Wednesday, May 15, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಲೈಂಗಿಕ ದೌರ್ಜನ್ಯ ಆರೋಪಿ ಯಡಿಯೂರಪ್ಪ ಬಂಧನಕ್ಕೆ ಆಗ್ರಹಿಸಿ ಪಂಜಿನ ಮೆರವಣಿಗೆ

ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಪ್ರಾಪ್ತೆ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕೂಡಲೇ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಮಂಡ್ಯನಗರದಲ್ಲಿ ಅತ್ಯಾಚಾರ ವಿರೋಧಿ ಆಂದೋಲನ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ಮಂಡ್ಯನಗರದ ಸಂಜಯ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಪಂಚಿನ ಮೆರವಣಿಗೆ ನಡೆಸಿ, ಯಡಿಯೂರಪ್ಪ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ವಿರುದ್ಧ ದೂರು ನೀಡಿದ ಮಹಿಳೆಗೆ ಭದ್ರತೆ ಮತ್ತು ಸುರಕ್ಷತೆಯನ್ನು ನೀಡಿ, ಕಿರುಕುಳದ ವಿರುದ್ಧ ಪ್ರಕರಣ ದಾಖಲು ಮಾಡುವ ಮತ್ತು ಪ್ರತಿಭಟಿಸುವ ಅವರ ಹಕ್ಕನ್ನು ಮಾನ್ಯ ಮಾಡಿ ಸೂಕ್ತ ರಕ್ಷಣೆ ಒದಗಿಸಬೇಕು. ಇದು ರಾಜಕೀಯ ಷಡ್ಯಂತ್ರವೋ ಅಥವಾ ಲೈಂಗಿಕ ಕಿರುಕುಳ ನಡೆದಿರುವುದು ಸತ್ಯವೋ ಎಂಬುದನ್ನು ಕಾನೂನಿನ ಚೌಕಟಿನಲಿ ನಿಷ್ಪಕ್ಷಪಾತ ತನಿಖೆ ಮಾಡಿ, ಸಮಾಜದ ಮುಂದೆ ಬಹಿರಂಗ ಪಡಿಸಿ ಅಪರಾಧಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಿರ್ಭಯ ಪ್ರಕರಣ ನಡೆದ ಸಂದರ್ಭದಲ್ಲಿ ವರ್ಮಾ ಕಮಿಟಿಯೂ ಮಾಡಿದ್ದ ಗಂಭೀರ ಶಿಫಾರಸ್ಸುಗಳು ಜಾರಿಯಾಗಬೇಕು. ಮಹಿಳೆಯರ ವಿಚಾರದಲ್ಲಿ ಅನುಚಿತವಾಗಿ ವರ್ತಿಸುವ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಅಪರಾಧ ಹೊತ್ತವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರಬಾರದು, ಒಂದು ವೇಳೆ ಅಂತವರು ಗೆದ್ದಿದ್ದೆ ಆದರೆ ಅಂತರವನ್ನು ಅಧಿಕಾರದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಮತ್ತು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೆ ಇದೆ. ಪ್ರತಿ ನಿತ್ಯ ಸುದ್ದಿಯಾಗುತ್ತಿರುವ ಹೆಣ್ಣು ಭ್ರೂಣ ಹತ್ಯೆ, ಮರ್ಯಾದೆ ಗೇಡು ಹತ್ಯೆ.ಸಾಮೂಹಿಕ ಅತ್ಯಾಚಾರದ ಪ್ರಕರಣಗಳು, ಆ್ಯಸೀಡ್ ದಾಳಿಗಳು ಇದರ ಜೊತೆಗೆ ಹೊರ ದೇಶದಿಂದ ಪ್ರವಾಸಕ್ಕೆ ಬರುವ ಮಹಿಳೆಯರಿಗೆ ಭಾರತ ಸುರಕ್ಷಿತವಾದದಲ್ಲ ಎಂಬುದು ಅಕೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಗಳಿಂದ ಸಾಬೀತಾಗಿ ವರದಿಯಾಗುತ್ತಲೆ ಇವೆ. ಈ ಘಟನೆಗಳು ಮಾಸುವ ಮುನ್ನವೆ, ಈಗ ಬಿಜೆಪಿ ನಾಯಕರಾಗಿದ್ದ ಮಾಜಿ ಯಡಿಯೂರಪ್ಪ ವಿರುದ್ಧ ಅಪ್ರಾಪ್ತ ಮೇಲೆ ಲೈಂಗಿಕ ಕಿರುಕುಳದ ವಿರುದ್ಧ ಪೋಕ್ಸ್‌ ಪ್ರಕರಣ ದಾಖಲಾಗಿದ್ದು, ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಬಿಲ್ಕಿಸ್ ಭಾನು ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳನ್ನು ಸನ್ನಡೆತೆಯ ಆಧಾರದ ಮೇಲೆ ಬಿಡುಗಡೆ ಮಾಡಿದ್ದು ಇದೆ ಬಿಜೆಇ ಪಕ್ಷವಾಗಿದೆ, ಮಣಿಪುರದಲ್ಲಿ ಹೆಣ್ಣುಮಕ್ಕಳನ್ನು ಬೆತ್ತಲುಗೊಳಿಸಿ ಅತ್ಯಾಚಾರ ನಡೆದಾಗ ಅಲ್ಲಿ ಆಳ್ವಿಕೆಯಲ್ಲಿರುವ ಬಿಜೆಪಿ ಪಕ್ಷ ಮಹಿಳೆಯರ ಪರ ನಿಲ್ಲದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ಕೂಡ ದುರಂತದ ಸಂಗತಿ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ನೆಲದನಿ ಬಳಗದ ಮಂಗಲ ಲಂಕೇಶ್, ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಕೃಷ್ಣಪ್ರಕಾಶ್,. ನಗರಕೆರೆ ಜಗದೀಶ್, ಸಿದ್ದರಾಜು, ಅಂಜಲಿ, ಶಿಲ್ಪ, ವೈರಮುಡಿ, ಶೈಲಜಾ, ವೈದುನ, ಕೃಷ್ಣಪ್ರಕಾಶ್, ಮಂಡ್ಯ ನಗರದ ಶ್ರಮಿಕ‌ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!