Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಧ್ಯರಾತ್ರಿ ಪಾರ್ಟಿ ಪ್ರಕರಣ| ನಟ ದರ್ಶನ್ ಪರ ಮಂಡ್ಯ ಶಾಸಕ ರವಿಕುಮಾರ್ ಬ್ಯಾಟಿಂಗ್ !

ಕಳೆದ ಜನವರಿ 3 ರಂದು ಬೆಂಗಳೂರಿನ ರಾಜಾಜಿನಗರದ ಜೆಟ್‌ಲಾಗ್ ರೆಸ್ಟೋಬಾರ್‌ನಲ್ಲಿ ಬೆಳಗಿನ ಮಧ್ಯರಾತ್ರಿ 3 ಗಂಟೆಯವರೆಗೆ ಪಾರ್ಟಿ ಮಾಡಿದ ಆರೋಪದಲ್ಲಿ ಪೊಲೀಸರ ವಿಚಾರಣೆ ಎದುರಿಸುತ್ತಿರುವ ಚಿತ್ರ ನಟ ದರ್ಶನ್ ಪರ ಮಂಡ್ಯ ಶಾಸಕ ಪಿ.ರವಿಕುಮಾರ್ ಹೇಳಿಕೆ ನೀಡಿದ್ದಾರೆ.

ಈ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೆಟ್‌ಲಾಗ್ ರೆಸ್ಟೋಬಾರ್‌ ಮಧ್ಯರಾತ್ರಿ ತೆರೆದಿದ್ದರಿಂದ ನಟ ದರ್ಶನ್, ಡಾಲಿ ಧನಂಜಯ್ ಮತ್ತು ರಾಕ್‌ಲೈನ್ ವೆಂಕಟೇಶ್ ಮತ್ತಿತರರು ಊಟಕ್ಕೆ ತೆರಳಿದ್ಧಾರೆ, ಇದರಲ್ಲಿ ಅವರ ತಪ್ಪೇನಿದೆ ? ಬೆಂಗಳೂರು ಮಹಾನಗರದಲ್ಲಿ ಹೈ ಸೆಕ್ಯೂರಿಟಿ ಇರುತ್ತೆ, ದಿನನಿತ್ಯ 20 ಸಾವಿರ ಪೊಲೀಸರು ಗಸ್ತಿನಲ್ಲಿರುತ್ತಾರೆ. ಹೀಗಿರುವಾಗ ರಾತ್ರಿ 1 ಗಂಟೆಗೆ ರೆಸ್ಟೋರೆಂಟನ್ನು ಏಕೆ ಮುಚ್ಚಿಸಲಿಲ್ಲ ? ಅದು ಅವರ ಕೆಲಸವಲ್ಲವೇ ? ಮಧ್ಯರಾತ್ರಿ 3 ಗಂಟೆಯವರೆಗೆ ನಡೆಸಲು ಅವಕಾಶ ನೀಡಿದ್ಧೇಕೆ ? ಈ ಘಟನೆಯ ಹಿಂದೆ ಯಾವ್ಯಾವ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ? ಕೂಡಲೇ ಆ ಭಾಗದ ಎಸಿಪಿ, ಡಿಸಿಪಿ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ಧಾರೆ.

ಏನಿದು ಘಟನೆ

ಕನ್ನಡದ ಜನಪ್ರಿಯ ನಟ ದರ್ಶನ್ ತೂಗುದೀಪ ಮತ್ತು ಇತರ ಹಲವಾರು ಸೆಲೆಬ್ರಿಟಿಗಳು ತಮ್ಮ ಕಾಟೇರ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಗಾಗಿ ಉತ್ತರ ಬೆಂಗಳೂರಿನ ಪಬ್‌ನಲ್ಲಿ 1 ಗಂಟೆಯ ಗಡುವನ್ನು ಮೀರಿ ಪಾರ್ಟಿ ಮಾಡಿದ್ದಕ್ಕಾಗಿ ಪೋಲೀಸರು ನೋಟಿಸ್ ನೀಡಿದ್ದಾರೆ.

ಜನವರಿ 3 ರಂದು ರಾಜಾಜಿನಗರದ ಜೆಟ್‌ಲಾಗ್ ರೆಸ್ಟೋಬಾರ್‌ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನಲಾದ ಅಭಿಷೇಕ್ ಅಂಬರೀಶ್, ಡಾಲಿ ಧನಂಜಯ್ ಮತ್ತು ರಾಕ್‌ಲೈನ್ ವೆಂಕಟೇಶ್ ಅವರು ಸುಬ್ರಹ್ಮಣ್ಯನಗರ ಪೊಲೀಸರು ನೋಟಿಸ್ ನೀಡಲಾಗಿದೆ.

ರೆಸ್ಟೋಬಾರ್‌ಗಳು ಮಧ್ಯರಾತ್ರಿ 1 ಗಂಟೆಗೆ ಮುಚ್ಚಬೇಕಾಗಿದ್ದರೂ, ಸೆಲೆಬ್ರಿಟಿಗಳು ಜೆಟ್‌ಲಾಗ್‌ನಲ್ಲಿದ್ದರು ಮತ್ತು ಜನವರಿ 4 ರಂದು ಬೆಳಿಗ್ಗೆ 3.15 ರವರೆಗೆ ಮದ್ಯವನ್ನು ನೀಡಲಾಯಿತು ಎಂದು ಪೊಲೀಸರು ದೂರು ದಾಖಲಿಸಿದಕೊಂಡಿದ್ದಾರೆ.

ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಮತ್ತು ಅದರ ಮ್ಯಾನೇಜರ್ ಪ್ರಶಾಂತ ಅವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್ 36 ಬಿ ಮತ್ತು 41 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 103 ಮತ್ತು 109 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!