Sunday, May 19, 2024

ಪ್ರಾಯೋಗಿಕ ಆವೃತ್ತಿ

”ಸಚಿನ ಸ್ಥಾನ ಕೈ ತಪ್ಪಿದ್ದಕ್ಕೆ ಪೂರಿಗಾಲಿ ಹನಿ ನೀರಾವರಿ ಯೋಜನೆ ಸಿಕ್ಕಿತು” ; ನರೇಂದ್ರಸ್ವಾಮಿ

‘ನನಗೆ ಸಚಿನ ಸ್ಥಾನ ಕೈ ತಪ್ಪಿದ್ದ ಪ್ರತಿಫಲವಾಗಿ ಪೂರಿಗಾಲಿ ಹನಿ ನೀರಾವರಿ ಯೋಜನೆಯೂ ತಾಲ್ಲೂಕಿಗೆ ಸಿಕ್ಕಿತ್ತು, ಮಳೆಯಾಶ್ರಿತ ಪ್ರದೇಶದಲ್ಲಿ ಹಸಿರು ಕಾಣಬೇಕೆಂಬ ಕನಸ್ಸು ನನಸಾಗುವ ಸಮಯ ಬಂದಿದೆ’ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ನೆಲ್ಲಿಗೆರೆ ಮತ್ತು ದೊಡ್ಡ ಭೂವಹಳ್ಳಿ ಗ್ರಾಮದಲ್ಲಿ ಜೈನ್ ಇರಿಗೇಷನ್ ಜಾರಿಗೊಳಿಸುತ್ತಿರುವ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯಡಿ ಕಾವೇರಿ ನೀರಾವರಿ ನಿಗಮದ ಆಯೋಜಿಸಿದ್ದ ಫಲಾನುಭವಿಗಳ ಜೊತೆ ಯೋಜನೆಯ ಉದ್ದೇಶ ಮತ್ತು ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಚರ್ಚೆ ಹಾಗೂ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎರಡನೇ ಭಾರಿ ಶಾಸಕರಾಗಿ ಆಯ್ಕೆಯಾದ ನನಗೆ ಸಚಿನ ಸ್ಥಾನ ಕೈ ತಪ್ಪಿದ್ದ ಪ್ರತಿಫಲವಾಗಿ ಪೂರಿಗಾಲಿ ಹನಿ ನೀರಾವರಿ ಯೋಜನೆಯೂ ತಾಲ್ಲೂಕಿಗೆ ಸಿಕ್ಕಿತ್ತು. ಮಳೆಯಾಶ್ರಿತ ಪ್ರದೇಶದಲ್ಲಿ ಹಸಿರು ಕಾಣಬೇಕೆಂಬ ಕನಸು ನನಸಾಗುವ ಸಮಯ ಬಂದಿದೆ, ರೈತರು ಸಹಕಾರ ನೀಡಿದರೇ ಮಾತ್ರ ಯೋಜನೆ ಸಫಲತೆ ಕಾಣಲಿದೆ ಎಂದರು.

ನೀರು ರೈತರ ಜಮೀನುಗಳಿಗೆ ತಲುಪಿದ್ದರೂ ಕೂಡ ಇಂದಿಗೂ ಯೋಜನೆ ಬಗ್ಗೆ ರೈತರಿಗೆ ಅರಿವಿಲ್ಲ, ಅರಿವು ಮೂಡಿಸುವ ಉದ್ದೇಶದಿಂದಲೇ ತೋಟಗಾರಿಕೆ, ನೀರಾವರಿ, ಕೃಷಿ ತಜ್ಞರನ್ನು ಕರೆಸಿ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ, ರಾಜಕರಣವನ್ನು ಬದಿಗೊತ್ತಿ ದೂರಸೃಷ್ಠಿಯಿಂದ ರೈತರು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ವಿ.ಸಿ.ಫಾರಂನ ಕೃಷಿ ಯಂತ್ರೋಪಕರಣಗಳ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀದೇವಿ ಮಾತನಾಡಿ, ಹನಿ ನೀರಾವರಿ ಯೋಜನೆಯಲ್ಲಿ ಯಂತ್ರೋಪಕರಣವನ್ನು ಬಳಸಿ ಸಾಮೂಹಿಕ ಏಕ ಬೆಳೆ ಪದ್ದತಿಯಲ್ಲಿ ಬೆಳೆ ಬೆಳೆಯುವುದರಿಂದ ಕೃಷಿ ಕಾರ್ಮಿಕರ ಅವಲಂಬನೆ ಕಡಿಮೆಯಾಗುವುದರಿಂದ ಖರ್ಚು ಕಡಿಮೆಯಾಗಿ ರೈತರ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.

ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಅತಿಯಾದ ಬೇಡಿಕೆ ಇದೆ, ಸಾವಯವ ಕೃಷಿ ಬೆಳೆಯಲು ಬಿ.ಜಿ.ಪುರ ಹೋಬಳಿಯ ಭೂಮಿ ಯೋಗ್ಯವಾಗಿದ್ದು, ರೈತರು ಸಹಕಾರ ನೀಡಿದರೇ ಕೃಷಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಆರಂಭಿಸಿ ಹೆಚ್ಚು ಲಾಭ ಗಳಿಸಿಕೊಳ್ಳಬಹುದಾಗಿದೆ. ತುಂತುರು ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅಳವಡಿಸಿಕೊಂಡರೇ ಹೆಚ್ಚಿನ ನೀರು ಸದ್ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ, ಕಡಿಮೆ ನೀರಿನಲ್ಲಿ ಹೆಚ್ಚಿನ ಭೂಮಿಗೆ ನೀರನ್ನು ಒದಗಿಸಬಹುದಾಗಿದೆ, ಆಧುನಿಕ ಬೇಸಾಯ ಮಾಡುವುದರಿಂದ ಇಳುವರಿ ಹೆಚ್ಚುವುದರ ಜೊತೆಗೆ ಬೆಳೆಯ ಗುಣಮಟ್ಟವೂ ಸುಧಾರಣೆ ಕಾರಣಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಇಂದಿರಾ ಫುಡ್ಸ್ ವ್ಯವಸ್ಥಾಪಕ ವಿಜಯ್ ಕುಮಾರ್, ತೋಟಗಾರಿಕೆ ಇಲಾಖೆಯ ವಿಭಾಗೀಯ ಜಂಟಿ ಕಚೇರಿಯ ಉಪ ನಿರ್ದೇಶಕ ರುದ್ರೇಶ್, ಜಿಲ್ಲಾ ಉಪ ನಿರ್ದೇಶಕಿ ರೂಪಾಶ್ರೀ, ಹಿರಿಯ ಸಹಾಯಕ ನಿರ್ದೇಶಕ ಶಾಂತರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಸ್.ದೀಪಿಕ್, ಬೇಸಾಯ ತಜ್ಞ ಪಾಡರಂಗ ವಿಠಲ ಜೋಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!