Thursday, May 16, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಬೆಂಬಲಿಸಿದ್ದಕ್ಕೆ ರಂಗಮಂದಿರದಿಂದ ಸಂಸದೆ ಸುಮಲತಾ ಭಾವಚಿತ್ರ ತೆರವು

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಬೆಂಬಲಿಸಿದ ಕಾರಣಕ್ಕೆ ಸಿಟ್ಟಾದ ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದ ಯುವಕರು ಪಿ.ಲಂಕೇಶ್ ಬಯಲು ರಂಗಮಂದಿರದಲ್ಲಿದ್ದ ಸುಮಲತಾ ಭಾವಚಿತ್ರವನ್ನು ಇಂದು ತೆರವುಗೊಳಿಸಿದ್ದಾರೆ.

 

ಇಂದು ಬೆಳಿಗ್ಗೆ ಬಿದರಕೆರೆಯ ಯುವಕರು ಗ್ರಾಮದಲ್ಲಿ ನಿರ್ಮಾಣವಾಗಿರುವ ಪಿ. ಲಂಕೇಶ್ ರವರ ಬಯಲುರಂಗ ಮಂದಿರದಿಂದ ಸುಮಲತಾ ಅಂಬರೀಶ್ ಅವರ ಭಾವಚಿತ್ರವನ್ನು ತೆರವುಗೊಳಿಸಿದರು.

ಈ ಬಗ್ಗೆ ಮಾತನಾಡಿದ ಬಿದರಕೆರೆ ಗ್ರಾಮದ ಲಂಕೇಶ್ ಪತ್ರಿಕೆಯ ಬಯಲು ಸೀಮೆ ಕಟ್ಟೆ ಪುರಾಣ ಖ್ಯಾತಿಯ ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿ, ನಮ್ಮ ಊರಿನಲ್ಲಿ ಅಂಬರೀಶ್ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ಅವರ ಅನುದಾನವನ್ನು ಪಡೆದು ಪಿ.ಲಂಕೇಶ್ ಅವರ ಹೆಸರಿನ ಬಯಲು ರಂಗಮಂದಿರ ನಿರ್ಮಾಣ ಮಾಡಲಾಗಿತ್ತು.

ಈ ರಂಗಮಂದಿರದಲ್ಲಿ ಹಲವು ಗಣ್ಯರ ಭಾವಚಿತ್ರವನ್ನು ಅಳವಡಿಸಿ ಸುಮಲತಾ ಅಂಬರೀಶ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರನ್ನು ಕರೆತಂದು ಅಂಬರೀಶ್ ಅವರ ಭಾವಚಿತ್ರವನ್ನು ಉದ್ಘಾಟನೆ ಮಾಡಿಸಲಾಗಿತ್ತು. ಆ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಮ್ಮ ಗ್ರಾಮದ ಯುವಕರು ಅತಿ ಹೆಚ್ಚು ಮತಗಳ ಲೀಡನ್ನು ಸುಮಲತಾ ಅವರಿಗೆ ಕೊಡಿಸಿದ್ದರು. ನಂತರ ಅವರ ಭಾವಚಿತ್ರವನ್ನು ರಂಗಮಂದಿರಲ್ಲಿ ಅಳವಡಿಸಿ ಅಭಿಮಾನ ಮೆರೆದಿದ್ದರು. ಅವರ ಮಾತು,ನಡವಳಿಕೆಗೆ ಅಭಿಮಾನಿಗಳಾಗಿದ್ದ ನಮ್ಮೂರಿನ ಯುವಕರು ಸುಮಲತಾ ಅವರು ಏಕಾಏಕಿ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಆಘಾತಕ್ಕೆ ಒಳಗಾಗಿ ರಂಗಮಂದಿರದಿಂದ ಸುಮಲತಾ ಭಾವಚಿತ್ರ ತೆರವು ಗೊಳಿಸಿದ್ದಾರೆ.

ಏಕೆಂದು ನಾನು ಕೇಳಿದಾಗ ನಮಗೆ ಸುಮಲತಾ ಅವರಿಂದ ತುಂಬಾ ನೋವಾಗಿದೆ, ನಮ್ಮ ಭಾವನೆಗೆ ಧಕ್ಕೆ ಬಂದಿದ್ದು ,ಮೋಸ ಮಾಡಿದ್ದಾರೆ. ಹಾಗಾಗಿ ಸುಮಲತಾ ಅವರ ಭಾವಚಿತ್ರವನ್ನು ತೆಗೆದು ಹಾಕಿದ್ದೇವೆ ಎಂದು ಹೇಳಿದ್ದಾರೆ. ಸುಮಲತಾ ಅವರು ಮಾಡಿರುವ ಆಘಾತದಿಂದಾಗಿ ನಾವು ಕೂಡ ಏನೂ ಮಾಡಲಾಗದೆ ಪ್ರೇಕ್ಷಕರಾಗಿ ನೋಡುವಂತಾಗಿದೆ ಎಂದರು.

ಲಂಕೇಶ್ ಪತ್ರಿಕೆ ಯ‌ ಪ್ರಸಿದ್ಧ ಅಂಕಣ ಬಯಲು ಸೀಮೆಯ ಕಟ್ಟೆ ಪುರಾಣದ‌ ಬಿ.ಚಂದ್ರೇಗೌಡರು ಅವರ ಮೆಚ್ಚಿನ ಸಾಹಿತಿ ಪಿ.ಲಂಕೇಶರ ಮೇಲೆ ಇಟ್ಟಿದ್ದ ಅನನ್ಯ ಪ್ರೀತಿಯ ದ್ಯೋತಕವಾಗಿ ಬಹಳ ಆಸ್ಥೆ ಯಿಂದ ತನ್ನೂರಿಗೆ ರೆಬೆಲ್ ಸ್ಟಾರ್ ಅಂಬರೀಷ್ ಗೆ ಹತ್ತಾರು ಬಾರಿ ದುಂಬಾಲು ಬಿದ್ದು ಲೋಕಸಭಾ ಸದಸ್ಯರ ಕ್ಷೇತ್ರಾಭಿವೃದ್ಧಿಯ ನಿಧಿಯಿಂದ ಅನುದಾನ ತಂದು ಗೌರಿ ಲಂಕೇಶ್ ರವರಿಂದ ಉದ್ಘಾಟನೆ ಮಾಡಿಸಿದ ಹೆಮ್ಮೆ ಈ ರಂಗಮಂದಿರಕ್ಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!