Tuesday, May 7, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು ಪುರಸಭೆ | 2023-24ನೇ ಸಾಲಿನ ವಾರ್ಷಿಕ ಆಯವ್ಯಯ ಮಂಡನೆ

ವರದಿ : ಪ್ರಭು ವಿ.ಎಸ್. 

ಮದ್ದೂರು ಪುರಸಭೆಯ 2023-24ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್. ಪ್ರಸನ್ನಕುಮಾರ್ ಮಂಗಳವಾರ ಮಂಡಿಸಿದರು.

ಪುರಸಭೆಯ ಎಸ್.ಎಂ. ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷ ಸುರೇಶ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಮಂಡನೆ ವೇಳೆ ಮುಂಬರುವ ಹಣಕಾಸು ಹಂಗಾಮಿನಲ್ಲಿ ಒಟ್ಟು 50 ಲಕ್ಷ.ರೂಗಳ ಉಳಿತಾಯ ನಿರೀಕ್ಷಿಸುವ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಸಭೆಗೆ ವಿವರಿಸಿದರು.

ವಿವಿಧ ಮೂಲಗಳಿಂದ 31.9640 ಕೋಟಿರೂ.ಗಳ ಆದಾಯಗಳನ್ನು ನಿರೀಕ್ಷಿಸಲಾಗಿದ್ದು ಪಟ್ಟಣದ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಒಟ್ಟು 31.46.40 ಕೋಟಿ ರೂ.ಗಳ ನಿರೀಕ್ಷಿತ ಖರ್ಚಿನೊಡನೆ ಅಂತಿಮವಾಗಿ 50 ಲಕ್ಷ.ರೂಗಳ ಉಳಿತಾಯ ಕುರಿತಾಗಿ ಸಭೆ ವೇಳೆ ಪ್ರಕಟಿಸಿದರು.

ಪ್ರಮುಖ ಆದಾಯಗಳು :
ಆಸ್ತಿ ತೆರಿಗೆ ಮತ್ತು ದಂಡ ರೂಪದಿಂದ 3.30 ಕೋಟಿ, ಮಳಿಗೆಗಳ ಬಾಡಿಗೆ ಹಣ 17.50 ಲಕ್ಷ., ಕಟ್ಟಡ ಪರವಾನಗಿ ಸುಧಾರಣೆ ಶುಲ್ಕಗಳು 6.50 ಲಕ್ಷ. ಉದ್ದಿಮೆ ಪರವಾನಗೆ 15 ಲಕ್ಷ. ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕಗಳ ಶುಲ್ಕ ಹಾಗೂ ಠೇವಣಿ ಬಾಬ್ತು 1.02.50 ಕೋಟಿ, ಘನ ತ್ಯಾಜ್ಯ ನಿರ್ವಹಣಾ ಶುಲ್ಕ 20 ಲಕ್ಷ. ನಿರೀಕ್ಷಿಸಲಾಗಿದೆ.

ಅನುಪಯುಕ್ತ ವಸ್ತುಗಳ ಹರಾಜು 20 ಲಕ್ಷ. ರಸ್ತೆ ಹಗೆತ ಮಾರುಕಟೆ ಶುಲ್ಕ ತಲಾ 5 ಲಕ್ಷ. ಖಾತೆ ಬದಲಾವಣೆ 7 ಲಕ್ಷ. ಬ್ಯಾಂಕ್ ಖಾತೆಗಳ ಬಡ್ಡಿ ಬಾಬ್ತು 12 ಲಕ್ಷ. ವಿವಿಧ ನೆಲ ಬಾಡಿಗೆಗಳು, ಟೆಂಡರ್ ಫಾರಂ, ಪ್ರಮಾಣ ಪತ್ರ ಇನ್ನಿತರೆ ಬಾಬ್ತು 25 ಲಕ್ಷ. ಹಾಗೂ ಜಾಹೀರಾತು ತೆರಿಗೆಯಿಂದ 1.5 ಲಕ್ಷ. ರೂಗಳ ಆದಾಯ ಗಳಿಕೆ ಕುರಿತಾಗಿ ಹೇಳಿದರು.

