Saturday, May 18, 2024

ಪ್ರಾಯೋಗಿಕ ಆವೃತ್ತಿ

ಪುಟ್ಬಾಲ್ ದಂತಕಥೆ ಪೀಲೆ ನಿಧನ

ಬ್ರೆಜಿಲ್ ತಂಡವು ಮೂರು ಬಾರಿ ವಿಶ್ವಕಪ್ (1958, 1962 ಮತ್ತು 1970) ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪುಟ್ಬಾಲ್ ದಿಗ್ಗಜ ಪೀಲೆ (82) ಅವರು ಗುರುವಾರ ಬ್ರೆಜಿಲ್ ನ ರಿಯೊಡಿಜನೈರೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೀಲೆ ಅವರನ್ನು ಇಲ್ಲಿನ ಅಲ್ಬರ್ಟ್‌ ಐನ್‌ಸ್ಟೈನ್ ಆಸ್ಪತ್ರೆಗೆ ನವೆಂಬರ್‌ ಕೊನೆಯ ವಾರದಲ್ಲಿ ದಾಖಲಿಸಲಾಗಿತ್ತು.

nudikarnataka.com

ಅವರಿಗೆ ಕರುಳಿನ ಕ್ಯಾನ್ಸರ್‌ ಉಲ್ಬಣಿಸಿದ್ದು, ಮೂತ್ರಪಿಂಡ ಮತ್ತು ಹೃದಯಕ್ಕೆ ಸೋಂಕು ವ್ಯಾಪಿಸಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದವು.ಗುರುವಾರ ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾಗಿದ್ದಾರೆ.ಅಲ್ಲಿಗೆ ಪುಟ್ಬಾಲ್ ದಂತಕಥೆ ಪೀಲೆಯವರ ರೋಚಕ ಬದುಕಿನ ಅಧ್ಯಾಯ ಕೊನೆಗೊಂಡಿದೆ.

1957ರಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಪೀಲೆ,1958,1962 ಹಾಗೂ 1970 ರಲ್ಲಿ ಬ್ರೆಜಿಲ್ ವಿಶ್ವಕಪ್ ಗೆಲುವಿಗೆ ಕಾರಣರಾಗಿದ್ದರು. ಪೀಲೆ ಅವರ ಆಟ ಎಂದೆಂದಿಗೂ ಶ್ರೇಷ್ಠ.

1977ರಲ್ಲಿ ಪೀಲೆ ನಿವೃತ್ತರಾಗಿದ್ದರು. ಫಾರ್ವರ್ಡ್ ಮತ್ತು ಅಟ್ಯಾಕಿಂಗ್ ಮಿಡ್‌ಫೀಲ್ಡರ್ ಆಗಿದ್ದ ಅವರು, ವೃತ್ತಿಜೀವನದಲ್ಲಿ 1000ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದರು. 1995-1998ರ ಅವಧಿಯಲ್ಲಿ ಬ್ರೆಜಿಲ್‌ನ ಕ್ರೀಡಾ ಸಚಿವರೂ ಆಗಿದ್ದರು.

ಗಣ್ಯರ ಸಂತಾಪ
ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಮಾಜಿ ಅಧ್ಯಕ್ಷರಾದ ಬರಾಕ್‌ ಒಬಾಮ, ಬಿಲ್‌ ಕ್ಲಿಂಟನ್‌, ಫುಟ್‌ಬಾಲ್‌ ದಿಗ್ಗಜರಾದ ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೊನೆಲ್ ಮೆಸ್ಸಿ, ಮಾಜಿ ಕ್ರಿಕೆಟಿಗರು ಸೇರಿದಂತೆ ವಿಶ್ವದಾದ್ಯಂತ ಗಣ್ಯರು ಪೀಲೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪುಟ್ಬಾಲ್ ಇತಿಹಾಸದಲ್ಲಿ ಪೀಲೆ ಹೆಸರು ಅಜರಾಮರವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!