Saturday, May 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಕಾವೇರಿ ಜಲವಿವಾದ : ಮಂಡ್ಯ ಜಿಲ್ಲೆ ಬಂದ್ ಗೆ ಕೆ ಹೊನ್ನಲಗೆರೆ ಬಂದ್

ವರದಿ : ನ.ಲಿ.ಕೃಷ್ಣ

ಕಾವೇರಿ ನೀರು ಪ್ರಾದಿಕಾರ ಪ್ರತಿ ದಿನಕ್ಕೆ ಐದು ಸಾವಿರ ಕೂಸೆಕ್ ನೀರು ಬಿಡುಗಡೆ ಮಾಡುವ ಆದೇಶ ಖಂಡಿಸಿ ನೀರು ಬಿಡುಗಡೆ ಮಾಡದಿರಲು ಆಗ್ರಹಿಸಿ ಕಾವೇರಿ ಹಿತರಕ್ಷಣಾ ಸಮಿತಿ ಮಂಡ್ಯಜಿಲ್ಲೆ ಬಂದ್ ಗೆ ಕರೆ ನೀಡಿದ್ದನ್ನು ಬೆಂಬಲಿಸಿ ಕೆ. ಹೊನ್ನಲಗೆರೆ ಬಂದ್ ನಡೆಸಲಾಯಿತು.

ಇಲ್ಲಿನ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಬೆಳಗಿನಿಂದಲೂ ವರ್ತಕರು ತಮ್ಮ ವಹಿವಾಟು ನಿಲ್ಲಿಸುವ ಮೂಲಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದರು.

ಕೆ. ಹೊನ್ನಲಗೆರೆ ನಾಡ ಕಛೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಕಾವೇರಿ ಪ್ರಾಧಿಕಾರದ ವಿರುದ್ದ ಧಿಕ್ಕಾರ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ನೀರು ಬಿಟ್ಟಿದ್ದೆ ಆದಲ್ಲಿ ಕರ್ನಾಟಕದ ಜನರ ಆಕ್ರೋಶ  ಸ್ಪೋಟಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಬಂದ್ ನಲ್ಲಿ ತಿಪ್ಪೂರು ಮನು, ಹಳ್ಳಿಕೆರೆ ಬೊಮ್ಮೇಗೌಡ , ಅಂಗಡಿ ಶಿಮಾದು, ನಾಗೇಶ್, ಪ್ರಮೋದ್, ಹೊನ್ನಲಗೆರೆ ಸ್ವಾಮಿ, ಚುಂಚಗಹಳ್ಳಿ ಉಮೇಶ್, ಪಟೇಲ್ ಮೋಹನ್ ಕುಮಾರ್ ಗೌಡ, ಬೆಳ್ಳೂರು ಕೆಂಪರಾಜ್, ಮಾದೇಶ್ ಹಳ್ಳಿಕೆರೆ ಚುಂಚಗಹಳ್ಳಿ, ನವೀನ್ ಸೇರಿದಂತೆ ಹಲವು ಪ್ರಗತಿಪರರು ಬಂದ್ ನ  ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!