ಅನುದಾನಗಳು :
ಕೇಂದ್ರ ಮತ್ತು ರಾಜ್ಯ ಸರಕಾರದ ಎಸ್‌ಎಫ್‌ಸಿ ಅನುದಾನ 55 ಲಕ್ಷ. ಎಸ್‌ಎಫ್‌ಸಿ ವೇತನ ಅನುದಾನ 2.49 ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಅನುದಾನ 4.12 ಕೋಟಿ, ಜನಗಣತಿ ಅನುದಾನ 7 ಲಕ್ಷ., ನಲ್ಮ್ ಮತ್ತು ಸ್ವಚ್ಚ ಭಾರತ್ ಮಿಷನ್ ಅನುದಾನ 15 ಲಕ್ಷ., 15ನೇ ಹಣಕಾಸು ಬಾಬ್ತು 1.18 ಕೋಟಿ, ಎಸ್‌ಎಫ್‌ಸಿ ಕುಡಿಯುವ ನೀರು ಅನುದಾನ 15 ಲಕ್ಷ. ವಿಶೇಷ ಅನುದಾನ 5 ಕೋಟಿ ಸೇರಿದಂತೆ ಒಟ್ಟು 31.96.40 ಕೋಟಿ ರೂಗಳ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಪ್ರಮುಖ ವೆಚ್ಚಗಳು :
ಕಟ್ಟಡ ನಿರ್ಮಾಣ 30 ಲಕ್ಷ. ಪುರಸಬೆ ಕಚೇರಿ, ಉದ್ಯಾನವನ ಇತರೆ ಖರ್ಚು 25 ಲಕ್ಷ. ಪೀಠೋಪಕರಣ, ಸಲಕರಣೆಗಳು 20 ಲಕ್ಷ. ಕ್ರೀಡಾಂಗಣ ಅಭಿವೃದ್ಧಿ, ಕಾಂಪೌAಡ್ ನಿರ್ಮಾಣ, ರಸ್ತೆ ಬಸಿ ಮಾರ್ಗಸೂಚಿ ಫಲಕಗಳ ಅಳವಡಿಕೆ 20 ಲಕ್ಷ., ಪಾದಚಾರಿ ರಸ್ತೆ, ಚರಂಡಿ ಅಭಿವೃದ್ಧಿ 2.50 ಕೋಟಿ, ಬೀದಿ ದೀಪ ಕಾಮಗಾರಿ 50 ಲಕ್ಷ, ಮಳೆ ನೀರಿನ ಚರಂಡಿ ಕಾಮಗಾರಿ 25 ಲಕ್ಷ.ಗಳನ್ನು ಮೀಸಲಿರಿಸಿರುವುದಾಗಿ ತಿಳಿಸಿದರು.

ಸಾರ್ವಜನಿಕ ಶೌಚಾಲಯ ಕಟ್ಟಡ ಕಾಮಗಾರಿ 15 ಲಕ್ಷ., ಸ್ಮಶಾನಗಳ ಅಭಿವೃದ್ಧಿ 48 ಲಕ್ಷ. ನೈರ್ಮಲ್ಯ ವಾಹನ ಸಲಕರಣೆ ಖರೀದಿ 55 ಲಕ್ಷ., ಘನ ತ್ಯಾಜ್ಯ ವಸ್ತು ನಿರ್ವಹಣೆ ಅಭಿವೃದ್ಧಿಗೆ 30 ಲಕ್ಷ., ನೀರು ಸರಬರಾಜು ಕಟ್ಟಡಗಳ ನಿರ್ಮಾಣ, ಅಭಿವೃದ್ಧಿ ಹಾಗೂ ಯಂತ್ರೋಪಕರಣಗಳ ಖರೀದಿಗಾಗಿ 1 ಕೋಟಿ ಮತ್ತು ಒಳಚರಂಡಿ ಅಭಿವೃದ್ಧಿ 20 ಲಕ್ಷ., ಪಾರ್ಕ್ಗಳ ಅಭಿವೃದ್ಧಿಗಾಗಿ 25 ಲಕ್ಷ.ಗಳನ್ನು ಕಾಯ್ದಿರಿಸಿರುವುದಾಗಿ ಹೇಳಿದರು.

