Sunday, May 19, 2024

ಪ್ರಾಯೋಗಿಕ ಆವೃತ್ತಿ

ಲೈಂಗಿಕ ದೌರ್ಜನ್ಯ ಪ್ರಕರಣ| ಹೆಚ್.ಡಿ.ಕುಮಾರಸ್ವಾಮಿಗಿಲ್ಲ ಕೇಂದ್ರ ಸಚಿವ ಸ್ಥಾನ!

ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಪ್ರಕರಣ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಜೆಡಿಎಸ್ ಮಿತ್ರ ಪಕ್ಷ ಬಿಜೆಪಿಗೆ ಸಾಕಷ್ಟು ಇರಿಸುಮುರಿಸು ತಂದಿದೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಹಾಸನದ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಕಾಮುಕತನ ಬಯಲಾಗಿದ್ದು, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿವೆ.

ಜೆಡಿಎಸ್-ಬಿಜೆಪಿ ಮೈತ್ರಿ ಆದ ಕೆಲ ದಿನಗಳಲ್ಲಿಯೇ ಪ್ರಜ್ವಲ್ ರೇವಣ್ಣ ಸಾವಿರಾರು ಹೆಣ್ಣುಮಕ್ಕಳ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹಾಸನದ ಬಿಜೆಪಿ ನಾಯಕರೇ ಪತ್ರ ಬರೆದು ರಾಜ್ಯ ಹಾಗೂ ರಾಷ್ಟ್ರ ಬಿಜೆಪಿ ನಾಯಕರಿಗೆ ಸುದ್ದಿ ಮುಟ್ಟಿಸಿದ್ದರು.ಆದರೂ ಜೆಡಿಎಸ್-ಬಿಜೆಪಿ ನಾಯಕರು ಹಾಸನದಿಂದ ಪ್ರಜ್ವಲ್ ರೇವಣ್ಣನಿಗೆ ಟಿಕೆಟ್ ನೀಡಿ ಅಭ್ಯರ್ಥಿಯಾಗಿಸಿದ್ದರು.

ಚುನಾವಣಾ ಮತದಾನಕ್ಕೆ ನಾಲ್ಕು ದಿನಗಳ ಹಿಂದೆ ಪ್ರಜ್ವಲ್ ರೇವಣ್ಣನ ಕಾಮಕಾಂಡದ ಪೆನ್ ಡ್ರೈವ್ ಹಾಸನದ ಬೀದಿಗಳಲ್ಲಿ ಚೆಲ್ಲಾಡಲಾಗಿತ್ತು.ಈಗ ಪ್ರಜ್ವಲ್ ಕಾಮುಕತನ ರಾಜ್ಯ, ದೇಶ ಹಾಗೂ ವಿದೇಶಗಳ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದು, ಬಿಜೆಪಿ ನಾಯಕರಿಗೆ ಮಾಹಿತಿ ಗೊತ್ತಿದ್ದರೂ ಟಿಕೆಟ್ ನೀಡಿದ ಬಗ್ಗೆ ವಿರೋಧ ಪಕ್ಷಗಳು ಮೋದಿಯವರ ವಿರುದ್ಧ ಮಾತನಾಡುತ್ತಿರುವುದು ಮುಜುಗರ ತಂದಿದೆ.

ಈ ಕಾರಣದಿಂದ ದೆಹಲಿಯಲ್ಲಿ NDA ಅಧಿಕಾರಕ್ಕೆ ಬಂದರೂ, ಮಂಡ್ಯದಿಂದ ಕುಮಾರಸ್ವಾಮಿ ಅವರು ಗೆದ್ದರೂ ಸಹ ಕೇಂದ್ರ ದಲ್ಲಿ ಕುಮಾರಸ್ವಾಮಿ ಅವರು ಮಂತ್ರಿ ಆಗಲೂ ಸಾಧ್ಯವಿಲ್ಲ ಎಂದು ಬಿಜೆಪಿಯ ಮೂಲಗಳಿಂದ ತಿಳಿದುಬಂದಿದೆ.ಆ ಪ್ರಕಾರ ಚುನಾವಣೆಯ ನಂತರ ಬಿಜೆಪಿ ಜೆಡಿಎಸ್ ಜೊತೆಗಿನ ಮೈತ್ರಿ ಅಂತ್ಯವಾಗಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!