Monday, May 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರದಲ್ಲಿ ಮುಳ್ಳಂದಿ ಸೆರೆ

ಮಂಡ್ಯ ನಗರದ ಕಲ್ಲಹಳ್ಳಿಯ ವಿವಿ ನಗರದ 23ನೇ ಕ್ರಾಸ್ ನಲ್ಲಿ ಮುಳ್ಳಂದಿಗಳು ಕಂಡು ಬಂದಿವೆ. ಅದರಲ್ಲಿ ಒಂದು ಮುಳ್ಳಂದಿಯನ್ನು ಅರಣ್ಯ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ಸೇರಿ‌ ಸೆರೆ ಹಿಡಿದಿದ್ದಾರೆ.

ಬಡಾವಣೆಯ ನಿವಾಸಿ ಅನೂಪ್ ಮಾತನಾಡಿ,ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅದರಂತೆ ನಗರ ಪ್ರದೇಶದಲ್ಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಗಿಡಗಂಟಿಗಳು ಬೆಳೆದಿರುವುದರಿಂದ ವನ್ಯಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ.

ನಮ್ಮ ಬಡಾವಣೆಯಲ್ಲಿ 3-4 ಮುಳ್ಳಂದಿಗಳು ಓಡಾಡುವ ಬಗ್ಗೆ ಬೆಳಿಗ್ಗೆ ವಾಕ್ ಮಾಡುವ ಜನರೇ ಹೇಳಿದ್ದರು.ಅದರಂತೆ ನಿನ್ನೆ ರಾತ್ರಿ 8.30 ರಲ್ಲಿ ಚರಂಡಿಯೊಳಗೆ ಮುಳ್ಳಂದಿ ಪ್ರತ್ಯಕ್ಷವಾದ ಕೂಡಲೇ ಸ್ಥಳೀಯ ನಾಗರೀಕರು ಮಾಹಿತಿ ನೀಡಿದರು.

ಆಗ ನಾವು ಅರಣ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿಗಳಿಗೆ ಕರೆ ಮಾಡಿದೆವು‌. ಅವರು ಬಲೆ ತಂದು ಮುಳ್ಳಂದಿ ಹಿಡಿದಿದ್ದಾರೆ. ಇದನ್ನು ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶಕ್ಕೆ ಬಿಡಲಿದ್ದಾರೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!