Monday, May 20, 2024

ಪ್ರಾಯೋಗಿಕ ಆವೃತ್ತಿ

ಕಮಿಷನ್ ಕೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ : ಡಿ.ಕೆ ಶಿವಕುಮಾರ್

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸುದ್ದಿಯಾಗಿದ್ದ ಕಮಿಷನ್ ದಂಧೆ ಆರೋಪ ರಾಜ್ಯ ರಾಜಕಾರಣದಲ್ಲಿ ಮತ್ತೆ ಸುದ್ದಿ ಮಾಡುತ್ತಿದೆ. ಈ ನಡುವೆ ಇಂದು ಮತ್ತೆ ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕಮಿಷನ್ ಕೇಳಿದ್ದು ಸಾಬೀತಾದರೆಇಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಜಾಹೀರಾತು

ನಾನು ಏನಾದರೂ ಕಮಿಷನ್ ಕೇಳಿದ್ದರೆ ಇವತ್ತೇ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ. ಗುತ್ತಿಗೆದಾರರು ಯಾರಿಗೆ ಎಷ್ಟು ಕೊಟ್ಟಿದ್ದಾರೆ ಎಂದು ಚರ್ಚೆ ಮಾಡಲು ಹೋಗಲ್ಲ. 10ರಿಂದ 15 ಪರ್ಸೆಂಟ್ ಕಮಿಷನ್ ಕೇಳಿದ್ರು ಅಂತ ಆರೋಪ ಮಾಡ್ತಿದ್ದಾರೆ. ಯಾರು ಕೇಳಿದ್ರು ಎಂಬ ಮಾಹಿತಿಯನ್ನೂ ಕೂಡ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ನಾನು ಕಮಿಷನ್ ಕೇಳಿದ್ದರೆ ಇವತ್ತೇ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ. ಪಡೆದುಕೊಳ್ಳದೇ ಇದ್ದರೆ ಮಾಜಿ ಸಿಎಂ ಬಸವರಾಜ ರಾಜೀನಾಮೆ ಕೊಡುತ್ತಾರಾ? ಆರ್ ಅಶೋಕ್ ರಾಜೀನಾಮೆ ಕೊಡ್ತಾರಾ? ಎಂದು ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!