Tuesday, May 14, 2024

ಪ್ರಾಯೋಗಿಕ ಆವೃತ್ತಿ

ಮೆಸ್ಸಿ ಮ್ಯಾಜಿಕ್‌ : ಅರ್ಜೆಂಟೀನಾಕ್ಕೆ ಫಿಫಾ ವಿಶ್ವಕಪ್


  • 36 ವರ್ಷಗಳ ನಂತರ ವಿಶ್ವಕಪ್ ಚಾಂಪಿಯನ್ ಆದ ಅರ್ಜೆಂಟೀನಾ

  • ಲಿಯೋನೆಲ್ ಮೆಸ್ಸಿ ಮಾಡಿದ ಮ್ಯಾಜಿಕ್

ವಿಶ್ವದ ಕೋಟಿ ಕೋಟಿ ಜನರು ಕ್ಷಣ ಕ್ಷಣಕ್ಕೂ ಉಸಿರು ಬಿಗಿ ಹಿಡಿದು ಕೊಂಡು ನೋಡಿದ ಫಿಫಾ ವಿಶ್ವಕಪ್‌ ಪುಟ್ ಬಾಲ್ ಪಂದ್ಯಾವಳಿಯಲ್ಲಿ ಅಂತಿಮವಾಗಿ ಅರ್ಜೆಂಟೀನಾ ತಂಡ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.

ಅರ್ಜೆಂಟೀನಾ ತಂಡ ನಾಯಕ ಲಿಯೋನೆಲ್ ಮೆಸ್ಸಿ ಮಾಡಿದ ಮ್ಯಾಜಿಕ್ ನಿಂದ 36 ವರ್ಷಗಳ ನಂತರ ವಿಶ್ವಕಪ್ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಿದೆ.

ಅರ್ಜೆಂಟೀನಾ ಚಾಂಪಿಯನ್​

 

“>

ದೋಹಾದಲ್ಲಿ ನಡೆದ ವಿಶ್ವಕಪ್​ ಫೈನಲ್​ ಹಣಾಹಣಿಯ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ ಚಾಂಪಿಯನ್​ ಪಟ್ಟ ಗೆದ್ದುಕೊಂಡಿತು. ಇದುವರೆಗಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಹಿಂದೆಂದೂ ಕಂಡಿರದ ರೋಚಕತೆ ಸೃಷ್ಟಿಸಿದ ಅರ್ಜೆಂಟೀನಾ ತಂಡದ ಲಿಯೋನೆಲ್ ಮೆಸ್ಸಿ ಹಾಗೂ ಫ್ರಾನ್ಸ್ ತಂಡದ ಕಿಲಿಯನ್ ಎಂಬಾಪೆ ತಾವೆಂತಹ ಶ್ರೇಷ್ಠ ಆಟಗಾರರು ಎಂಬುದನ್ನು ವಿಶ್ವಕ್ಕೆ ಪರಿಚಯಿಸಿದರು.
ಮೆಸ್ಸಿ ಎರಡು ಮತ್ತು ಎಂಬಾಪೆ ಮೂರು ಗೋಲು ಗಳಿಸಿ ಅಭಿಮಾನಿಗಳ ಹೃದಯ ಗೆದ್ದರು.

ವಿಶ್ವಕಪ್ ಪಂದ್ಯಾವಳಿಯ ಫೈನಲ್‌ ಪಂದ್ಯ ಮೊದಲಾರ್ಧ ಭಾಗದಲ್ಲಿ ಎರಡು ಗೋಲು ಗಳಿಸಿ ಅರ್ಜೆಂಟೀನಾ ಮೇಲುಗೈ ಸಾಧಿಸಿದರೆ, ಎರಡನೇ ಭಾಗದಲ್ಲಿ ಫ್ರಾನ್ಸ್ ತಂಡ ಎರಡು ಗೋಲು ಗಳಿಸಿ ಸಮಬಲ ಸಾಧಿಸಿತು.

