Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಾ.19ಕ್ಕೆ ಕನ್ನಡ ಅಕ್ಷರ ಜಾತ್ರೆ : ವಿವಿಧ ಪ್ರಶಸ್ತಿ ಪ್ರದಾನ

ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃ‍ಷ್ಣರಾಜ ಒಡೆಯರ್ ಯುವಸೇನೆ, ಕನ್ನಂಬಾಡಿ ಹಾಗೂ ಕಾವೇರಿ ಪ್ರಭ ದಿನಪತ್ರಿಕೆ ಇವರ ಆಶ್ರಯದಲ್ಲಿ ಎಸ್.ಡಿ.ಜಯರಾಂ ಸ್ಮರಣಾರ್ಥ ದ್ವಿತೀಯ ಕನ್ನಡ ಅಕ್ಷರ ಜಾತ್ರೆ ಮತ್ತು ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಡ್ಯನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ್ ಜಯರಾಂ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷರ ಜಾತ್ರೆ ಸಮ್ಮೇಳಾಧ್ಯಕ್ಷರನ್ನಾಗಿ ಕವಿ ಡಾ.ಕೆ.ಜೋಗಿಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಅಂದು ಬೆಳಿಗ್ಗೆ 10.30ಗಂಟೆಗೆ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರೇಗೌಡ ಸಮಾರಂಭ ಉದ್ಘಾಟಿಸುವರು ಎಂದರು.

ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಅಶೋಕ್ ಜಯರಾಂ ಅಧ್ಯಕ್ಷತೆ ವಹಿಸುವರು. ಡಾ.ಕೆ.ಜೋಗಿಗೌಡ ಸಮ್ಮೇಳನಾಧ್ಯಕ್ಷರ ನುಡಿ ನುಡಿಯುವರು. ರಾಜ್ಯ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಮತ್ತಿಕೆರೆ ಜಯರಾಂ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಡಾ.ಹೆಚ್.ಎಸ್.ಮುದ್ದೇಗೌಡರಿಗೆ ಕವಿರತ್ನ ಪ್ರಶಸ್ತಿ, ಡಾ.ಈ.ಸಿ.ನಿಂಗೇಗೌಡ ಅವರಿಗೆ ಕನ್ನಡ ರತ್ನ ಪ್ರಶಸ್ತಿ, ಡಾ.ಸಿ.ಎಂ.ಪರಮೇಶ್ ಅವರಿಗೆ ಎಸ್.ಡಿ.ಜಯರಾಂ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಜಿ ಶಾಸಕಿ ಪ್ರಭಾವತಿ ಜಯರಾಂ ಉಪಸ್ಥಿತರಿರುವರು. ಕವಿ ಸ್ವರ್ಣಸಂದ್ರ ಪ್ರಾಸ್ತಾವಿಕ ನುಡಿ ನುಡಿಯುವರು ಎಂದರು.

ಕೆ.ಟಿ.ಶಂಕರೇಗೌಡ, ಚೌಡೇನಹಳ್ಳಿ ಪುಟ್ಟರಾಜು, ಎಸ್.ನಾರಾಯಣ, ಬನ್ನಂಗಾಡಿ ಸಿದ್ದಲಿಂಗಯ್ಯ, ಶಿವಲಿಂಗೇಗೌಡ ಅವರಿಗೆ ಕರ್ನಾಟಕ ಸೇವಾರತ್ನ ಪ್ರಶಸ್ತಿ, ಬಿ.ಆರ್.ಉಮಾ, ಡಾ.ಚಂದ್ರಶೇಖರ್, ಡಾ.ಹೆಚ್.ಸಿ.ಕುಸುಮಾಂಜಲಿ, ರಾಜೇಂದ್ರ ಕೆ ಹೀರೇಹಳ್ಳೀ, ಭವಾನಿ ಲೋಕೇಶ್ ಅವರಿಗೆ ಕವಿರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿ.ಆಂಜನಪ್ಪ, ಮಂಡ್ಯ ಸತ್ಯ, ಸಿ.ಮಧು, ಹೆಚ್.ಎಸ್.ಮಹೇಶ್, ಸಿ.ಸಿದ್ದರಾಜು, ಹೆಚ್.ಆರ್.ನಂದೀಶ್, ಬಿ.ಬೋರಯ್ಯ, ಮಂಗಲ ಲಂಕೇಶ್, ಆಟೋರಾಜಣ್ಣ ಹಾಗೂ ಲಕ್ಕಪ್ಪ ಅವರಿಗೆ ಎಸ್.ಡಿ.ಜಯರಾಂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಗೋಷ್ಟಿಯಲ್ಲಿ ಕೃ‍ಷ್ಣ ಸ್ವರ್ಣಸಂದ್ರ, ದೇವರಾಜ ಕೊಪ್ಪ, ಉಮ್ಮಡಹಳ್ಳಿ ನಾಗೇಶ್, ಗುರುಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!