Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಮಳೆ: ಜನರಲ್ಲಿ ಸಂತಸ

ಮಂಡ್ಯದಲ್ಲಿ ಇಂದು ಸಂಜೆ ಬಿದ್ದ ಮಳೆ ಜನರಲ್ಲಿ ಸಂತಸ ತಂದಿತು.

ಬಿರು ಬಿಸಿಲಿನಿಂದ ಕಾದು ತತ್ತರಿಸಿದ ಜನತೆಗೆ,ಬೆಳೆಗೆ ನೀರಿಲ್ಲದೆ ಕಂಗಾಲಾಗಿದ್ದ ರೈತರಿಗೆ ಸುರಿದ ಮಳೆ ಆಶಾಭಾವನೆ ಮೂಡಿಸಿದೆ.

ಬಿರು ಬಿಸಿಲಿನಿಂದ ಬಿಸಿ ಭೂಮಿ ಮಳೆಯಿಂದ ತಂಪಾಯಿತು.ಅರ್ಧ ಗಂಟೆಗಳ ಕಾಲ ಸುರಿದ ಮಳೆ ಎಷ್ಟೋ ದಿನಗಳಿಂದ ಮಳೆಗಾಗಿ ಪ್ರಾರ್ಥನೆ ಮಾಡುವ ಜನರಲ್ಲಿ ಹರ್ಷ ಮೂಡಿಸಿದೆ.

ನಗರದ ಕಲ್ಲಹಳ್ಳಿ ಬಳಿ ಮೈಸೂರು-ಬೆಂಗಳೂರು ರಸ್ತೆಗೆ ಹಾಕಲಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯ ಸ್ವಾಗತ ಕಮಾನು ಜೋರಾಗಿ ಬೀಸಿದ ಗಾಳಿಗೆ ಮುರಿದು ಬಿದ್ದಿತು. ಇದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆ ಉಂಟಾಯಿತು.

ಜೋರಾಗಿ ಬೀಸಿದ ಗಾಳಿಗೆ ನಗರದ ಸುಭಾಷ್ ನಗರ,ಜಿಲ್ಲಾಧಿಕಾರಿ ಕಚೇರಿ ರಸ್ತೆ, ನ್ಯಾಯಾಲಯದ ರಸ್ತೆ ಮೊದಲಾದ ಕಡೆಗಳಲ್ಲಿ ಮರಗಳು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು.

ಕಳೆದ ಹಲವು ತಿಂಗಳಿನಿಂದ ಮಳೆಯಿಲ್ಲದೆ ಉಷ್ಣತೆ ಹೆಚ್ಚಾಗಿದ್ದು,ಜನರು ಬಿಸಿಲಿನ ತಾಪಕ್ಕೆ ಬೆಂದು ಬಸವಳಿದಿದ್ದರು.ಅರ್ಧ ಗಂಟೆ ಸುರಿದ ಮಳೆ ತಂಪಾದ ವಾತಾವರಣ ನಿರ್ಮಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!