ಶ್ರೀನಿವಾಸ್ ಆರ್. ಸಾಮಾಜಿಕ ಕಾರ್ಯಕರ್ತರು.
ಮದ್ದೂರು ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ ಕೆಮ್ಮಣ್ಣು ನಾಲೆಯು ಮದ್ದೂರಮ್ಮನ ಕೆರೆಯಿಂದ ಪರಿಶುದ್ಧವಾಗಿ ಹರಿದು ಬರುವ ನೀರು ಚನ್ನೇಗೌಡನ ದೊಡ್ಡಿ ಮುಖಾಂತರ ಮದ್ದೂರು ಪಟ್ಟಣ ಸೇರಿದಂತೆ ಚನ್ನಸಂದ್ರ ಉಪ್ಪಿನಕೆರೆ ನಗರಕೆರೆ ಸೋಂಪುರ ಉಪ್ಪಾರದೊಡ್ಡಿ ಮಾಲಗಾರನಹಳ್ಳಿ ಅಜ್ಜಹಳ್ಳಿ ತೊರೆಚಾಕನಹಳ್ಳಿ ಈ ಎಲ್ಲಾ ಹಳ್ಳಿಗಳ ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಿದೆ.
ಕಾಲುವೆ ಉದ್ದಕ್ಕೂ ಅನೇಕ ಕುಟುಂಬಗಳು ಈ ನೀರನ್ನು ಬಟ್ಟೆ, ಪಾತ್ರೆ ತೊಳೆಯಲು ಮತ್ತು ಸ್ಥಾನಕ್ಕೆ ಬಳಸುವ ಜೊತೆಗೆ ಜಾನುವಾರುಗಳಿಗೆ ಕುಡಿಯಲು ಮೈತೊಳೆಯಲು ಬಳಸಲಾಗುತ್ತಿದೆ.
ಈ ನಾಲೆ ನೀರು ಕಲುಷಿತಗೊಳ್ಳುವ ಹಿಂದೆ ಅನೇಕ ಗ್ರಾಮದ ಜನರು ಕುಡಿಯಲು ಹಾಗು ಧಾರ್ಮಿಕ ಕಾರ್ಯಗಳಿಗೆ ದೇವಸ್ಥಾನಕ್ಕೆ ಈ ಕಾಲುವೆ ನೀರನ್ನು ಉಪಯೋಗಿಸುತ್ತಿದ್ದರು.
ತಿಳಿಯಾಗಿ ಹರಿಯುತ್ತಿದ್ದ ಈ ಕಾಲುವೆ ನೀರು, ನೀರಿನ ಅಡಿಯಲ್ಲಿ ಕೆಂಪನೆಯ ಕೆಮ್ಮಣ್ಣಿನ ಬಣ್ಣದ್ಲಲಿ ಕಾಣುತ್ತಿದ್ದು, ಕಾಲುವೆಗೆ ನಾಣ್ಯ ಬಿದ್ದರೆ ಏರಿ ಮೇಲೆ ನಿಂತು ನಾಣ್ಯ ಗುರುತಿಸುವ ರೀತಿ ನೀರು ಸ್ವಚ್ಛಂದವಾಗಿ ಹರಿಯುತ್ತಿತ್ತು.
ಇಷ್ಟೆಲ್ಲಾ ಪವಿತ್ರತೆ ಇದ್ದ ಕಾಲುವೆಯ ಈಗಿನ ಪರಿಸ್ಥಿತಿ ಹೇಳತೀರದಾಗಿದೆ. ಏಕೆಂದರೆ ಈ ಕಾಲುವೆಯ ನೀರು ಕಲುಷಿತಗೊಂಡಿದೆ.
ಚರಂಡಿ ನೀರಿನ ಗುಣಮಟ್ಟಕಿಂತ ಬಹಳ ದುಸ್ಥಿತಿಗೆ ಕಾರಣವಾಗುತ್ತಿದೆ. ರಾಶಿರಾಶಿ ಹಳೆಯ ಬಟ್ಟೆಗಳು, ಒಡೆದ ದೇವರ ಫೋಟೋಗಳು, ಗಾಜುಗಳು, ಮದ್ಯದ ಗಾಜಿನ ಬಾಟಲ್ ಗಳು, ಪ್ಲಾಸ್ಟಿಕ್ ಚೀಲ, ಕವರ್ ಗಳು, ಸತ್ತ ಪ್ರಾಣಿಗಳು, ಕೋಳಿ-ಕುರಿ, ಮೀನು ತೊಳೆದ ಗಲೀಜು, ಹಳೆ ಮನೆ ಕೆಡವಿದ ಗಲೀಜು ಪದಾರ್ಥಗಳು, ಕಸಕಡ್ಡಿ, ಗಿಡಗಂಟೆಗಳು ಪೇಟೆಯಯಲ್ಲಿನ ತರಕಾರಿ ಹೂವಿನ ಅಂಗಡಿಯ ಕೊಳೆತ ಪದಾರ್ಥಗಳು ಇನ್ನೂ ಅನೇಕ ಹತ್ತು ಹಲವು ಬಗೆಯ ತ್ಯಾಜ್ಯವಸ್ತುಗಳನ್ನು ಕಾಲುವೆಗೆ ಬಿಡುತ್ತಿದ್ದಾರೆ.
