Tuesday, May 14, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ಕರ್ಮಕಾಂಡ ಗೊತ್ತಿದ್ದರೂ ‘ಮೋದಿ ಪರಿವಾರ’ಕ್ಕೆ ಸೇರಿಸಿಕೊಂಡಿದ್ದೇಕೆ ? ; ಕಾಂಗ್ರೆಸ್ ಪ್ರಶ್ನೆ

ಹಾಸನ ಜಿಲ್ಲೆಯ ಬಿಜೆಪಿಯ ಮುಖಂಡ ದೇವರಾಜೇಗೌಡರು ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಬಗ್ಗೆ 2023ರ ಡಿಸೆಂಬರ್ 8ನೇ ತಾರೀಖಿನಂದೇ ಬಿಜೆಪಿ ನಾಯಕರ ಗಮನ ಸೆಳೆದಿದ್ದಾರೆ. ಈ ಎಲ್ಲಾ ಸಂಗತಿಗಳು ತಿಳಿದಮೇಲೂ ಸಹ ಮೋದಿಯವರು ಡಿಸೆಂಬರ್ 21ನೇ ತಾರೀಖಿನಂದು ಆರೋಪಿಗಳಾದ ಪ್ರಜ್ವಲ್ ರೇವಣ್ಣ, ರೇವಣ್ಣರನ್ನು ಪ್ರಧಾನಿ ಕಚೇರಿಗೆ ಕರೆಸಿಕೊಂಡು “ಮೋದಿ ಪರಿವಾರಕ್ಕೆ”ಕ್ಕೆ ಸೇರಿಸಿಕೊಂಡರು ಎಂದು ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿ ಕಡೆಗೆ ಬೊಟ್ಟು ಮಾಡಿದೆ.

ಮಹಿಳಾ ಪೀಡನೆಯ ವಿಷಯ ನಗಣ್ಯವಾಗಿ ಕಂಡಿತೆ ಅಥವಾ ಮಹಿಳಾ ಪೀಡನೆಯನ್ನು ಪ್ರೋತ್ಸಾಹಿಸಿ ಬೆಂಬಲ ನೀಡಿದರೆ? ಹಗರಣದ ವಿಷಯ ತಿಳಿದೂ ಸಹ ಪ್ರಜ್ವಲ್ ರೇವಣ್ಣನನ್ನು ಬಿಜೆಪಿ ಬೆಂಬಲಿಸಿದೆ ಎಂದಾದರೆ ರಾಜ್ಯದ ಮಹಿಳೆಯರ ಘನತೆಯ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಎಂದರ್ಥವಲ್ಲವೇ? ಸಾವಿರಾರು ಮಹಿಳೆಯರ ಮಾಂಗಲ್ಯಕ್ಕೆ ಕುತ್ತು ತರುವಲ್ಲಿ ಮೋದಿಯವರೂ ಪರೋಕ್ಷ ಬೆಂಬಲ ನೀಡಿದ್ದಾರೆ ಅಲ್ಲವೇ ? ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಕಾಂಗ್ರೆಸ್ ಲೇವಡಿ ಮಾಡಿದೆ.

“>

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!