Saturday, May 18, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಕಾರ್ಯಕರ್ತರೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದಾಗ ಗಲ್ಲಿಗೆ ಹಾಕಿಲ್ಲವೇಕೆ: ಕಾಂಗ್ರೆಸ್

ಬಿಜೆಪಿಗೆ ಸದಾ ಪಾಕಿಸ್ತಾನದ ಪ್ರೀತಿ, ಪ್ರೇಮ ಉಕ್ಕಿ ಹರಿಯುತ್ತದೆ, ಸದಾ ಪಾಕಿಸ್ತಾನದ ಜಪ ಮಾಡುತ್ತಿರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಈ ಹಿಂದೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ್ದ ವಿಡಿಯೋವನ್ನು ಹಂಚಿಕೊಂಡು ಬಿಜೆಪಿಗೆ ತಿರುಗೇಟು ನೀಡಿದೆ.

ನಸೀರ್ ಸಾಬ್ ಜಿಂದಾಬಾದ್ ಎಂದಿದ್ದನ್ನು ತಿರುಚಿ ಬೊಬ್ಬೆ ಹೊಡೆಯುತ್ತಿರುವ ಬಿಜೆಪಿಯು ತನ್ನ ಆಡಳಿತದ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರು, ಅವರನ್ನು ಗಲ್ಲಿಗೆ ಹಾಕಿಲ್ಲವೇಕೆ? ಅವರ ಮೇಲೆ ಪ್ರಕರಣ ದಾಖಲಿಸಿಲ್ಲ ಏಕೆ? ಎಂದು ಪ್ರಶ್ನೆ ಮಾಡಿದೆ.

“>

ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರನ್ನು ಏಕಮೇವ ನಾಯಕನೆಂದು ಕೊಂಡಾಡುವ ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದೆ.

“>
ಘಟನೆ ನಡೆದ ಸ್ಥಳದಲ್ಲಿ ಹಾಜರಿದ್ದ ಹಲವು ಪತ್ರಕರ್ತ ಮಿತ್ರರು ಅಲ್ಲಿ ನಡೆದ ಸತ್ಯವನ್ನು ಹೊರಹಾಕಿದ್ದಾರೆ, ಅಲ್ಲಿ ನಸೀರ್ ಸಾಬ್ ಜಿಂದಾಬಾದ್ ಎಂದಿದ್ದಾರೆಯೇ ಹೊರತು ಪಾಕಿಸ್ತಾನ್ ಜಿಂದಾಬಾದ್ ಎಂದಿಲ್ಲ ಎಂಬ ಸತ್ಯವನ್ನು ಪ್ರತ್ಯಕ್ಷದರ್ಶಿಯಾಗಿ ಜಗತ್ತಿಗೆ ತಿಳಿಸಿದ್ದಾರೆ, ಟೂಲ್ ಕಿಟ್ ಬಿಜೆಪಿ ಈ ಪತ್ರಕರ್ತರ ಮಾತುಗಳಿಗೆ ಕಣ್ಣು ಕಿವಿ ಮುಚ್ಚಿಕೊಂಡಿರುವುದೇಕೆ? ಎಂದು ‘ಎಕ್ಸ್’ನಲ್ಲಿ ಪ್ರಶ್ನಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!