Sunday, May 19, 2024

ಪ್ರಾಯೋಗಿಕ ಆವೃತ್ತಿ

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೈ ಜೋಡಿಸುವೆ

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನಾನು ಕೂಡ ಕೈ ಜೋಡಿಸುತ್ತೇನೆ. ಹಂತ ಹಂತವಾಗಿ ಗ್ರಾಮಗಳ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ರೂಪಿಸುತ್ತೇನೆ ಎಂದು ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಸಬ್ಬನಹಳ್ಳಿ,ಕಡಿಲುವಾಗಿಲುಗ್ರಾಮಕ್ಕೆ ಗ್ರಾಮಸ್ಥರ ಕೋರಿಕೆಯ ಮೇರೆಗೆ ಭೇಟಿ ನೀಡಿದ ಅವರು, ಗ್ರಾಮಸ್ಥರ ಅಹವಾಲನ್ನು ಸ್ವೀಕರಿಸಿ ಮಾತನಾಡಿದರು.

ಕಡಿಲುವಾಗಿಲು ಗ್ರಾಮಸ್ಥರು ಸರ್ಕಾರಿ ಶಾಲೆಯ ಸಮಸ್ಯೆಗಳನ್ನು ತಿಳಿಸಿ, ಈ ಸರ್ಕಾರಿ ಶಾಲೆಗೆ ಅತ್ಯವಶ್ಯಕವಾಗಿರುವ ಸಭಾಂಗಣ ನಿರ್ಮಿಸಿಕೊಡುವಂತೆ ಮನವಿ ಮಾಡಿದರು ಮತ್ತು ಸಬ್ಬನಹಳ್ಳಿ ಗ್ರಾಮಸ್ಥರು ಗ್ರಾಮದ ದೇವಸ್ಥಾನಗಳಾದ ಪಟ್ಟಲದಮ್ಮ,ಸೀತಾಳಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಸಹಾಯ ಮಾಡುವಂತೆ ಅಹವಾಲು ಸಲ್ಲಿದರು.

ನಂತರ ಮಾತನಾಡಿದ ಸಮಾಜ ಸೇವಕ ಕದಲೂರು ಉದಯ್, ನಾನು ಸರ್ಕಾರಿ ಶಾಲೆಯಲ್ಲೆ ಓದಿದ್ದು, ಶಾಲೆಗಳ ಅಭಿವೃದ್ದಿಗೆ ಸದಾ ನನ್ನ ಬೆಂಬಲವಿರುತ್ತದೆ.ಈಗಾಗಲೇ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅನೂಕುಲವಾಗುವ ದೃಷ್ಟಿಯಿಂದ ಬ್ಯಾಗ್, ನೋಟ್ ಪುಸ್ತಕಗಳನ್ನು ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊಟ್ಟಿದ್ದೇನೆ.ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾರ್ಯಕ್ರಮ ಹಾಕಿಕೊಂಡು ಎಲ್ಲವನ್ನು ಸಾದ್ಯವಾದಷ್ಟು ಸರಿಪಡಿಸುತ್ತೆನೆ ಎಂದರು.

ಊರಿನ ಜನರೆಲ್ಲ ಒಗ್ಗಟ್ಟಾಗಿ ಬಂದು ದೇವಸ್ಥಾನದ ಅಭಿವೃದ್ಧಿಗೆ ಧನಸಹಾಯ ಮಾಡುವಂತೆ ಕೋರಿದ್ದಾರೆ. ಇದೆಲ್ಲವನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ದಿಗಳ ಕಡೆಗೂ ಗಮನ ಕೊಡಲಾಗುವುದು. ಈಗಾಗಲೇ ಟ್ರಸ್ಟ್ ವತಿಯಿಂದ ಸಾಕಷ್ಟು ದೇವಾಲಯಗಳ ಅಭಿವೃದ್ದಿಗೆ ಧನ ಸಹಾಯ ಮಾಡುತ್ತಾ ಬಂದಿದ್ದೇವೆ ಎಂದರು.

ಗ್ರಾಮಸ್ಥರ ಮನವಿ ಮೇರೆಗೆ ಅಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ದಿಗೆ ಧನ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಮುಖಂಡರು ಹಾಗೂ ಮರಿಗೌಡ, ಬಸವರಾಜು, ನಾಥಪ್ಪ, ಚಿಕ್ಕಣ್ಣ, ರಾಜೇಶ್, ರಮೇಶ್, ಪುಟ್ಟಸ್ವಾಮ, ನಂದೀಶ, ಜೋಗಿಶೆಟ್ಟಿ, ಕೃಷ್ಣಶೆಟ್ಟಿ, ಅಣ್ಣಯ್ಯ, ಶಿವರಾಮು, ದಿನೇಶ್ ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!