ಪರಿಶಿಷ್ಠ ಜಾತಿ, ಪಂಗಡ, ಹಿಂದುಳಿದ ವರ್ಗ, ಅಂಗವಿಕಲರ ಅಭಿವೃದ್ಧಿಗೆ 25 ಲಕ್ಷ., ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವೇತನ ಭತ್ಯೆಗಳ ಬಾಬ್ತು 2.50 ಕೋಟಿ, ಸದಸ್ಯರು ಮತ್ತು ಸಂಬAಧಿತ ವೆಚ್ಚಗಳಿಗಾಗಿ 13 ಲಕ್ಷ. ಪೌರ ಕಾರ್ಮಿಕರು, ಸದಸ್ಯರು ಸಿಬ್ಬಂದಿ ವರ್ಗದ ಅಧ್ಯಯನ ಪ್ರವಾಸ ಸಂಬAಧ 20 ಲಕ್ಷ ರೂಗಳನ್ನು ಮೀಸಲಿಡಲಾಗಿದೆ.

ಎಸ್‌ಎಫ್‌ಸಿ ವಿದ್ಯುತ್ ಶುಲ್ಕಗಳ ಬೀದಿ ದೀಪ 1.05 ಕೋಟಿ, ನೀರು ಸರಬರಾಜು ವಿದ್ಯುತ್ ಶುಲ್ಕ 3.07 ಕೋಟಿ, ನೈರ್ಮಲ್ಯ ಹೊರಗುತ್ತಿಗೆ ನಿರ್ವಹಣೆ, ದಾಸ್ತಾನು, ಇಂಧನ, ಉಪಕರಣಗಳು, ವಾಹನಗಳ ಬಾಡಿಗೆ ಒಳಗೊಂಡAತೆ 1.42.5 ಕೋಟಿ ನಿಗಧಿ, ಹೊರಗುತ್ತಿಗೆ ಬೀದಿ ದೀಪ ನಿರ್ವಹಣೆ 30 ಲಕ್ಷ. ಅನಾಥಶವಗಳ ಅಂತ್ಯಸಂಸ್ಕಾರಕ್ಕೆ 5 ಲಕ್ಷ., ಅತಿವೃಷ್ಠಿ, ಅನಾವೃಷ್ಠಿ ಸಂಬAಧ 10 ಲಕ್ಷ., ನರಸಿಂಹಸ್ವಾಮಿ ದೇವಾಲಯ ಹೊರ ಆವರಣದಲ್ಲಿ ತಂತಿ ಬೇಲಿ ನಿರ್ಮಿಸಿ ಜಿಮ್ ಪರಿಕರಗಳ ಅಳವಡಿಕೆಗೆ 20 ಲಕ್ಷ. ನಿಗಧಿಗೊಳಿಸಲಾಗಿದೆ.

ಇದರೊಟ್ಟಿಗೆ ಪುರಸಭೆ ವಾಹನಗಳ ನಿಲುಗಡೆ ಶೆಡ್ ನಿರ್ಮಾಣಕ್ಕೆ 75 ಲಕ್ಷ. ಅಧಿಕಾರಿ, ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ 2 ಕೋಟಿ, ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 3 ಲಕ್ಷ. ಒಳಗೊಂಡಂತೆ ಒಟ್ಟಾರೆ ಮುಂಬರುವ ಹಣಕಾಸು ವರ್ಷದಲ್ಲಿ 31.46.40 ಕೋಟಿ ರೂಗಳ ವೆಚ್ಚಗಳನ್ನು ಕಳೆದು 50 ಲಕ್ಷ.ರೂಗಳ ಉಳಿತಾಯ ನಿರೀಕ್ಷಿಸಿರುವುದಾಗಿ ಸಭೆ ವೇಳೆ ಪ್ರಕಟಿಸಿದರು.

