Tuesday, April 30, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸರ್ವಧರ್ಮಗಳ ಸಂದೇಶ ಸಾರಿದ ”ಮುಟ್ಟಿಸಿಕೊಂಡವನು” ನಾಟಕ ಉದ್ವಾಟನಾ ಸಮಾರಂಭ

ರಾಷ್ಟ್ರಕವಿ ಕುವೆಂಪು ಅವರ ಹುಟ್ಟುಹಬ್ಬದ ಅಂಗವಾಗಿ ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಮಂಗಲ ಲಂಕೇಶ್ ನೇತೃತ್ವದಲ್ಲಿ ನಡೆದ ಶುಕ್ರವಾರ ಸಂಜೆ ಮಂಡ್ಯನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆದ  ”ಮುಟ್ಟಿಸಿಕೊಂಡವನು” ನಾಟಕ ಉದ್ವಾಟನಾ ಸಮಾರಂಭವು ಸರ್ವಧರ್ಮ ಶಾಂತಿಯ ಸಂದೇಶ ಸಾರುವಲ್ಲಿ ಯಶಸ್ವಿಯಾಗಿಯಿತು.

ಸಮಾರಂಭದಲ್ಲಿ ವಿಶ್ವಮಾನವ ಕ್ಷೇತ್ರ ಕೊಮ್ಮೇರಹಳ್ಳಿ ಶಾಖಾಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಅರೆತ್ತಿಪ್ಪೂರು ಶ್ರೀಕ್ಷೇತ್ರ ಆರತಿಪುರ ದಿಗಂಬರ ಜೈನಮಠದ ಸ್ವಸ್ತಿಶ್ರೀ ಸಿದ್ದಾಂತ ಕೀರ್ತಿ ಪಟ್ಟಾಕರ ಸ್ವಾಮೀಜಿ, ಅರಿವು ಬುದ್ಧ ಧ್ಯಾನ ಕೇಂದ್ರದ ಸಂಸ್ಥಾಪಕ ಇಂದಿರಾ ಬೌದ್ಧ್, ಡಾನ್ ಬೋಸ್ಕೋ ಸಂಸ್ಥೆಯ ಡಾ. ಫಾದರ್ ಪೀಟರ್, ಮುಸ್ಲಿಂ ಧರ್ಮಗುರು ತಜರ್ಮುಲ್ ತನ್ವೀರ್  ಪಾಷಾ ಹಾಗೂ ಸಿಖ್ ಧರ್ಮದ  ಪರಿಚಯ ಜಸಬೀರ್ ಸಿಂಗ್ ಭಾಗವಹಿಸಿ ತಮ್ಮ ತಮ್ಮದ ಧರ್ಮಗಳ ಶಾಂತಿ ಸಂದೇಶವನ್ನು ಸಾರಿದರು.

ಈ ಸಂದರ್ಭದಲ್ಲಿ ಮಂಡ್ಯದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಮಾತನಾಡಿ, ಬಹು ಸಂಸ್ಕೃತಿಯುಳ್ಳ ಭಾರತ ದೇಶವನ್ನು ಸರ್ವಧರ್ಮಗಳ ಶಾಂತಿಯತೋಟವೆಂದು ಕುವೆಂಪು ಅವರು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಯಾರದೇ ಒಬ್ಬರ ಸಾರ್ವಭೌಮತ್ವ ನಡೆಯೊದಿಲ್ಲ, ಯಾವುದೇ ಒಂದು ಧರ್ಮದ ಏಕಸ್ವಾಮ್ಯತೆ ನಡೆಯಲ್ಲ, ಸರ್ವರೂ ಸಮನರು ಎದೆಯ ದನಿಗೆ ಮಾತ್ರ ನಾವು ಮಾನ್ಯತೆ ನೀಡುತ್ತೇವೆ, ಕುವೆಂಪು ಅವರ ಇಡೀ ಸಾಹಿತ್ಯ ಅಧ್ಯಯನ ಮಾಡಿದಾಗ ದೇಶದ ಸಾರ್ವಕಾಲಿಕ ವರ್ತಮಾನ ಲಭ್ಯವಾಗುತ್ತದೆ, ವಿಶ್ವಕ್ಕೆ ಸಂದೇಶ ರವಾನೆಯಾಗುತ್ತದೆ ಎಂದು ನುಡಿದರು.

ಕುವೆಂಪು ಅವರು ವಿಶ್ವದ ಜನರನ್ನು ಕುರಿತು, ಐದು ತತ್ವಗಳನ್ನು ಸಾರಿದ್ದಾರೆ, ಮತ ವಿಶ್ವಪಥವಾಗಬೇಕು, ಮತ ಮನುಜ ಮತವಾಗಬೇಕು, ಸರ್ವರ ಉದಯವಾಗಬೇಕು, ಒಗ್ಗೂಡಬೇಕು, ಮನಸ್ಸುಗಳನ್ನು ಕಟ್ಟುವಂತರಾಗಬೇಕು, ವಿಶ್ವಮಾನವ ಸಂದೇಶ ನೀಡಿದರು.

ನೆಲದನಿ ಬಳಗದ ಗಾಯನ ತಂಡವು ಕುವೆಂಪು ರಚಿತ ವಿವಿಧ ಗೀತೆಗಳನ್ನು ಹಾಡಿದರು. ಮಕ್ಕಳಿಂದ ಕುವೆಂಪು ಜೀವನ ಚರಿತ್ರೆಯನ್ನು ತಿಳಿಸಲಾಯಿತು. ಪಿ.ಲಂಕೇಶ್ ವಿರಚಿತ ನಾಟಕ  ‘ಮುಟ್ಟಿಸಿಕೊಂಡವನು’ ಮೈಸೂರು ರಂಗಾಯಣ ತಂಡದ ಕಲಾವಿದರಿಂದ ಪ್ರದರ್ಶನಗೊಂಡು ಸಭಿಕರ ಮೆಚ್ಚುಗೆ ಪಡೆಯಿತು.

ವೇದಿಕೆಯಲ್ಲಿ ನೆಲದನಿ ಬಳಗ ಅಧ್ಯಕ್ಷ ಎಂ.ಸಿ.ಲಂಕೇಶ್ ಮಂಗಲ, ಸಹಾಯಕ ಪ್ರಾಧ್ಯಾಪಕಿ ಡಾ. ಜಾಹ್ನವಿ ರಾಜಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್ ಉದಯಕುಮಾರ್, ನೇತ್ರತಜ್ಞ ಡಾ.ಎಸ್ ವಿನಯ್ ಕುಮಾರ್ , ಕರ್ನಾಟಕ ಜನಶಕ್ತಿ ಸಂಘಟನೆ ಮಲ್ಲಿಗೆ ಸಿರಿಮನೆ, ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ರಂಗಕರ್ಮಿ ಧನ್ಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!