ಹೆಚ್ಚುವರಿ ಅವಧಿಯಲ್ಲಿ ಅರ್ಜೆಂಟೀನಾ ತಂಡದ ಮೆಸ್ಸಿ ಮ್ಯಾಜಿಕ್ ಮಾಡಿ ಮೂರನೇ ಗೋಲು ಗಳಿಸಿದರೆ, ಕಿಲಿಯನ್ ಎಂಬಾಪೆ ಮೂರನೇ ಗೋಲು ಗಳಿಸಿ ಸ್ಕೋರ್ ಸಮ ಮಾಡಿದರು. 3-3 ರಲ್ಲಿ ಪಂದ್ಯದ ಸ್ಕೋರ್ ಸಮವಾದಾಗ ಅಂತಿಮವಾಗಿ, ಪೆನಾಲ್ಟಿ ಶೂಟ್ ಔಟ್ ಮೊರೆ ಹೋಗಲಾಯಿತು.

ಪೆನಾಲ್ಟಿಯಲ್ಲಿ 4-2 ರಲ್ಲಿ ಗೆದ್ದ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ವಿಶ್ವಕಪ್ ಚಾಂಪಿಯನ್ ಆಗಿ ಜಗತ್ತಿನ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು. ಫ್ರಾನ್ಸ್ ಪಂದ್ಯ ಸೋತರೂ ಕಿಲಿಯನ್ ಎಂಬಾಪೆ ನಾನೇ ವಿಶ್ವದ ಸ್ಟಾರ್ ಆಟಗಾರ ಎಂದು ಸಾಬೀತು ಪಡಿಸಿ,ಜಗತ್ತಿನ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದರು.

ರೋಚಕ ಪಂದ್ಯ

ಇನ್ನೇನು ಆರ್ಜೆಂಟೀನಾ ಗೆದ್ದು ಮೆಸ್ಸಿಗೆ ಸ್ಮರಣೀಯ ವಿದಾಯ ಹೇಳಬೇಕು ಎನ್ನುವಾಗಲೇ ಫ್ರಾನ್ಸ್ ನ ಕಿಲಿಯನ್ ಎಂಬಾಪೆ ನೀಡಿದ ಅನಿರೀಕ್ಷಿತ ತಿರುಗೇಟು ಕ್ರೀಡಾಭಿಮಾನಿಗಳನ್ನು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತು. ಚಾಂಪಿಯನ್‌ ಆಟದ ಎಲ್ಲ ಅವತಾರಗಳನ್ನೂ ಕಂಡ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಅಂತಿಮವಾಗಿ ಆರ್ಜೆಂಟೀನಾ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಮೆಸ್ಸಿ ಮೇನಿಯಾ

ಮೆಸ್ಸಿ ಮೇನಿಯಾದಲ್ಲಿ ಮುಳುಗಿದ್ದ ಫ‌ುಟ್‌ಬಾಲ್‌ ಜಗತ್ತಿಗೆ ಕೊನೆಯ ನಿಮಿಷದಲ್ಲಿ ಕೈಲಿಯನ್‌ ಎಂಬಾಪೆ ಮಹಾಘಾತವಿಕ್ಕಿದರು. ಇನ್ನೇನು 2-0 ಅಂತರದಿಂದ ಆರ್ಜೆಂಟೀನಾ ಗೆದ್ದೇ ಬಿಟ್ಟಿತು ಎನ್ನುವ ಹಂತದಲ್ಲೇ ಫ್ರಾನ್ಸ್‌ ತಿರುಗಿಬಿತ್ತು. 80ನೇ ನಿಮಿಷದಲ್ಲಿ ಎಂಬಾಪೆ ಆಟ ತೀವ್ರಗೊಂಡಿತು. ಬಿರುಸು ಪಡೆಯಿತು. ಒಂದೇ ನಿಮಿಷದ ಅಂತರದಲ್ಲಿ 2 ಗೋಲು ಸಿಡಿಸಿ ಪಂದ್ಯವನ್ನು ಹೆಚ್ಚುವರಿ ಅವಧಿಗೆ ಕೊಂಡೊಯ್ದರು. ಇಲ್ಲಿ ಮತ್ತೆ ಮೆಸ್ಸಿ, ಎಂಬಾಪೆ ಗೋಲು ಸಿಡಿಸಿದರು. ಶೂಟೌಟ್‌ನಲ್ಲಿ ಆರ್ಜೆಂಟೀನಾ ಗೆಲುವಿನ ನಗೆ ಬೀರಿತು.

