Tuesday, May 21, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ಎಂಬ ಯುವರಾಜ ಮತ್ತು ಸಾಮಾನ್ಯ ಕಾರ್ಯಕರ್ತರು !

ಯಾವುದೇ ಪಕ್ಷ ಅಥವಾ ಸಂಘಟನೆಯಾಗಲಿ ನಾಯಕತ್ವ ಅಥವಾ ನಾಯಕರು ತಳಮಟ್ಟದಿಂದ ಬಡ್ತಿ ಪಡೆಯುತ್ತ ಮೇಲಿನ ಹಂತಕ್ಕೆ ಹೋಗಬೇಕು ಎನ್ನುವುದು ಅಲಿಖಿತ ನಿಯಮ.

ಗ್ರಾಮ ಪಂಚಾಯತಿ ಸದಸ್ಯರಾಗಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸದಸ್ಯರಾಗಿ ನಂತರ ಶಾಸಕ, ಸಂಸದರಾದರೆ ಆಗ ಅವರಿಗೆ ಸಮಾಜದ ನಾಡಿ ಮಿಡಿತ, ಜನರ ಕಷ್ಟ ಸುಖಗಳು, ಯಾವುದು ಸರಿ,ಯಾವುದು ತಪ್ಪು,ಯಾವ ಜನರೊಂದಿಗೆ ಹೇಗೆ ವ್ಯವಹರಿಸಬೇಕು,ಯಾವರೀತಿ ಮಾತನಾಡಬೇಕು,ಯಾವ ರೀತಿ ನಡವಳಿಕೆ ಇರಬೇಕು ಎಂಬ ಅಂಶಗಳು ಕರತಲಾಮಲಕವಾಗಿರುತ್ತೆ.

ಆದರೆ ಕೆಲವು ಯುವರಾಜರಿಗೆ ಉದಾಹರಣೆಗೆ ಪ್ರಜ್ವಲ್ ರೇವಣ್ಣನಂತಹವರಿಗೆ ಕುಟುಂಬದ ಹಿನ್ನಲೆಯ ಕಾರಣಕ್ಕೆ ಅನಾಯಾಸವಾಗಿ ಹುದ್ದೆ, ಅಧಿಕಾರ ಸಿಕ್ಕಿ ಬಿಡುವುದರಿಂದ ಇಂಥಹವರಿಗೆ ತಳಮಟ್ಟದ ತಿಳುವಳಿಕೆ, ಸಾರ್ವಜನಿಕ ಜೀವನದ ನೀತಿ ನಿಯಮಗಳು ಅರ್ಥವಾಗದೆ ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಲೈಂಗಿಕ ಹಗರಣಗಳಲ್ಲಿ ಅನಾಯಾಸವಾಗಿ ಸಿಲುಕಿಕೊಳ್ಳುತ್ತಾರೆ ಎಂದು ರಾಜಕೀಯ ಪಂಡಿತರುಗಳು ಅಭಿಪ್ರಾಯ ಪಡುತ್ತಾರೆ.

ಇನ್ನಾದರೂ ಎಲ್ಲಾ ಪಕ್ಷಗಳು ಕುಟುಂಬ ರಾಜಕಾರಣದ ಕಾರಣಕ್ಕಾಗಿ ತಮ್ಮ ಮಕ್ಕಳ ಕೈಗೆ ಅನಾಯಾಸವಾಗಿ ಉನ್ನತ ಹುದ್ದೆ, ರಾಜಕೀಯ ಅಧಿಕಾರ ನೀಡಲು‌ ಹಾತೊರೆಯುತ್ತಿರುತ್ತಾರೆ. ಆತ ಹಿರಿಯ ನಾಯಕರಂತೆ ಪಕ್ಷದ ಬಾವುಟ ಕೂಡ ಕಟ್ಟಿರೋಲ್ಲ. ರಾಜಕೀಯದಲ್ಲಿ ಸಾಕಷ್ಟು ಹೆಸರು ಮಾಡಿರುವ ತಂದೆ-ತಾಯಿಯರು ತಮ್ಮ ಮಕ್ಕಳು ಕೂಡ ರಾಜಕೀಯದಲ್ಲಿ ಬೆಳೆಯಬೇಕು ಎಂಬ ಆಸೆ ಪಟ್ಟಿರುತ್ತಾರೆ. ಅವರು ಬೇಗ ಶಾಸಕ, ಸಂಸದನಾಗಬೇಕು ಎಂಬ ಆಸೆಯಿಂದ ಪಕ್ಷದ ವರಿಷ್ಠರ ಕಾಡಿಬೇಡಿ ಟಿಕೆಟ್ ಗಿಟ್ಟಿಸಿಕೊಂಡು ಚುನಾವಣೆಗೆ ನಿಂತು‌ ಅಧಿಕಾರ ಅನಾಯಾಸವಾಗಿ ಅಧಿಕಾರ ಪಡೆಯುತ್ತಾರೆ.

ಆದರೆ ಹಲವಾರು ವರ್ಷಗಳಿಂದ ಬಾವುಟ,ಬ್ಯಾನರ್ ಕಟ್ಟಿ ಪಕ್ಷ ಬೆಳೆಸಿದ ಕಾರ್ಯಕರ್ತರ ಪರಿಸ್ಥಿತಿ ಮಾತ್ರ ತೀರಾ ದುಸ್ಥಿಯಲ್ಲಿರುತ್ತದೆ. ಅವರಿಗೆ ಇಂದು ಯಾವ ಪಕ್ಷವೂ ಮಣೆ ಹಾಕುವುದಿಲ್ಲ. ಹಣವಿದ್ದವರಿಗೆ ಟಿಕೆಟ್ ನೀಡುವ ಕೆಟ್ಟ ಸಂಪ್ರದಾಯ ಇಂದು ಉದ್ಭವಿಸಿದೆ. ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ರಾಜಕೀಯ ಕಾರಣದಿಂದ ಹಣ, ಅಧಿಕಾರ ನೋಡಿದ ಯುವ ರಾಜಕಾರಣಿಗಳಲ್ಲಿ ಅನೇಕರು ಇಂದು ಡ್ರಗ್ಸ್ ವ್ಯಸನಿಗಳಾಗಿರುವುದನ್ನು, ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿರುವುದನ್ನು ನೋಡುತ್ತಿದ್ದೇವೆ. ಪ್ರಜ್ವಲ್ ರೇವಣ್ಣ ವಿಕೃತ ಕಾಮದ ಕಾರಣದಿಂದ ಸಿಕ್ಕಿ ಬಿದ್ದರೆ, ಅನೇಕರು ಯಾರ ಕೈಗೂ ಸಿಗದೆ ತಮ್ಮದೇ ಕಾಮಲೋಕದಲ್ಲಿ ವಿಜೃಂಭಿಸುತ್ತಿದ್ದಾರೆ. ಆದರೆ ಸಿಕ್ಕಿ ಬಿದ್ದಿಲ್ಲ ಅಷ್ಟೇ.

ಈಗ ಸರ್ಕಾರ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಿಭಾಯಿಸುವ ಮೂಲಕ ಯುವ ರಾಜಕಾರಣಿಗಳಿಗೆ ಎಚ್ಚರಿಕೆಯ ಸಂದೇಶ ನೀಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!