ಮಂಗಳವಾರ ಪ್ರಕಟವಾದ ಮುಂಗಡ ಬಜೆಟ್ ಕುರಿತಾಗಿ ಹಿರಿಯ ಸದಸ್ಯ ಎಂ.ಐ. ಪ್ರವೀಣ್ ಆಕ್ಷೇಪ ವ್ಯಕ್ತಪಡಿಸಿ ಅತಿವೃಷ್ಠಿಗೆ ನಿಗಧಿಗೊಳಿಸಿರುವ 5 ಲಕ್ಷ.ರೂಗಳನ್ನು 10 ಲಕ್ಷ.ಕ್ಕೆ ಹೆಚ್ಚಿಸುವಂತೆ, ಸ್ಮಶಾನಗಳ ಅಭಿವೃದ್ಧಿಗೆ ನಿಗಧಿಯಾದ 30 ಲಕ್ಷ.ರೂಗಳೊಟ್ಟಿಗೆ 20 ಲಕ್ಷ.ರೂಗಳ ಹೆಚ್ಚುವರಿ ಹಣ ಮೀಸಲಿರಿಸಿದ ನೀಡಿದ ಸಲಹೆಯನ್ನು ಸಭೆ ಒಕ್ಕೋರಲಿನಿಂದ ಅನುಮೋದಿಸಿತು.

ಪಟ್ಟಣದ ಶಿಕ್ಷಕರ ಬಡಾವಣೆಯಲ್ಲಿ ನೂತನವಾಗಿ ಅಳವಡಿಸಿರುವ ಪಾರ್ಕ್ ಅಭಿವೃದ್ಧಿಗೆ ಮತ್ತು ಹಳೇ ಬಸ್‌ನಿಲ್ದಾಣದ ಹೂ, ಹಣ್ಣು, ತರಕಾರಿ ಮಾರುಕಟ್ಟೆ ಅಭಿವೃಧ್ಧಿಗೆ ಹೆಚ್ಚುವರಿ ಹಣ ನಿಗಧಿಗೊಳಿಸುವಂತೆ ಸದಸ್ಯೆ ಬಿ.ಸಿ. ಸರ್ವಮಂಗಳ ನೀಡಿದ ಸಲಹೆಯನ್ನು ಅಧ್ಯಕ್ಷ ಸುರೇಶ್‌ಕುಮಾರ್ ಪರಿಗಣಿಸುವ ಭರವಸೆ ನೀಡಿದರು.

ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಮಾರ್ಗಸೂಚಿ ಫಲಕ ಅಳವಡಿಕೆ ಸಂಬಂಧ ಕ್ರಮವಹಿಸದ ಮುಖ್ಯಾಧಿಕಾರಿಯ ವಿರುದ್ಧ ಸದಸ್ಯ ನಂದೀಶ್ ತಮ್ಮ ಅಸಮಧಾನ ವ್ಯಕ್ತಪಡಿಸಿದರಲ್ಲದೇ ಈ ಕುರಿತು ತುರ್ತು ಕ್ರಮ ವಹಿಸುವಂತೆ ಸೂಚಿಸಿದರು.

ಸಭೆ ವೇಳೆ ಉಪಾಧ್ಯಕ್ಷೆ ಸುಮಿತ್ರರಮೇಶ್, ಸದಸ್ಯರಾದ ಎಸ್. ಮಹೇಶ್, ವನಿತಾ, ಪ್ರಮೀಳಾ, ಪ್ರಿಯಾಂಕ, ಕೋಕಿಲಾ, ಆದಿಲ್, ಬಸವರಾಜು, ಮ.ನ. ಪ್ರಸನ್ನಕುಮಾರ್, ತ್ರಿವೇಣಿ, ಧನಂಜಯ್ಯ, ಲತಾ, ಶೋಭಾ, ತಮರುನಿಸಾ, ಮುಖ್ಯಾಧಿಕಾರಿ ಅಶೋಕ್ ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!