Friday, May 17, 2024

ಪ್ರಾಯೋಗಿಕ ಆವೃತ್ತಿ

ರಾಮಮಂದಿರ ಉದ್ಘಾಟನೆ ದಿನ ರೈಲಿನಲ್ಲಿ ಪ್ರಯಾಣಿಸಬೇಡಿ: ಮುಸ್ಲಿಮರಿಗೆ ಅಸ್ಸಾಂ ಸಂಸದ ಮನವಿ

ಅಯೋಧ್ಯೆಯಲ್ಲಿ ರಾಮ ದೇಗುಲದ ಉದ್ಘಾಟನೆಯ ಜನವರಿ 22ರಂದು ದೇಶದಲ್ಲಿರುವ ಮುಸ್ಲಿಂ ಸಮುದಾಯದವರು ಮನೆಯಲ್ಲಿಯೇ ಇರಿ. ಜೊತೆಗೆ ಪ್ರತಿಷ್ಟಾಪನೆಯ ಹಿಂದಿನ ದಿನಗಳಲ್ಲಿ ರೈಲಿನಲ್ಲಿ ಪ್ರಯಾಣಿಸಬೇಡಿ ಎಂದು ಆಲ್‌ ಇಂಡಿಯಾ ಡೆಮೊಕ್ರಾಟಿಕ್ ಫ್ರಂಟ್ ಮುಖ್ಯಸ್ಥ ಹಾಗೂ ಅಸ್ಸಾಂನ ಸಂಸದ ಬದ್ರುದ್ದೀನ್ ಅಜ್ಮಲ್ ಮನವಿ ಮಾಡಿದ್ದಾರೆ.

ಖಾಸಗಿ ಸಮಾರಂಭದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು,ಬಾಬ್ರಿ ಮಸೀದಿ ಧ್ವಂಸವಾಗಿ ಹಿಂಸಾಚಾರ ಭುಗಿಲೆದ್ದ ರೀತಿಯಲ್ಲಿಯೇ ಪರಿಸ್ಥಿತಿ ಕೆಟ್ಟ ತಿರುವು ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಕಾರಣದಿಂದ ಸಮುದಾಯದ ಜನರನ್ನು ಉಳಿಸಬೇಕಾಗಿದೆ ಎಂದಿದ್ದಾರೆ.

ಪ್ರತಿಷ್ಟಾಪನೆಯ ದಿನದಂದು ಅಯೋಧ್ಯೆಗೆ ತೆರಳಲು ದೇಶಾದ್ಯಂತ ಸಾವಿರಾರು ಮಂದಿ ಬಸ್ಸುಗಳು ಹಾಗೂ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಏನು ಬೇಕಾದರೂ ಸಂಭವಿಸಬಹುದು. ಹಾಗಾಗಿ ನಮ್ಮ ದೇಶದಲ್ಲಿರುವ ಮುಸ್ಲಿಮ್‌ ಸಮುದಾಯದವರು ರೈಲಿನಲ್ಲಿ ರೈಲಿನಲ್ಲಿ ಪ್ರಯಾಣಿಸದಂತೆ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಪ್ರಯಾಣವನ್ನು ತಪ್ಪಿಸುವಂತೆ ಮುಸ್ಲಿಮರಿಗೆ ಹೇಳುತ್ತಿರುವ ನನ್ನ ಮನವಿಯು ಶಾಂತಿಯನ್ನು ಕಾಪಾಡುವ ಉದ್ದೇಶವಾಗಿದೆ ಎಂದು ಬದ್ರುದ್ದೀನ್ ಅಜ್ಮಲ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!