ರಾಮನವಮಿಯಂದು ಹಾಸ್ಟೆಲ್ ಮೆಸ್‌ನಲ್ಲಿ ಮಾಂಸ ಬಡಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಏಪ್ರಿಲ್ 10 ರಂದು ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರತೀಕಾರವಾಗಿ ಹಿಂದೂ ಸೇನೆಯು ಗುರುವಾರ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸುತ್ತಲೂ ಕೇಸರಿ ಧ್ವಜ ಮತ್ತು ಪೋಸ್ಟರ್‌ಗಳನ್ನು ಹಾಕಿದೆ. ಆದರೆ, ಶುಕ್ರವಾರ ಬೆಳಗ್ಗೆ ದೆಹಲಿ ಪೊಲೀಸರು ಧ್ವಜಗಳನ್ನು ತೆಗೆದಿದ್ದಾರೆ. ಹಿಂದುತ್ವ ಗುಂಪು ಹಾಕಿರುವ ಧ್ವಜಗಳು ಮತ್ತು ಪೋಸ್ಟರ್‌ಗಳಲ್ಲಿ “ಭಗವಾ [ಕೇಸರಿ] ಜೆಎನ್‌ಯು” ಎಂದು ಬರೆಯಲಾಗಿದೆ.
ಜೆಎನ್‌ಯು ಕ್ಯಾಂಪಸ್‌ನಲ್ಲಿ “ಕೇಸರಿ ಮತ್ತು ಹಿಂದುತ್ವ”ವನ್ನು ನಿಯಮಿತವಾಗಿ ಅವಮಾನಿಸಲಾಗುತ್ತಿದೆ ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಹೇಳಿದ್ದಾರೆ.