Saturday, May 4, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕನ್ನಲಿ ಗ್ರಾಮದಲ್ಲಿ ಪೈಪ್‌ಲೈನ್ ಕಾಮಗಾರಿಗೆ ಚಾಲನೆ

ಗ್ರಾಮೀಣ ಜನತೆಗೆ ಮನೆ ಬಾಗಿಲ ಬಳಿಯೇ ಶುದ್ಧ ಕುಡಿಯುವ ನದಿ ನೀರು ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಶಾಸಕ ಪಿ.ರವಿಕುಮಾರ್‌ ಗಣಿಗ ಹೇಳಿದರು.

ಮಂಡ್ಯ ತಾಲೂಕಿನ ಕನ್ನಲಿ ಗ್ರಾಮದಲ್ಲಿ ಜಿ.ಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕನ್ನಲಿ ಗ್ರಾಮ ಪಂಚಾಯಿತಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್, ನೀರಿನ ಟ್ಯಾಂಕ್ ಮತ್ತು 554 ಕುಟುಂಬಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಾಮಗಾರಿಗೆ ಭೂಮಿ ಪೂಜೆ ನೇವೇರಿಸಿ ಅವರು ಮಾತನಾಡಿದರು.

ಕನ್ನಲಿ ಗ್ರಾಮಕ್ಕೆ 1 ಕೋಟಿ 53 ಲಕ್ಷ ರೂ. ಯೋಜನೆ ಬಂದಿರುವುದು ಇದೇ ಮೊದಲು, ಮನೆ ಬಾಗಿಲ ಬಳಿಗೆ ಕಾವೇರಿ ನದಿ ನೀರು ಬರುತ್ತದೆ, ಕುಡಿಯಲು ಉಪಯೋಗಿಸಿ, ಇದು 7 ಕಿ.ಮೀ ಉದ್ದದ ಕಾಮಗಾರಿಯಾಗಿದೆ, 50 ಸಾವಿರ ಲೀ. ಸಾಮರ್ಥ್ಯದ ವಾಟರ್‌ಟ್ಯಾಂಕ್ ನಿರ್ಮಾಣವಾಗುತ್ತಿದೆ ಎಂದರು.

ಮುಂದಿನ ದಿನ ದಿನಗಳಲ್ಲಿ ಬೂದನೂರ ರಸ್ತೆದಿಂದ ಕನ್ನಲಿವರಗೆ ಇರುವ ರಸ್ತೆ ಅಭಿವೃದ್ದಿಗೆ 5 ಕೋಟಿ ರೂ.ಮೀಸಲಿದೆ, ಶೀಘ್ರದಲ್ಲೇ ಟಂಡರ್ ಕರೆದು ಕಾಮಗಾರಿಯನ್ನು ಮಾಡಲಾಗುವುದು, ಹಂತ ಹಂತವಾಗಿ ರಸ್ತೆಗಳ ಅಭಿವೃದ್ದಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಲಿ ಗ್ರಾ.ಪಂ ಉಪಾಧ್ಯಕ್ಷ ನವೀನ್‌ಕುಮಾರ್, ಸದಸ್ಯರಾದ ಚಿಕ್ಕಮಾಸ್ತಿ, ಮಹೇಶ್, ಪಿಡಿಓ ಯೋಗಾನಂದ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಕನ್ನಲಿ ಚನ್ನಪ್ಪ, ನಿಮಿಷಾಂಭ ಸಂಸ್ಥೆಯ ಪುಟ್ಟಸ್ವಾಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!