Saturday, May 18, 2024

ಪ್ರಾಯೋಗಿಕ ಆವೃತ್ತಿ

ಬೆಲೆ ಏರಿಕೆ| ಕೇಂದ್ರ ಸರ್ಕಾರದ ವಿರುದ್ದ ಸಿಪಿಐಎಂ ಪ್ರತಿಭಟನೆ

ಆಗತ್ಯವಸ್ತುಗಳ ಬೆಲೆ ಏರಿಕೆ ಮೇಲೆ ನಿಯಂತ್ರಣ ಸಾಧಿಸಬೇಕು, ಸಮಪ೯ಕ ಉದ್ಯೋಗ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿಪಿಐಎಂ ಮುಖಂಡರು ಹಾಗೂ ಕಾಯ೯ಕತ೯ರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಕೇಂದ್ರ ಸಕಾ೯ರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐಎಂ ಮುಖಂಡ ಪುಟ್ಟಮಾದು ಮಾತನಾಡಿ, ಬಡತನ ಮುಕ್ತ ದೇಶವನ್ನಾಗಿಸುತ್ತೇವೆಂದು ಹೇಳಿದ ಪ್ರಧಾನಿ ನರೇಂದ್ರಮೋದಿ ಶ್ರೀಮಂತರ ಪರವಾಗಿ ಇದ್ದರೇಯೇ ಹೊರತು ಬಡವರಿಗೆ ಯಾವುದೇ ಕೊಡುಗೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ರಾಜ್ಯದಿಂದ ತೆರಿಗೆ ಪಡೆಯುವ ಕೇಂದ್ರ ಸಕಾ೯ರ ಕನಾ೯ಟಕಕ್ಕೆ ನೀಡಬೇಕಾದ ತೆರಿಗೆಯನ್ನು ನೀಡದೇ ವಂಚಿಸಿದ್ದಾರೆ. ಬಡವರಿಗೆ ಅಕ್ಕಿ ಕೊಡುವ ಬದಲು ಮದ್ಯ ತಯಾರಿಸಲು ಕಡಿಮೆ ಬೆಲೆಗೆ ಕೊಡುತ್ತಿದ್ದಾರೆಂದು ಕಿಡಿಕಾರಿದರು. ತೀವ್ರವಾಗಿ ಏರುತ್ತಿರುವ ಆಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಣ ಹೇರಬೇಕು,
ಹೆಚ್ಚುತ್ತಿರುವ ನಿರುದ್ಯೋಗವನ್ನು ತಗ್ಗಿಸಲು ವ್ಯವಸಾಯ ಕ್ಷೇತ್ರವೂ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕೆಂದು ಹೇಳಿದರು.

ಸಿಪಿಐಎಂ ಮುಖಂಡ ಲಿಂಗರಾಜು ಮೂತಿ೯ ಮಾತನಾಡಿ, ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಬಡತನವನ್ನು ನಿಮೂ೯ಲನೆ ಮಾಡುತ್ತೇವೆಂದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 10 ವಷ೯ ಕಳೆದರೂ ಕೂಡ ಕಪ್ಪು ಹಣ ತರುವಲ್ಲಿ ವಿಫಲರಾಗಿದ್ದಾರೆಂದು ಹೇಳಿದರು.

ವಿದ್ಯುತ್ ರಂಗದ ಖಾಸಗಿಕರಣ ಮಸೂದೆ ಕೈ ಬಿಡಬೇಕು,ಕೃಷಿ ಪಂಪ್ ಸೆಟ್ ಬಳಕೆದಾರರಿಗೆ ಪ್ರೀಪೇಯ್ದ್ ಮೀಟರ್ ಅಳವಡಿಸುವ ಕ್ರಮ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯೆ ದೇವಿ, ಕಾಯ೯ದಶಿ೯ ಸುಶೀಲ,ಗುರುಸ್ವಾಮಿ, ತಿಮ್ಮೇಗೌಡ, ಆನಂದ್, ಪ್ರೇಮಾ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!