Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕೆಆರ್’ಎಸ್ ಅಭ್ಯರ್ಥಿ ಚಂದ್ರಶೇಖರ್ ಬೆಂಬಲಿಸಲು ಮನವಿ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕೆ.ಆರ್.ಎಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಕೆ.ಆರ್ ( ಚಂದ್ರು ಕೀಲಾರ) ಅವರನ್ನು ಜಿಲ್ಲೆಯ ಜನತೆ ಬೆಂಬಲಿಸಬೇಕೆಂದು ಕೆ.ಆರ್.ಎಸ್ ಪಕ್ಷದ ಮಂಡ್ಯ ಜಿಲ್ಲಾ ಉಸ್ತುವಾರಿ ಅರುಣ ಕುಮಾರ್ ಹೆಚ್ ಮಲ್ಲೇಗೌಡ ಮನವಿ ಮಾಡಿದರು.

ತಮ್ಮ ಅಭ್ಯರ್ಥಿ ಪರ ಜಿಲ್ಲೆ ಬಿರುಸಿನ‌ ಪ್ರಚಾರ ಹಾಗೂ ಮತಯಾಚನೆಗೆ ಮಂಡ್ಯ ನಗರದಿಂದ ಚಾಲನೆ ‌ಕೊಟ್ಟು, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳನ್ನ ತಲುಪಿ, ಮಾರ್ಗದಲ್ಲಿ ಸಿಗುವ ಗ್ರಾಮಗಳ ಹಳ್ಳಿಕಟ್ಟೆ, ಊರಿನ ಸರ್ಕಲ್ ಗಳ ‌ಬಳಿ ನೆರೆದಿರುವ ಜನಸಾಮಾನ್ಯರನ್ನ ಗಮನ ಸೆಳೆದು, ಕೆ.ಆರ್.ಎಸ್ ಪಕ್ಷದ ಅಭ್ಯರ್ಥಿ ಚಂದ್ರು ಕೀಲಾರ, ಕ್ರಮ ಸಂಖ್ಯೆ 4, ಬ್ಯಾಟರಿ ಟಾರ್ಚ್ ಗುರುತಿಗೆ ‌ಮತ ನೀಡುವಂತೆ ವಿನಂತಿ ಮಾಡಿದರು.

ರಾಜ್ಯದ ಇಂದಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಬ್ಬ ವಿದ್ಯಾವಂತ ಮತ್ತು ಪ್ರಜ್ಞಾವಂತ ಮತದಾರನ ಏಕೈಕ, ಸಹಜ ಮತ್ತು ಸ್ವಾಭಾವಿಕ ಆಯ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವಾಗಿದೆ, ನಮ್ಮ ಕೆಲಸವನ್ನು ನಾವು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇವೆ. ದಯವಿಟ್ಟು ಬೆಂಬಲಿಸಿ ಎಂದು ಕೈಮುಗಿದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ರಮೇಶ್ ಗೌಡ, ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ಹೆಬ್ಬಕವಾಡಿ, ಅಭ್ಯರ್ಥಿ ಚಂದ್ರು ಕೀಲಾರ, ಜಿಲ್ಲಾ ಕಾರ್ಯದರ್ಶಿಗಳಾದ ನಾಗರಾಜು, ಡಿ.ಜಿ, ಮಹೇಶ್ ಕೂಳಗೆರೆ, ನಂದೀಶ್ ಕುಮಾರ, ಶಾಂತಿ ಪ್ರಸಾದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಹೆಚ್.ಇ ಯೋಗೀಶ್, ಶಶಿಧರ್ ವೈ.ಕೆ. ಅರುಣ ಕುಮಾರ್, ತಾಲ್ಲೂಕು ಅಧ್ಯಕ್ಷ ರವೀಂದ್ರ ಕೊತ್ತತ್ತಿ ಹಾಗೂ ಹಲವು ತಾಲ್ಲೂಕು ಪದಾಧಿಕಾರಿಗಳು ಪ್ರಚಾರದಲ್ಲಿ ‌ತೊಡಗಿಕೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!