Thursday, May 16, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಮಂಡ್ಯ ತಾಲೂಕಿನ ಬಸರಾಳು ವಲಯದ ಬಸರಾಳು ಕಾರ್ಯಕ್ಷೇತ್ರದ ಉಜ್ವಲ ಮತ್ತು ಕಿರಣ ಜ್ಞಾನ ವಿಕಾಸ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಲ್ಟಿ ಸ್ಪೆಷಲಿಸ್ಟ್ ಸ್ಪಂದನ ಹಾಸ್ಪಿಟಲ್ ಮಂಡ್ಯ ಇವರ ವತಿಯಿಂದ ಯಶಸ್ವಿಯಾಗಿ ನಡೆಯಿತು.

ಸಂಸ್ಥೆಯ ನಿರ್ದೇಶಕಿ ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಚಿತ ಆರೋಗ್ಯ ತಪಾಸಣೆ ಶಿಬಿರ ಪ್ರಯೋಜನವನ್ನು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು. ಒಂದು ಕುಟುಂಬದ ಒಬ್ಬ ತಾಯಿ ಆರೋಗ್ಯವಾಗಿದ್ದರೆ, ಆ ಮನೆಯ ಎಲ್ಲಾ ಸದಸ್ಯರು ಆರೋಗ್ಯ ಹೊಂದಿರಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ವಹಿಸಿದ್ದರು. ಸ್ಪಂದನ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾ.ಆದಿತ್ಯ ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ, ಅಧಿಕ ರಕ್ತದೊತ್ತಡ, ಮಧುಮೇಹ, ಹಿಮೋಗ್ಲೋಬಿನ್ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳ ಬಗ್ಗೆ ಮುಂಜಾಗ್ರತೆ ಕ್ರಮಗಳು ಮತ್ತು ತಡೆಗಟ್ಟುವ ವಿಧಾನಗಳ ಕುರಿತು ತಿಳಿಸಿದರು.

ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್, ಯೋಜನಾಧಿಕಾರಿ ಮಮತಾ ಎನ್ ಶೆಟ್ಟಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ವೇತ ಎಚ್ ವಿ, ವಲಯದ ಮೇಲ್ವಿಚಾರಕ ಶರತ್ ಚಂದ್ರ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!