Sunday, May 19, 2024

ಪ್ರಾಯೋಗಿಕ ಆವೃತ್ತಿ

ಮೃತ ರೈತ ಮಹಾಲಿಂಗಯ್ಯ ಕುಟುಂಬಕ್ಕೆ ರಾಜ್ಯ ಸರ್ಕಾರ ನೆರವಾಗಲಿ: ಹೆಚ್‌ಡಿಕೆ

ಕಬ್ಬಿನ ಗದ್ದೆ ಬೆಂಕಿಗೆ ಸುಟ್ಟು ಹೋಗುತ್ತಿರುವುದನ್ನು ಸಹಿಸಲಾರದೆ, ಹೇಗಾದರೂ ಮಾಡಿ ಬೆಂಕಿಯನ್ನು ಆರಿಸಬೇಕು ಎಂದು ಮುಂದಾದ ರೈತನೋರ್ವ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ, ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಮಹಾಲಿಂಗಯ್ಯ (60) ಎಂಬಾತನೇ ಮೃತಪಟ್ಟ ರೈತ. ಘಟನೆಯಿಂದಾಗಿ ಸುಮಾರು 20 ಎಕರೆಗೂ ಹೆಚ್ಚು ಪ್ರದೇಶದ ಕಬ್ಬು ಭಸ್ಮವಾಗಿದೆ.

“>ಈ ಘಟನೆಯ ಬಗ್ಗೆ ಟ್ವಿಟ್ ಮಾಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ, “ಮಂಡ್ಯ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಬಿದ್ದಿದ್ದ ಬೆಂಕಿ ನಂದಿಸಲು ಹೋದ ರೈತ ಮಹಾಲಿಂಗಯ್ಯ ಅವರು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಿಳಿದು ನನಗೆ ತೀವ್ರ ದಿಗ್ಧಮೆ ಉಂಟಾಯಿತು. ಆ ದೃಶ್ಯಗಳನ್ನು ಕಂಡು ಅತೀವ ದುಃಖವಾಯಿತು.

ಇದನ್ನೂ ಓದಿ : 20 ಎಕರೆಗೂ ಹೆಚ್ಚು ಪ್ರದೇಶದ ಕಬ್ಬು ಭಸ್ಮ: ಬೆಂಕಿಗೆ ಸಿಲುಕಿ ರೈತ ಸಜೀವ ದಹನ 

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ರಾಜ್ಯ ಸರಕಾರವು ಮಾನವೀಯತೆ ದೃಷ್ಟಿಯಿಂದ ಆ ಕುಟುಂಬಕ್ಕೆ ನೆರವಾಗಲಿ ಎಂಬುದು ನನ್ನ ಕಳಕಳಿಯ ಮನವಿ” ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!