Tuesday, May 14, 2024

ಪ್ರಾಯೋಗಿಕ ಆವೃತ್ತಿ

ನಗರಕೆರೆ ಪಟ್ಟಲದಮ್ಮನವರ ಕೊಂಡೋತ್ಸವ : ಮೇಳೈಸಿದ ಭಕ್ತರ ಸಡಗರ ಸಂಭ್ರಮ

ಮಂಡ್ಯ ಜಿಲ್ಲೆಯಾದ್ಯಾಂತ ಯುಗಾದಿಗೆ ಮುನ್ನ ಗ್ರಾಮದೇವತೆ ಹಬ್ಬಗಳ ಆಚರಣೆ ಕೈಗೊಳ್ಳುವುದು ಸಂಪ್ರದಾಯ.
ಅಂತೇಯೆ ಮದ್ದೂರು ತಾಲ್ಲೂಕು ನಗರಕೆರೆ ಗ್ರಾಮದ ಗ್ರಾಮದೇವತೆ ಶ್ರೀಪಟ್ಟಲದಮ್ಮನವರ ಕೊಂಡೋತ್ಸವ ಇಂದು ಮುಂಜಾನೆ ಭಕ್ತರ ಉದ್ಗೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಈ ವೇಳೆ ತಂಬಿಟ್ಟಿನ ಆರತಿಯೊಂದಿಗೆ ದೇವಾಲಯದ ಅಂಗಳಕ್ಕೆ ಬಂದ ಮಹಿಳೆಯರು ದೇವಿಗೆ ತಂಬಿಟ್ಟು ತಂಪು ತೋರಿ ಭಕ್ತಿ ಭಾವ ಮೆರೆದರು.

ಈ ದಿನ ತೈಲೂರಿನ ಪಟ್ಟಲದಮ್ಮನವರ ಕೊಂಡೋತ್ಸವ ಕೂಡ ಜರುಗಿತು, ತೈಲೂರಮ್ಮ ಹಾಗೂ ನಗರಕೆರೆ ಪಟ್ಟಲದಮ್ಮ ಅವರುಗಳು ಸಹೋದರಿಯರಾಗಿದ್ದು, ತೈಲೂರಿನ ಪಟ್ಟಲದಮ್ಮನವರ ಕೊಂಡೋತ್ಸವ ನಡೆದ ಮರುಕ್ಷಣ ನಗರಕೆರೆ ಪಟ್ಟಲದಮ್ಮನವರು ಕೊಂಡ ಹಾಯುವುದು ಬಹಳ‌ ವರ್ಷಗಳ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವುದು ಇಲ್ಲಿನ ರೂಢಿ. ಅದರಂತೆ ಇಂದು ಕೂಡ ಅದನ್ನ ಪಾಲಿಸಲಾಯಿತು.

ತೈಲೂರು ಪಟ್ಟಲದಮ್ಮ, ನಗರಕೆರೆ ಪಟ್ಟಲದಮ್ಮ ಇವರುಗಳು ಸಹೋದರಿಯರು ಎಂದು ಇಲ್ಲಿನ ಜನಪದರ ನಂಬಿಕೆ. ಸೋಮವಾರ ಶ್ರೀ ಬಸವೇಶ್ವರ ಸ್ವಾಮಿಯವರ ಕೊಂಡೋತ್ಸವ ಕೂಡ ಜರುಗಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!