Sunday, May 19, 2024

ಪ್ರಾಯೋಗಿಕ ಆವೃತ್ತಿ

KRS ಬಾಗಿಲು ಮುಚ್ಚಲು ಹೋರಾಟ ಅನಿವಾರ್ಯ- ಸಿ.ಎಸ್.ಪುಟ್ಟರಾಜು

ಕೆ.ಆರ್.ಎಸ್. ಜಲಾಶಯದಿಂದ ಹರಿದು ಹೋಗುತ್ತಿರುವ ನೀರು ತಕ್ಷಣ ನಿಲುಗಡೆಯಾಗದಿದ್ದರೆ ಕನ್ನಂಬಾಡಿ ಅಣೆಕಟ್ಟೆ ಬಾಗಿಲು ಮುಚ್ಚಿಸಲು ಕ್ಷೇತ್ರವಾರು ಹೋರಾಟ ಅನಿವಾರ್ಯವಾಗಲಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಎಚ್ಚರಿಸಿದರು.

ಮಂಡ್ಯದಲ್ಲಿ ಜೆಡಿಎಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏಕಪಕ್ಷೀಯ ತೀರ್ಮಾನದಿಂದ ನೀರು ಹರಿಸಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡುತ್ತಿರುವ ರಾಜ್ಯ ಸರ್ಕಾರ ಕಣ್ಣು ತೆರೆಸಲು ಪ್ರತಿಭಟನೆ ಅನಿವಾರ್ಯವಾಗಿದ್ದು, ಸರ್ಕಾರ ರಾಜ್ಯದ ನೆಲ, ಜಲದ ಬಗ್ಗೆ ಆಸಕ್ತಿ ತೋರಿದ್ದಾರೆ. ಇಂತಹ ದುಃಸ್ಥಿತಿ ಬರುತ್ತಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಹೆಚ್.ಡಿ.ದೇವೇಗೌಡರ ಕೌಶಲ್ಯದಿಂದ ರಾಜ್ಯಕ್ಕ 14.71 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದ ಪರಿಣಾಮ ಕಾವೇರ ಜಲಾನಯನ ಪ್ರದೇಶದ ಅಣೆಕಟ್ಟೆಗಳು ಬರಿದಾಗುತ್ತಿವೆ, ನೆರೆಯ ತಮಿಳನಾಡು ರಾಜ್ಯದಂತೆ ತುರ್ತು ಗಮನ ಹರಿಸುವ ಚಿಂತನೆ ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದರು.

ಕುಡಿಯುವ ನೀರಿಗೂ ಹಾಹಾಕಾರ: ರವೀಂದ್ರ ಶ್ರೀಕಂಠಯ್ಯ

ಕಾವೇರಿ ನದಿ ಪಾತ್ರದ ಅಣೆಕಟ್ಟೆಗಳ ವಾಸ್ತವತೆಯನ್ನು ಮನವರಿಕೆ ಮಾಡದೇ ನಿತ್ಯ 7,000 ಕ್ಯೂಸೆಕ್ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಯಿಂದ ಭವಿಷ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗಲಿದ್ದು, ಇದನ್ನು ಮನಗೊಂಡು, ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಿ ರೈತರ ಹೋರಾಟಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಆಗಮಿಸಬೇಕೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕರೆ ನೀಡಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಣೆಕಟ್ಟೆಯಿಂದ ನೀರು ಹೋದ ನಂತರ ಪರಿಸ್ಥಿತಿ ಏನಾಗಲಿದೆ ಎಂಬುವುದನ್ನು ಜಿಲ್ಲೆಯ ಉಸ್ತುವಾರಿ ಸಚಿವ, ಸಂಸದೆ ಹಾಗೂ ಶಾಸಕರು ಅರಿತುಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಸೌಖ್ಯಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮೇಲಿನ ಮಮತೆಗಾಗಿ ರೈತರ ಹಿತ ಬಲಿಕೊಟ್ಟು ನೀರು ಬಿಡಬೇಡಿ, ಕೂಡಲೇ ನೀರು ನಿಲ್ಲಿಸದಿದ್ದರೆ ಹೋರಾಟ ಉಗ್ರ ರೂಪಕ್ಕೆ ತೆರಳಲಿದೆ ಎಂಬುದನ್ನು ಮನಗಾಣಬೇಕೆಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!