Saturday, May 18, 2024

ಪ್ರಾಯೋಗಿಕ ಆವೃತ್ತಿ

ಪತ್ರಕರ್ತರು ಆತ್ಮಸಾಕ್ಷಿಯಿಂದ ಕಾರ್ಯ ನಿರ್ವಹಿಸಿಲಿ – ಸಚಿವ ಎನ್.ಚಲುವರಾಸ್ವಾಮಿ

ಪತ್ರಕರ್ತರು ವರದಿ ಮಾಡುವಾಗ ಪೂರ್ವಗ್ರಹ ಪೀಡಿತರಾಗದೇ, ವಸ್ತು ನಿಷ್ಠತೆಯಿಂದ ಸತ್ಯಾಸತ್ಯಗಳನ್ನು ಪರಿಶೀಲಿಸಿ, ಆತ್ಮಸಾಕ್ಷಿಯಿಂದ ವರದಿ ಮಾಡಿದಾಗ ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಬಹುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಿವಿಮಾತು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಶನಿವಾರ ಮಂಡ್ಯನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ನಡೆದ ಸಾಧನೆಗೈದ ಪತ್ರಕರ್ತರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಸರ್ಕಾರ ಜನಸಾಮಾನ್ಯರನ್ನು ದೃಷ್ಠಿಯಲ್ಲಿಟ್ಟುಕೊಂಡು ಕೆಲಸ ನಿರ್ವಹಿಸುತ್ತದೆ, ಒಂದು ವೇಳೆ ನಾವು ಎಡವಿದಾಗ ಅದನ್ನು ಟೀಕಿಸಿ ಬರೆಯಿರಿ, ಹಾಗೇಯೇ ನಾವು ಉತ್ತಮವಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಾದ ಅದನ್ನು ಪ್ರಶಂಸಿಸುವ ಕೆಲಸವನ್ನು ಪರ್ತಕರ್ತರು ಮಾಡಬೇಕು ಎಂದರು.

ಪರ್ತಕರ್ತರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಸಿದ್ದವಿದೆ, ಜಿಲ್ಲಾ ಪರ್ತಕರ್ತರ ಕ್ಷೇಮನಿಧಿಗೆ ಮುಖ್ಯಮಂತ್ರಿಗಳ ನಿಧಿಯಿಂದ ₹ 10 ಲಕ್ಷಗಳನ್ನು ಕೊಡಿಸಲು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದಕೆ.ವಿ.ಪ್ರಭಾಕರ್ ಅವರು ಶಕ್ತರಿದ್ದಾರೆ. ಅಗತ್ಯಬಿದ್ದರೆ ಮುಖ್ಯಮಂತ್ರಿಗಳ ಜತೆ ನಾನು ಮಾತುಕತೆ ನಡೆಸಿ, ಕ್ಷೇಮನಿಧಿಗೆ ಹಣ ದೊರಕಿಸಿಕೊಡುತ್ತೇನೆಂದು ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಕಳೆದ ಬಜೆಟ್ ನಲ್ಲಿ ಸರ್ಕಾರ ಪರ್ತಕರ್ತರ ಪಂಚಣಿಯನ್ನು ₹10 ಸಾವಿರದಿಂದ ₹12 ಸಾವಿರಕ್ಕೆ ಹೆಚ್ಚಿಸಿದೆ, ಅಲ್ಲದೇ ನಿಧನರಾದ ಪತ್ರಕರ್ತರ ಕುಟುಂಬಕ್ಕೆ ಸಿಗುತ್ತಿದ್ದ ಪಿಂಚಣಿಯನ್ನು ₹3 ಸಾವಿರದಿಂದ ₹6 ಸಾವಿರಕ್ಕೆ ಹೆಚ್ಚಳ ಮಾಡಿದೆ, ಮುಂಬರುವ ದಿನಗಳಲ್ಲಿ ಪತ್ರಕರ್ತರಿಗೆ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ, ಯಶಸ್ವಿನಿ ಯೋಜನೆಯನ್ನು ಪರ್ತಕರ್ತರಿಗೆ ವಿಸ್ತರಿಸಬೇಕೆನ್ನುವ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಮೂಲತಃ ಪತ್ರಕರ್ತರಾಗಿ ಮಂಡ್ಯ ಶಾಸಕರಾಗಿರುವ ರವಿಕುಮಾರ್ ಗಣಿಗ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ಕಾರ್ಯಾಲಯದ ಕಾರ್ಯದರ್ಶಿ ಎನ್.ಜಯರಾಂ, ಉಪಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪಿ.ತ್ಯಾಗರಾಜು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸೋಮಶೇಖರ್ ಕೆರಗೋಡು, ಡಿ.ಎಲ್.ಲಿಂಗಣ್ಣ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ಮುಖ್ಯಮಂತ್ರಿಗಳ ಕಾರ್ಯಾಲಯದ ಕಾರ್ಯದರ್ಶಿ ಎನ್.ಜಯರಾಂ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ವಾರ್ತಾಧಿಕಾರಿ, ನಿರ್ಮಲ, ಹಿರಿಯ ಪರ್ತಕರ್ತ ಪಿ.ಜೆ.ಚೈತನ್ಯ ಕುಮಾರ್, ಮತ್ತೀಕೆರೆ ಜಯರಾಂ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!