Sunday, March 3, 2024

ಪ್ರಾಯೋಗಿಕ ಆವೃತ್ತಿ

ವಾಲಿಬಾಲ್ ಸ್ಪರ್ಧೆ| ಸರ್ಕಾರಿ ಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮದ್ದೂರು ತಾಲ್ಲೂಕಿನ  ಭಾರತೀನಗರ ಸಮೀಪದ ಮಾಲಗಾರನಹಳ್ಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಬಾಲಕ-ಬಾಲಕೀಯರ ವಾಲಿಬಾಲ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

2023-2024 ನೇ ಸಾಲಿನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆಂದು ಸರ್ಕಾರಿ   ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮಸುಂದರ್ ತಿಳಿಸಿದ್ದಾರೆ.

ಕ್ರೀಡಾ ವಿದ್ಯಾರ್ಥಿಗಳು, ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ಅಣ್ಣೂರು ಎಸ್.ಕುಮಾರ್ ಅವರನ್ನು ಗ್ರಾ.ಪಂ ಅಧ್ಯಕ್ಷರು-ಸದಸ್ಯರು ಸೇರಿದಂತೆ ಶಾಲಾ ಮುಖ್ಯ ಶಿಕ್ಷಕ ಸೋಮಸುಂದರ್, ಶಿಕ್ಷಕರಾದ ಸುಕನ್ಯ, ಲಲಿತ, ನಾಗರಾಜು, ರಾಜೇಂದ್ರ, ಲೋಕೇಶ್, ಜಯರಾಮು ಅವರು ಅಭಿನಂದಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!