Saturday, May 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಸಂಕ್ರಾಂತಿ ಸಂಭ್ರಮ; ವಿವಿಧೆಡೆ ಬೇರೆ ದಿನಗಳಲ್ಲಿ ಆಚರಣೆ

ವರದಿ: ನ.ಲಿ.ಕೃ‍ಷ್ಣ

ಕ್ಯಾಲೆಂಡರ್ ಪ್ರಕಾರ ಈ ಬಾರಿ ಜನವರಿ 15 ಮಕರ ಸಂಕ್ರಾಂತಿ ಉತ್ತರಾಯಣ ಪುಣ್ಯಕಾಲ ಆಧಾರಿಸಿ ಜ್ಯೋತಿಷಿಗಳು ನಿರ್ಣಯಿಸಿದ ಕಾಲಮಾನ.

ಸಂಕ್ರಾಂತಿ ಎಂದರೇ ರೈತರು ತಮ್ಮ ರಾಸುಗಳನ್ನ ಸಿಂಗರಿಸಿ ಪೂಜೆ ಸಲ್ಲಿಸಿ ಕಿಚ್ಚುಹಾಯಿಸುವ ಮೂಲಕ ಆಚರಿಸುತ್ತಾರೆ,  ಬಯಲು ಸೀಮೆಯಲ್ಲಂತೂ ಇದೆ ಪ್ರಧಾನ ಚಟುವಟಿಕೆ. ಜ.15 ಸೋಮವಾರ ಬಂದ ಕಾರಣ ಹಲವೆಡೆ ಗೊಂದಲ ಉಂಟಾಯಿತು. ಕೆಲವರು ಸೋಮವಾರ ಬಸವಣ್ಣ ಹುಟ್ಟಿದ ದಿನ, ಬಸವಣ್ಣನನ್ನ ನೇಗಿಲಿಗೆ ಗಾಡಿಗೆ ಕಟ್ಟಿ ದುಡಿಸುವುದು ನಿಷಿದ್ದ ಎಂದು ಭಾವಿಸುತ್ತಾರೆ.

ಆ ದಿನ ರೈತರಿಗೆ, ಆತನ ಗೋವುಗಳಿಗೆ ರಜಾ ದಿನ ಎಂಬುದು ರೂಢಿ, ಬಸವಣ್ಣ ಹುಟ್ಟಿದ ದಿನ ರಾಸುಗಳನ್ನು ಕಿಚ್ಚಿಗೆ ( ಬೆಂಕಿಗೆ)( ಕಷ್ಟಕ್ಕೆ) ದೂಡುವುದು ಸಲ್ಲದು ಎಂಬ ಭಾವನೆಯೂ ಕೆಲವರಲ್ಲಿದೆ, ಅದಕ್ಕಾಗಿ ದಿನವಿಡಿ  ಶೃಂಗರಿಸಿ ಪೂಜಿಸುವ ರಾಸುಗಳನ್ನು ಕಿಚ್ಚಿನಲ್ಲಿ ಹಾರಿಸುವುದು ಬೇಡ ಎಂದು ಕೆಲವೆಡೆ ದಿನಾಂಕ ಬದಲಾವಣೆ ಮಾಡಿಕೊಂಡು ಸಂಕ್ರಾಂತಿ ಆಚರಿಸಿಕೊಂಡಿದ್ದು, ಈ ಬಾರಿ ಕಂಡು ಬಂತು. ಆದ್ದರಿಂದ ಈ ಬಾರಿ ಭಾನುವಾರ, ಸೋಮವಾರ ಹಾಗೂ ಮಂಗಳವಾರವು ಸಂಕ್ರಾಂತಿ ಆಚರಣೆ ನಡೆಯಲಿದೆ.

ಈ ಸಲ ಎರಡನೇ ಶನಿವಾರ, ಭಾನುವಾರ ಹಾಗೂ ಸೋಮವಾರ ಹೀಗೆ ಮೂರು ದಿನ ರಜೆ ಇದ್ದ ಕಾರಣ ಹಳ್ಳಿಯಿಂದ ಹೋಗಿ ಪೇಟೆಯಲ್ಲಿ ನೆಲೆಸಿದ್ದವರು ಮೂರುದಿನ ಹಳ್ಳಿಗೆ ತೆರಳಿ ಸಂಕ್ರಾಂತಿ ಸವಿದರು. ಆದರೆ ಬಹಳಷ್ಠು ಹಳ್ಳಿಗಳಲ್ಲಿ ಸಂಕ್ರಾಂತಿ ಬೇರೆ ಬೇರೆ ದಿನಗಳಲ್ಲಿ ಆಚರಣೆ ಮಾಡಿದ ಕಾರಣಕ್ಕೆ
ಪೇಟೆ ವಾಸಿ ಹಳ್ಳಿಗರ ಉತ್ಸಾಹಕ್ಕೆ ತಣ್ಣೀರೆರಚಿದಂತಾಯಿತು. ಬಹಳಷ್ಠು ಜನರು ಹಳ್ಳಿಗೆ ತೆರಳುವ ಬದಲು ತಾವೇ  ಪ್ರವಾಸ ನಿಗದಿ ಮಾಡಿಕೊಂಡು ಮೂರು ದಿನ ರಜೆ ಕಳೆಯತೊಡಗಿದರು. ಮಂಗಳವಾರ ಹಬ್ಬ ನಿಗದಿ ಮಾಡಿಕೊಂಡರಿಗೆ ಹಬ್ಬದ ಕಳೆಯೆ ಮಾಸಿದಂತಾಗಿದೆ. ಕಾರಣವೆಂದರೆ ಶಾಲಾ ಮಕ್ಕಳು, ಸರ್ಕಾರಿ ನೌಕರರು, ಗಾರ್ಮೆಂಟ್ಸ್ ಸೇರಿದಂತೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಕರ್ತವ್ಯಕ್ಕೆ ಹಾಜರಾಗಬೇಕಾದ ಅನಿವಾರ್ಯ ಎದುರಾಗಿದೆ, ಅಂತೂ ಇಂತು ಇದ್ದಷ್ಠು ಜನರಿಗೆ ತಮ್ಮ ರಾಸುಗಳೊಟ್ಟಿಗೆ ಕಿಚ್ಚು ಹಾಯಿಸುವರ ಮೂಲಕ ಸಂಕ್ರಾಂತಿ ಹಬ್ಬ ಸವಿ ಸವಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!