮದಿ ಅವರನ್ನು 13 ಸಲ ಬಂಧಿಸಿದ್ದು, ನ್ಯಾಯಾಲಯಗಳು ಐದು ಬಾರಿ ಅವರನ್ನು ದೋಷಿ ಎಂದು ಘೋಷಿಸಿ ಒಟ್ಟು 31 ವರ್ಷಗಳ ಜೈಲು ವಾಸ ಮತ್ತು 154 ಚಾಟಿಯೇಟಿನ ಶಿಕ್ಷೆ ವಿಧಿಸಿವೆ. ಮುಹಮ್ಮದಿ ಈಗಲೂ ಜೈಲಿನಲ್ಲಿದ್ದಾರೆ.

ಮೊಹಮ್ಮದಿ 2003ರಲ್ಲಿ ಟೆಹ್ರಾನ್‌ನ ಮಾನವ ಹಕ್ಕುಗಳ ಕೇಂದ್ರದ ರಕ್ಷಕರೊಂದಿಗೆ ತೊಡಗಿಸಿಕೊಂಡರು. ಅವರ ”ಕೆಚ್ಚೆದೆಯ ಹೋರಾಟ”ಕ್ಕೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತೀರ್ಪುಗಾರರು ಹೇಳಿದರು.

”ಇರಾನಿಯನ್ ಆಡಳಿತದಲ್ಲಿನ ಮಹಿಳೆಯರನ್ನು ಗುರಿಯಾಗಿಸುವ ತಾರತಮ್ಯ ಮತ್ತು ದಬ್ಬಾಳಿಕೆಯ ನೀತಿಗಳ ವಿರುದ್ಧ ಹೋರಾಟಗಳನ್ನು ಮಾಡಿದ್ದಾರೆ” ಎಂದು ತೀರ್ಪುಗಾರ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!