Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮರ ಬಿದ್ದು ಯುವಕ ಸಾವು: ಶಾಸಕರಿಂದ 1 ಲಕ್ಷ ರೂ. ಪರಿಹಾರ

ಮಂಡ್ಯ ನಗರದ ಶಿಲ್ಪ ನರ್ಸಿಂಗ್ ಹೋಂ ಪಕ್ಕ ಮರ ಒಂದು ಉರುಳಿ ಬಿದ್ದು ಸಾವಿಗೀಡಾದ ದುದ್ದ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್ ಕುಟುಂಬಕ್ಕೆ ಸಾಂತ್ವನ ಹೇಳಿದ ಮಂಡ್ಯ ಶಾಸಕ ರವಿ ಕುಮಾರ್ ವೈಯಕ್ತಿವಾಗಿ ಒಂದು ಪಕ್ಷ ರೂ.ಗಳ ಪರಿಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಮೃತ ಯುವಕನ ಪಾರ್ಥಿವ ಶರೀರದ ದರ್ಶನ ಪಡೆದ ಅವರು, ಕಾರ್ತಿಕ್ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ನಗದು ಹಸ್ತಾಂತರಿಸಿದರು.

ಮಳೆಗೆ ಮರಗಳು ಬಿದ್ದಿವೆ. ಬೀಳುವ ಮರಗಳನ್ನ ಕಟ್ ಮಾಡಲು ಅರಣ್ಯ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ.
ಮೃತ ಕಾರ್ತಿಕ್ ಕುಟುಂಬಕ್ಕೆ ಸರ್ಕಾರದಿಂದ ಐದು ಲಕ್ಷ ಪರಿಹಾರ ಕೊಡಲಾಗುತ್ತದೆ. ಅದಕ್ಕೂ ಮೊದಲೇ ವೈಯಕ್ತಿಕವಾಗಿ ಒಂದು ಲಕ್ಷ ರೂ ಕೊಡ್ತಿದ್ದೇನೆ ಎಂದು ಶಾಸಕ ರವಿಕುಮಾರ್ ತಿಳಿಸಿದರು.

ಕೆಲವು ಕಡೆ ಮರಗಳು ಒಣಗಿವೆ, ಅಂತಹ ಮರಗಳನ್ನು ತೆರವು ಮಾಡಲು ಸಾರ್ವಜನಿಕರು ಸಹಕರಿಸಿ,
ಮರಗಳು ಎಷ್ಟು ಮುಖ್ಯವೋ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆಕೊಳ್ಳುವುದು ಅಷ್ಟೆ ಮುಖ್ಯ ಎಂದು ಸಲಹೆ ನೀಡಿದರು.

ಬಿರುಗಾಳಿ ಮಳೆಗೆ ಬಲಿ

ಮಂಡ್ಯ ನಗರದಲ್ಲಿ ಸೋಮವಾರ ರಾತ್ರಿ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಮರವೊಂದು ಕಾರಿನ ಮೇಲೆ‌ ಉರುಳಿದ ಪರಿಣಾಮ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿತ್ತು.

ಮಂಡ್ಯ ತಾಲೂಕು ಜಿ.ಬೊಮ್ಮನಹಳ್ಳಿ ಗ್ರಾಮದ ರಾಮಯ್ಯ ಅವರ ಪುತ್ರ ಕಾರ್ತಿಕ್(27) ಮೃತ ಯುವಕ.ಕಾರ್ತಿಕ್ ಅವರ ತಂದೆ ರಾಮಯ್ಯ ಅನಾರೋಗ್ಯದಿಂದ ನಗರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ನೋಡಲು ಕಾರ್ತಿಕ್ ಬಂದಿದ್ದ.ಅಲ್ಲದೆ ಮಂಗಳವಾರ ಕಾರ್ತಿಕ್ ಜನ್ಮದಿನವಿತ್ತು. ತಂದೆಯ ಆರೋಗ್ಯ ವಿಚಾರಿಸಿಕೊಂಡು ನಂತರ ಹೊಸ ಬಟ್ಟೆ ಖರೀದಿಸುವ ಭಾಗವಾಗಿ ಮೊದಲು ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯ ಆರೋಗ್ಯ ವಿಚಾರಿಸಿ ಹೊರಬರುತ್ತಿದ್ದಂತೆ ರಾತ್ರಿ ಎಂಟು ಗಂಟೆ ಸುಮಾರಿಗೆ ಜೋರು ಮಳೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ತಿಕ್ ಬೈಕ್ ನಿಲ್ಲಿಸಿ ಸ್ನೇಹಿತನ ಕಾರು ಹತ್ತಿ ಕುಳಿತಿದ್ದನು. ದುರಾದೃಷ್ಟವಶಾತ್ ಬೃಹತ್ ಗಾತ್ರದ ಮರ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಕಾರಿನಲ್ಲಿದ್ದ ಕಾರ್ತಿಕ್ ಸ್ನೇಹಿತರಾದ ಸುನಿಲ್ ಹಾಗೂ ಮಂಜು ಪಾರಾಗಿದ್ದರು.

ಸ್ಥಳಕ್ಕೆ ಮಂಡ್ಯದ ಪೂರ್ವ ಠಾಣೆಯ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಕ್ರೇನ್ ಸಹಾಯದಿಂದ ನಜ್ಜು ಗುಜ್ಜಾಗಿದ್ದ ಮಾರುತಿ ಆಮ್ನಿಯಿಂದ ಕಾರ್ತಿಕ್ ಶವ ಹೊರತೆಗೆದರು. ನಂತರ ಮೃತ ದೇಹವನ್ನು ಮಿಮ್ಸ್ ಶವಗಾರಕ್ಕೆ ಸಾಗಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!