Friday, September 20, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ ಶಿಷ್ಯ ವೇತನಕ್ಕೆ ಆಯ್ಕೆ

ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮದ, ಶ್ರೀಮತಿ ವೀಣಾ ಮತ್ತು ಹನುಮೇಗೌಡರ ಪುತ್ರಿ, ಹೆಚ್ ಸಿಂಚನಾ ರವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2022-23 ನೇ ಸಾಲಿನ ಶಿಷ್ಯ ವೇತನಕ್ಕೆ ಆಯ್ಕೆಯಾಗಿದ್ದಾರೆ.

ಕಳೆದ ಹದಿಮೂರು ವರ್ಷಗಳಿಂದ ಪಟ್ಟಣದ, ಸಂಸ್ಕೃತ ನೃತ್ಯ ಶಾಲೆಯ ನಿರ್ದೇಶಕರಾದ ಶ್ರೀಮತಿ ಸಿಂಧು.ಎಸ್ ರವರ ಬಳಿ ಭರತನಾಟ್ಯ ಕಲಾಪ್ರಕಾರವನ್ನು ಅಭ್ಯಾಸ ಮಾಡುತ್ತಿದ್ದ ಇವರಿಗೆ, ಕರ್ನಾಟಕ ಸರ್ಕಾರದ ಸಂಗೀತ ನೃತ್ಯ ಅಕಾಡೆಮಿ ನೀಡಿರುವ ರೂ.10000 ಶಿಷ್ಯವೇತನಕ್ಕೆ ಆಯ್ಕೆಮಾಡಲಾಗಿದೆ, ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಎಚ್ಎಸ್ ಶಿವರುದ್ರಪ್ಪ ತಮ್ಮ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಸಂತಸ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಭರತನಾಟ್ಯ ಕಲಿಯುವ ಮೂಲಕ ಕರ್ನಾಟಕ ಸರ್ಕಾರದ ಶಿಷ್ಯವೇತನಕ್ಕೆ ಆಯ್ಕೆಯಾಗಿರುವ ಸಿಂಚನಾ.ಹೆಚ್ ಅವರಿಗೆ ಹಲವು ಸಂಸ್ಥೆಗಳು ಸೇರಿದಂತೆ ಗಣ್ಯರು ಆರೈಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!