ಹೀರೋ ಆದ ಮಾರ್ಟಿನೆಜ್

ಪೆನಾಲ್ಟಿಯಲ್ಲಿ ಅರ್ಜೆಂಟೀನಾ ಗೋಲ್ ಕೀಪರ್ ಎಮಿಲಿನಿಯೋ ಮಾರ್ಟಿನೆಜ್ ಫ್ರಾನ್ಸ್‌ ತಂಡದ ಇಬ್ಬರು ಆಟಗಾರರ ಗೋಲನ್ನು ತಡೆದು ಅರ್ಜೆಂಟೀನಾ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. ಮಾರ್ಟಿನೆಜ್ ತಡೆದ ಆ ಎರಡು ಗೋಲುಗಳೇ ಅರ್ಜೆಂಟೀನಾ ಜಯವನ್ನು ಖಚಿತ ಪಡಿಸಿತು.

ಎಂಬಾಪೆ ಹ್ಯಾಟ್ರಿಕ್ ಪಂದ್ಯದ ದ್ವಿತೀಯಾರ್ಧದಲ್ಲೂ ಫ್ರಾನ್ಸ್ ತಂಡಕ್ಕೆ ನಿರೀಕ್ಷಿತ ರೀತಿಯ ಆಟ ಪ್ರದರ್ಶಿಸಲು ಆರಂಭದಲ್ಲಿ ಸಾಧ್ಯವಾಗಿರಲಿಲ್ಲ. ಆದರೆ ಪಂದ್ಯದ 71 ನೇ ನಿಮಿಷದಲ್ಲಿ ಎಂಬಾಪ್ಪೆ ಮೊದಲ ಬಾರಿಗೆ ಗೋಲ್‌ ಪೋಸ್ಟ್ ಮಾಡಿದರು. ಬಳಿಕ 79ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಎಂಬಾಪ್ಪೆ ಗೋಲಾಗಿ ಪರಿವರ್ತಿಸಿ ಫ್ರಾನ್ಸ್‌ನ ಭರವಸೆಯನ್ನು ಜೀವಂತವಾಗಿಟ್ಟರು.

ಇಲ್ಲಿಂದ ಫ್ರಾನ್ಸ್ ತಂಡದಲ್ಲಿ ಆತ್ಮವಿಶ್ವಾಸ ಮೂಡಲು ಪ್ರಾರಂಭವಾಯಿತು. ಅದರ ಪರಿಣಾಮ ಮುಂದಿನ ಕೆಲವೇ ನಿಮಿಷಗಳಲ್ಲಿ ಅಂದರೆ ಪಂದ್ಯದ 81ನೇ ನಿಮಿಷದಲ್ಲಿ ಎಂಬಾಪ್ಪೆ ಅತ್ಯುತ್ತಮ ಗೋಲು ಗಳಿಸಿ ತಂಡವನ್ನು ಸಮಸ್ಥಿತಿಗೆ ತಂದರು. ಆದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಸಹಜವಾಗಿಯೇ ಎಂಬಾಪ್ಪೆ ಕಣ್ಣಂಚಲ್ಲಿ ನೀರು ಹರಿಯಲಾರಂಭಿಸಿತು.

ಎಂಬಾಪೆ ಸಂತೈಸಿದ ಫ್ರಾನ್ಸ್‌ ಅಧ್ಯಕ್ಷ

ಎಂಬಾಪೆ ಸಂತೈಸಿದ ಫ್ರಾನ್ಸ್‌ ಅಧ್ಯಕ್ಷ ಪಂದ್ಯದಲ್ಲಿ ಸೋಲು ಕಂಡ ಬಳಿಕ ಬೇಸರದಲ್ಲಿಯೇ ಮೈದಾನದಲ್ಲಿ ಕುಳಿತುಕೊಂಡಿದ್ದ ಕೈಲಿಯನ್‌ ಎಂಬಾಪೆ ಬಳಿ ಬಂದ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌, ಅವರನ್ನು ಸಂತೈಸಿದರು. ಅವರನ್ನು ತಬ್ಬಿಕೊಂಡು ಕೆಲ ಹೊತ್ತು ಮಾತನಾಡಿದರು. ಈ ವೇಳೆ ಎಂಬಾಪೆ ಬಳಿ ಬಂದ ಅರ್ಜೆಂಟೀನಾದ ಗೋಲ್‌ ಕೀಪರ್‌ ಎಮಿನಿಲಿಯೋ ಮಾರ್ಟಿನೆಜ್‌, ಕೂಡ ಕೈ ಹಿಡಿದು ಸಂತೈಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!