Saturday, May 18, 2024

ಪ್ರಾಯೋಗಿಕ ಆವೃತ್ತಿ

ಮೈತ್ರಿ ಗೃಹ ನಿರ್ಮಾಣ ಸಹಕಾರ ಸಂಘ ಸಾಮಾನ್ಯ ಸಭೆ

ಮಂಡ್ಯದ ಮೈತ್ರಿ ಗೃಹ ನಿರ್ಮಾಣ ಸಹಕಾರ ಸಂಘದ ಸಾಮಾನ್ಯಸಭೆಯು ಸೆ.24ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ರೈತ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ  ಆರ್.ಎನ್. ಪರಶಿವಮೂರ್ತಿ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಗೆ ಎಲ್ಲಾ ಷೇರುದಾರರಿಗೆ ಅಂಚೆಯ ಮೂಲಕ ಸಭೆಯ ಆಮಂತ್ರಣ ಪತ್ರ ತಲುಪಿಸಲಾಗಿದೆ. ಆಕಸ್ಮಿಕವಾಗಿ ಆಮಂತ್ರಣ ಸಿಗದ ಷೇರುದಾರರುಗಳು ಇದನ್ನ ಆಮಂತ್ರಣವೆಂದು ತಿಳಿದು ಆಗಮಿಸಬೇಕೆಂದರು.

ಸಂಘವು ಮೈಸೂರಿನ ವಿಭಾಗೀಯ ಸಹಕಾರ ಸಂಘಗಳ ನೋಂದಣಿ ಕಛೇರಿಯಿಂದ ಅಧಿಕೃತವಾಗಿ ನೋಂದಾಯಿಸಲ್ಪಟ್ಟು, ಮೈಸೂರು ವಿಭಾಗದ ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು, ಚಿಕ್ಕಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ ಎಂದರು.

ಬಡವರು ಹಾಗೂ ಮಧ್ಯಮ ವರ್ಗದ ಜನರನ್ನು ಷೇರುದಾರರನ್ನಾಗಿಸಿ ಅವರಿಗೆ ಅನುಕೂಲಕರವಾದ ಜಾಗಗಳಲ್ಲಿ ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗುವುದು. ಸಂಘದಲ್ಲಿ 600 ಮಂದಿ ಷೇರುದಾರರಿದ್ದು, ಈಗಾಗಲೇ ಮೈಸೂರು ನಗರದಲ್ಲಿ ಕೆಲವು ಮೂಡ ನಿವೇಶನಗಳನ್ನು ಮಾಲೀಕರಿಂದ ಕಡಿಮೆ ಬೆಲೆಗೆ ಪಡೆದು ಆಸಕ್ತ ಷೇರುದಾರರಿಗೆ ಮಾರಾಟ ಮಾಡಿಸಲಾಗಿದೆ ಎಂದು ತಿಳಿಸಿದರ.

ಮಂಡ್ಯದ ಊರಮಾರಕಸಲಗೆ ಬಳಿ ಕಡಿಮೆ ದರದಲ್ಲಿ ಸೈಟುಗಳನ್ನು ಅಭಿವೃದ್ಧಿ ಮಾಡಿಕೊಡಲು ನಿಶ್ಚಿಸಿಸಲಾಗಿದೆ ಎಂದರು.

ಷೇರುದಾರರಾಗ ಬಯಸುವವರು 2 ಪಾಸ್ ಪೋರ್ಟ್ ಪೋಟೋ, ಹಾಗೂ ಆಧಾರ್ ಕಾರ್ಡ್‌ ಜೆರಾಕ್ಸ್ ಪ್ರತಿ ಜೊತೆ ರೂ.2250 ರೂ.ಗಳ ಶುಲ್ಕ  ಪಾವತಿ ಮಾಡಿ ರಶೀದಿ ಪಡೆಯಬಹುದು ಎಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮಹೇಶ್, ಕಾರ್ಯನಿರ್ವಾಹಣಾಧಿಕಾರಿ ಯೋಗನರಸಿಂಹ ಹಾಗೂ ನಿರ್ದೇಶಕ ಶಿವರುದ್ರಯ್ಯ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!