Sunday, May 19, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆದೇಶ: ಮಾತಿನ ಚಕಮಕಿ

ರಾಜಕೀಯ ಒತ್ತಡದಿಂದ ಜೆಡಿಎಸ್ ಕಾರ್ಯಕರ್ತರ ಮ‌ನೆ ತೆರವು ಗೊಳಿಸಲು ಮುಂದಾದಾಗ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಪಾಂಡವಪುರ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಡ್ಡರಹಳ್ಳಿ ಗ್ರಾಮದ ಜೆಡಿಎಸ್ ಕಾರ್ಯಕರ್ತರ ದೇವರಾಜು ಸರಕಾರಿ ಜಾಗದಲ್ಲಿ ದನಗಳನ್ನು ಕಟ್ಟಲು ದನದಕೊಟ್ಟಿಗೆ ನಿರ್ಮಿಸಿದ್ದ ಹಿನ್ನೆಲೆಯಲ್ಲಿ ತೆರವುಗೊಳಿಸುವಂತೆ ರೈತಸಂಘದ ಕಾರ್ಯಕರ್ತರು ತಹಶೀಲ್ದಾರ್ ಅವರಿಗೆ ದೂರು ನೀಡಿದ್ದರು.

ಈ ಸಂದರ್ಭದಲ್ಲಿ ದೇವರಾಜು ವಡ್ಡರಹಳ್ಳಿ ಗ್ರಾಮದಲ್ಲಿ ನಾನೊಬ್ಬನೇ ಅಕ್ರಮವಾಗಿ ನಿರ್ಮಿಸಿಲ್ಲ, ಸರ್ವೇ ನಂ.129, 12, 130, 127, 01ರ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದಾರೆ,  ತೆರವುಗೊಳಿಸುವಂತೆ ತಹಶೀಲ್ದಾರ್ ಗೆ ಪ್ರತಿದೂರು ನೀಡಿದರು. ಆದರೆ, ರಾಜಕೀಯ ಒತ್ತಡಕ್ಕೆ ಮಣಿದು ಜೆಡಿಎಸ್ ಕಾರ್ಯಕರ್ತರ ನಿರ್ಮಿಸಿದ್ದ ದನಕ ಕೊಟ್ಟಿಗೆಯನ್ನು ಮಾತ್ರ ತೆರವುಗೊಳಿಸುವಂತೆ ತಹಶೀಲ್ದಾರ್ ಆದೇಶ ನೀಡಿದ್ದಾರೆಂದು ದೇವರಾಜು ಆರೋಪಿಸಿದ್ದಾರೆ.

ಒತ್ತುವರು ತೆರವುಗೊಳಿಸಲು ಮುಂದಾದ ಅಧಿಕಾರಿಗಳೊಂದಿಗೆ ಸ್ಥಳೀಯರ ಮಾತಿನ ಚಕಮಕಿ ನಡೆಸಿ, ತೆರವುಗೊಳಿಸುವುದಿದ್ದರೆ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಿ, ಬಳಿಕ ನಮ್ಮದನ್ನು ತೆರವುಗೊಳಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಮಧ್ಯ ಪ್ರವೇಶದಿಂದ ಸಮಾಧಾನಗೊಳಿಸಿದರು. ಬಳಿಕ ಒಂದು ತಿಂಗಳ ಗಡುವು ನೀಡಿ ಸ್ಥಳದಿಂದ ತೆರಳಿದ ರೆವಿನ್ಯೂ ಇನ್ಸ್ ಪೆಕ್ಟರ್ ಮಹೇಂದ್ರ ಅವರು ಎಚ್ಚರಿಕೆ ನೀಡಿದರು.

ರಾಜಕೀಯ ದುರುದ್ದೇಶದಿಂದ ರೈತಸಂಘದ ಕಾರ್ಯಕರ್ತರು ಮಾಡುತ್ತಿರುವ ಸೇಡಿನ ರಾಜಕೀಯ ಇದಾಗಿದೆ, ನಾನು ಕಳೆದ 10 ವರ್ಷದಿಂದ ರೈತಸಂಘದಲ್ಲಿ ಗುರುತಿಸಿಕೊಂಡಿದ್ದೆ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದೆ, ಈ ದ್ವೇಷದ ಹಿನ್ನೆಲೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ತೆರವು ಮಾಡಲು ಮುಂದಾಗಿದ್ದಾರೆಂದು ದೇವರಾಜು ಆರೋಪಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!