Saturday, May 18, 2024

ಪ್ರಾಯೋಗಿಕ ಆವೃತ್ತಿ

ಕೆಂಪೇಗೌಡರ ಜನಪರ ಚಿಂತನೆ ಇಂದಿನ ಜನಪ್ರತಿನಿಧಿಗಳಿಗಿರಬೇಕು

ಒಕ್ಕಲಿಗ ಸಮುದಾಯದ ಕೆಂಪೇಗೌಡರು ಎಲ್ಲಾ ಸಮುದಾಯದ ಜನರ ಅಭಿವೃದ್ಧಿಯ ಕನಸಿಟ್ಟುಕೊಂಡು ಬೆಂಗಳೂರು ನಗರ ನಿರ್ಮಾಣ ಮಾಡಿದರು. ಅವರಲ್ಲಿದ್ದ ಜನಪರ ಕಾಳಜಿ, ಅಭಿವೃದ್ಧಿಯ ದೂರದೃಷ್ಟಿಯ ಒಂದು ಪರ್ಸೆಂಟ್ ನಮ್ಮ ಜನಪ್ರತಿನಿಧಿಗಳು ಪಾಲಿಸಿದರೆ ಎಲ್ಲಾ ಸಮುದಾಯಗಳು ಅಭಿವೃದ್ಧಿ ಆಗುತ್ತವೆ ಎಂದು ಶಾಸಕ‌ ಡಿ.ಸಿ.ತಮ್ಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಮದ್ದೂರು ಪಟ್ಟಣದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡರ 513 ನೇ ಜಯಂತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಐಟಿ-ಬಿಟಿ ನಗರ ಎಂಬ ವಿವಿಧ ಹೆಸರುಗಳಿಂದ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರನ್ನು ಪ್ರತಿಯೊಬ್ಬ ಜನಾಂಗದವರು ಸ್ಮರಿಸಬೇಕೆಂದು ಕರೆ ನೀಡಿದರು.

ಸುಮಾರು 500 ವರ್ಷಗಳ ಹಿಂದೆ ಒಕ್ಕಲಿಗ ಸಮುದಾಯದ ಒಬ್ಬ ವ್ಯಕ್ತಿ ಬೆಂಗಳೂರಿಗೆ ಅಡಿಪಾಯ ಹಾಕಿ ಎಲ್ಲಾ ವರ್ಗದ ಜನರನ್ನೂ ದೃಷ್ಟಿಯಲ್ಲಿಟ್ಟುಕೊಂಡು ನಗರ ಕಟ್ಟಿದರು. ಈ ನಿಟ್ಟಿನಲ್ಲಿ ನಾವೆಲ್ಲರೂ ಅವರ ಅಭಿವೃದ್ಧಿ ಚಿಂತನೆಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಕಿವಿ ಮಾತು ಹೇಳಿದರು.

ಆದರೆ ಇತ್ತಿಚೆಗೆ ಈ ಒಕ್ಕಲಿಗ ಸಮಾಜಕ್ಕೆ ಮೂರು ಅಂಟು ರೋಗಗಳು ಬಂದಿವೆ. ಮಚ್ಚರಿಸೋದು, ಒತ್ತರಿಸೋದು, ಕತ್ತರಿಸೋದು. ಇವುಗಳನ್ನು ಬಿಟ್ಟರೆ ಬೇರೆನೂ ಗೊತ್ತಿಲ್ಲ. ಪ್ರತಿದಿನ ಕೋರ್ಟ್, ಕಛೇರಿ, ಪೋಲೀಸ್ ಠಾಣೆ ಅಂತ ಅಲೆದು ಅಲೆದು ತನ್ನ ಜೀವನದ ಅರ್ಧ ವಯಸ್ಸನ್ನು ವ್ಯರ್ಥ ಮಾಡುತ್ತಿದ್ದಾನೆ ಎಂದು ವಿಷಮ ವ್ಯಕ್ತಪಡಿಸಿದರು.

ನೆರೆಯ ಕೋಲಾರ ಜಿಲ್ಲೆಗೆ ಹೋಲಿಸಿಕೊಂಡರೇ ಮಂಡ್ಯ ಜಿಲ್ಲೆ ಏನೇನು ಅಭಿವೃದ್ಧಿ ಕಂಡಿಲ್ಲ. ಕೋಲಾರ ಜಿಲ್ಲೆ ಒಣ ಭೂಮಿ ಪ್ರದೇಶವಾದರೂ ಕೃಷಿ, ತೋಟಗಾರಿಕೆ, ವಿದ್ಯಾವಂತರು, ಸರ್ಕಾರಿ ನೌಕರರು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಮುಂದುವರೆದಿದೆ ಎಂದರು.

ದಿನೇಶ್ ಗೂಳಿ ಗೌಡ ಮಾತನಾಡಿ, ಜಿಲ್ಲೆಯ ಏಳು ತಾಲೂಕಿನಲ್ಲಿ ಕೆಂಪೇಗೌಡ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಉತ್ತರಕ್ಕೆ ಯನ್ನು ಸ್ಥಾಪನೆ ಮಾಡಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಒಕ್ಕಲಿಗರ ಭವನ ಕಟ್ಟಬೇಕು.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ನಾನು ಮನವಿ ಸಲ್ಲಿಸುತ್ತೇನೆ. ಮದ್ದೂರಿನಲ್ಲಿ ಕೊಲ್ಲಿ ವೃತ್ತ ಹಾಗೂ.ಟಿ.ಬಿ. ವೃತ್ತದಲ್ಲಿ ಕೆಂಪೇಗೌಡ ಪುತ್ತಳಿ ಕೆ ನಿರ್ಮಾಣ ಮಾಡಲು ನಾನು ನನ್ನ ಅನುದಾನವನ್ನು ನೀಡುತ್ತೇನೆ ಎಂದರು ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ದೇಶಹಳ್ಳಿ ಶಿವಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಕಸಾಪ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್, ಪುರಸಭಾ ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಅಜ್ಜಹಳ್ಳಿ ರಾಮಕೃಷ್ಣ, ಶಂಕರಯ್ಯ, ಸುರೇಶ್, ರವಿ, ರಾಮಚಂದ್ರ, ರಾಜೇಶ್ ಹಾಗೂ ಸಂಘದ ಪದಾಧಿಕಾರಿಗಳು, ತಾಲ್ಲೂಕಿನ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!