ದಾಸ್ತೊವಸ್ಕಿಯ ‘ದ ಈಡಿಯಟ್’ ಕಾದಂಬರಿಯ ‘ಪ್ರಿನ್ಸ್ ಮಿಸ್ಕಿನ್’ ಎಂಬ ಪ್ರಧಾನ ಪಾತ್ರದ ಪ್ರಭಾವದಿಂದ ಇಟ್ಟುಕೊಂಡ ಹೆಸರು.
‘ಅಂಜಾದೆ’ ಸಿನಿಮಾ ನೋಡಿದ ಮೇಲೆ, ಇವ ಸಮಾಜವನ್ನ ಗ್ರಹಿಸುವ ರೀತಿ ಹೊಸದೆನಿಸುವ ಕಾರಣಕ್ಕೆ ಈತನ ಎಲ್ಲಾ ಸಿನಿಮಾಗಳನ್ನ ಬಹಳ ಕುತೂಹಲಕಾರಿಯಾಗಿವೆ. ಚಿತ್ರಂ ಪೇಸದಡಿ, ನಂದಲಾಲ, ಯುದ್ಧಂ ಸೈ, ಮುಗಮುಡಿ, ಓನಾಯಂ ಆಟುಕುಟ್ಟಿಯುಂ, ಪಿಸಾಸು ವರೆಗೆ. (ಯುದ್ಧಂ ಸೈ ಅವನ ಸಿನಿಮಾಗಳಲ್ಲೆ ತುಂಬಾ ಉತ್ತಮವಾಗಿ ಮೂಡಿ ಬಂದಿರುವ ಚಿತ್ರ)
ತುಪಾರಿವಾಲನ್ ನೋಡುವಷ್ಟರಲ್ಲಿ ಬಹಳ ನಿರಾಸೆ ಆಯ್ತು. ಈ ಸಿನಿಮಾ ನಿರ್ದೇಶಕರು ಯಾರು ಅಂತ ಗೊತ್ತಿಲ್ಲದೆ ಇದ್ದರೂ ಅದರ ಮೇಕಿಂಗ್ ಸ್ಟೈಲ್ ನೋಡಿ ಇದು ಮಿಸ್ಕಿನ್ ಸಿನಿಮಾ ಅಂತ ಊಹಿಸಲು ಕಷ್ಟವಾಗಲಿಲ್ಲ. ಇವನ ಮೇಕಿಂಗ್ ಸ್ಟೈಲ್ ಅಷ್ಟು ಏಕತಾನತೆಯ ಅನಿಸಿಬಿಟ್ಟಿತು. ಆ ನಂತರದ ಅವನ ಸಿನಿಮಾಗಳನ್ನು ನೋಡುತ್ತಿರುವಾಗ…ಮಿಸ್ಕಿನ್ ತಲೆ ಕಾಲಿಯಾಗಿಬಿಟ್ಟಿದೆ ಎಂದು ಅನಿಸತೊಡಗಿತು.
ಇವತ್ತಿಗೆ ಮಿಸ್ಕಿನ್ ಸಿನಿಮಾಗಳು ಹೈಲಿ ಡ್ರಮ್ಯಾಟಿಕ್ ಅನಿಸಿದರೂ… ಅವನ ಸಿನಿಮಾಗಳಲ್ಲಿ ಒಳಿತು ಮತ್ತು ಕೆಡುಕನ್ನು ಗ್ರಹಿಸುವ ರೀತಿ ಭಾರತದ ಸಿನಿಮಾಗಳಿಗೆ ಹೊಸ ದೃಷ್ಟಿಕೋನ.
ಮನುಷ್ಯನ ನಡೆವಳಿಕೆಯನ್ನ ಅವನ ಸಾಮಾಜಿಕ ಪರಿಸರದ ಹಿನ್ನಲೆಯಿಂದ ಗ್ರಹಿಸೋದು ನನ್ನ ತಿಳಿವಳಿಕೆ ಮಟ್ಟಿಗೆ ನಮ್ಮ ಸಿನಿಮಾ ಪರಿಸರದಲ್ಲಿ ಹೊಸದು.