Sunday, May 19, 2024

ಪ್ರಾಯೋಗಿಕ ಆವೃತ್ತಿ

ಇದು ದಶಪಥದ ರಸ್ತೆಯಲ್ಲ, ಆರು ಪಥದ ರಸ್ತೆ ಎಂದ NHAI ಯೋಜನಾ ನಿರ್ದೇಶಕ !

ಬೆಂಗಳೂರು ಮೈಸೂರು ಹೆದ್ದಾರಿ ದಶಪಥ ರಸ್ತೆಯಲ್ಲ ಆರು ಪಥದ ರಸ್ತೆ ಎಂದು ಎನ್ ಹೆಚ್ ಎ ಐ (National Highways Authority of India) ಯೋಜನಾ ನಿರ್ದೇಶಕ ಶ್ರೀಧರ್ ಅವರು ತಿಳಿಸಿದ್ದಾರೆ.

ಸರ್ಕಾರದ ಕ್ಯಾಬಿನೆಟ್ ನಿಂದ ಆರು ಪತ್ರದ ರಸ್ತೆಗೆ ಅನುಮೋದನೆ ದೊರೆತಿದ್ದು ಇದು ಆರು ಪದದ ರಸ್ತೆ ಅಷ್ಟೇ. ನಾವು ಮಾಡಿರುವುದು ಆರು ಪಥದ ರಸ್ತೆ. ಎಲ್ಲರಿಗೂ ಸರ್ವಿಸ್ ರೋಡ್ ಮಾಡಿಕೊಟ್ಟು ಬಿಟ್ಟರೆ ಟೋಲ್ ರಸ್ತೆಯಲ್ಲಿ ಓಡಾಡುವವರು ಯಾರು ? ಸುಂಕ ನೀಡುವವರು ಯಾರು ? ಎಂಬ ಹೇಳಿಕೆಯಿಂದ ಹಲವಾರು ಗೊಂದಲಕ್ಕೆ ಕಾರಣವಾಗಿದೆ.

ಆದರೆ ಇದುವರೆಗೆ ಒಕ್ಕೂಟ ಸರ್ಕಾರ ಇದು ದಶಪಥದ ರಸ್ತೆ ಎಂದು ಬಿಂಬಿಸಿ, ಒಂದು ಕಡೆ ಸರ್ಕಾರ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ. ಇನ್ನೊಂದು ಯೋಜನಾ ನಿರ್ದೇಶಕರೇ ಇದು ದಶ ಪಥ ಹೆದ್ದಾರಿಯಲ್ಲ, ಆರು ಪಥದ ರಸ್ತೆ ಎಂದು ಹೇಳಿಕೆ ನೀಡಿ, ಎಲ್ಲರೂ ಸರ್ವೀಸ್ ರಸ್ತೆಯಲ್ಲೇ ಓಡಾಡಿದರೆ ಟೋಲ್ ಕಟ್ಟುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಹಾಸನದಲ್ಲಿ ಟೋಲ್ ಕಟ್ಟುತ್ತಿಲ್ಲವಾ…ಸಂಸದ ಪ್ರತಾಪ್ ಸಿಂಹ ಪ್ರಶ್ನೆ

ಮೈಸೂರು-ನಂಜನಗೂಡು-ಗುಂಡ್ಲುಪೇಟೆ ಹೈವೇ ಹಾಗೂ ಬೆಂಗಳೂರು – ಹಾಸನ – ಮಂಗಳೂರು ಹೈವೇ ನಲ್ಲಿ ಸರ್ವಿಸ್ ರೋಡ್ ಮಾಡಿದ್ದಾರಾ ? ಅಲ್ಲಿ ಟೋಲ್ ಕಟ್ಟುತ್ತಿಲ್ಲವಾ ? ಇಲ್ಲೇಕೆ ಪ್ರಶ್ನೆ ಮಾಡುತಿದ್ದೀರಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

“>

ಕೆಂಗೇರಿಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಕೇವಲ 17 ಕಿ.ಮೀ. ರಸ್ತೆಗೆ ₹80 ಟೋಲ್ ಕಟ್ಟುತ್ತಿಲ್ಲವಾ ? ಎಂದು ಬೆಂಗಳೂರು-ಮೈಸೂರು ಹೆದ್ಧಾರಿಗೆ ವಿಧಿಸಿರುವ ಟೋಲ್ ಬಗ್ಗೆ ಸಮರ್ಥನೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!