ಕಾಲುವೆ ಏರಿ ಮೇಲೆ ಅಕ್ಕ ಪಕ್ಕ ರಾಶಿ ರಾಶಿ ಕಸದ ಗುಡ್ಡ ಕಣ್ಣಿಗೆ ರಾಚುತ್ತದೆ ರಸ್ತೆಯಲ್ಲಿ ಜನರು ಮೂಗು ಮುಚ್ಚಿಕೊಂಡು ಸಂಚರಿಸುವಂತೆ ಆಗಿದೆ.
ಇದಕ್ಕೂ ಮಿಗಿಲಾಗಿ ಕೆಲವೊಂದು ಕಡೆ ಒಳಚರಂಡಿ ಸಂಪರ್ಕ ಮತ್ತು ಕೆಲವು ಬೀದಿಗಳ ಚರಂಡಿ ಸಂಪರ್ಕವೂ ನೇರವಾಗಿ ಕಾಲುವೆಗೆ ಬಿಡಲಾಗುತ್ತದೆ. ಸ್ಥಳೀಯ ಸಾರ್ವಜನಿಕರು ಬಟ್ಟೆ ತೊಳೆಯಲು ಅಳವಡಿಸಿದ್ದ ಮೆಟ್ಟಿಲು ಚಪ್ಪಡಿ ಕಲ್ಲುಗಳು ಶಿಥಿಲಗೊಂಡಿದೆ.
ಸಾರ್ವಜನಿಕರಿಗೆ ಬಟ್ಟೆ, ಪಾತ್ರೆ ತೊಳೆಯಲು ಆಗದಂತಾಗಿದೆ. ಜಾನುವಾರುಗಳಿಗೆ ಮೈತೊಳೆಯಲು ನೀರು ಕುಡಿಸಲು ಮಾಡಿದ್ದ ಇಳಿಜಾರು ಗಿಡಗಂಟೆಗಳಿಂದ ಅಕ್ರಮಿತವಾಗಿದೆ.
ರೈತರ ಹೊಲಗದ್ದೆಗಳಿಗೆ ಕಿರುನಾಲೆ ಮೂಲಕ ನೀರು ಹಾಯಿಸಲು ಕಟ್ಟಿರುವ ತೋಬುಗಳು ಬಟ್ಟೆ-ಬದಿ ಗಿಡಗಂಟೆಗಳಿಂದ ಮುಚ್ಚಿಹೋಗಿದೆ.
ಅನೇಕ ವರ್ಷಗಳ ಹಿಂದೆ ಕಾಲುವೆಗೆ ಮಣ್ಣು ಕುಸಿಯದಂತೆ ಕಟ್ಟಿದ ಕಲ್ಲು ದಿಂಡುಗಳ ಕಟ್ಟಡಗಳು ಕುಸಿದಿದೆ.
ರೈತರು ತೂಬು ಸರಿಪಡಿಸಿ ಹೊಲಗದ್ದೆಗಳಿಗೆ ನೀರು ಕಟ್ಟಲು ಕಾಲುವೆಗೆ ಇಳಿದರೆ ಗಾಜು, ಪ್ರಾಣಿಗಳ ಮೂಳೆ ಇತರೆ ವಸ್ತುಗಳಿಂದ ರೈತರ ಕೈಕಾಲಿಗೆ ತೀವ್ರತರದ ಪೆಟ್ಟಾಗುತ್ತದೆ. ನಾಲೆಯ ಸರ್ವಿಸ್ ರಸ್ತೆ ಗೂ ಕಾಯ ಕಲ್ಪವಾಗಬೇಕಾಗಿದೆ.
ಪಾದಚಾರಿ, ವಾಹನ ಸವಾರರಿಗೆ ಮಳೆಗಾಲದಲ್ಲಿ ನೀರು ಕಾಲುವೆ ತುಂಬಿ ಹರಿಯುವುದರಿಂದ ನಾಲೆ ಯಾವುದು ಕಾಲುವೆ ಯಾವುದು ಕಾಣದಂತಾಗಿದೆ ಪಟ್ಟಣ ಪರಮಿತಿಯಲ್ಲಿ ತಡೆಗೋಡೆಗಳು ನಿರ್ಮಾಣವಾಗಬೇಕಿದೆ.
ರಸ್ತೆಯುದ್ದಕ್ಕೂ ನಾಲೆಗೆ ತ್ಯಾಜ್ಯ ಎಸೆಯದಂತೆ ಪಟ್ಟಣ ಪರಿಮಿತಿಯಲ್ಲಿ ಕಬ್ಬಿಣದ ತಂತಿ ಜಾಲರಿ ಅಳವಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯು ಕ್ರಮ ವಹಿಸಬೇಕಿದೆ.
ಇದನ್ನೂ ಓದಿ :ಕೊಡಗಿನಿಂದ ಬಂದ ಶಕ್ತಿದೇವತೆ ಮದ್ದೂರಮ್ಮನ ಕೊಂಡೋತ್ಸವ: ಸಿಡಿ- ಜಾತ್ರೆ ಭಕ್ತಿಭಾವಗಳ ಸಂಗಮ